ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ವಲಸಿಗರಿಗೆ ದುಬಾರಿ ನಗರ: ಮುಂಬೈಗೆ ಮೊದಲ ಸ್ಥಾನ, ಬೆಂಗಳೂರಿಗೆ ಎಷ್ಟನೇ ಸ್ಥಾನ ತಿಳಿಯಿರಿ

|
Google Oneindia Kannada News

ಭಾರತದಲ್ಲಿ ವಲಸಿಗರಿಗೆ ದುಬಾರಿ ನಗರಗಳ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನ ಪಡೆದುಕೊಂಡಿದೆ. ಮರ್ಸರ್ಸ್ ಕಾಸ್ಟ್ ಆಫ್ ಲಿವಿಂಗ್ ಸಮೀಕ್ಷೆ ಮಾಡಿದ್ದು, ಭಾರತದಲ್ಲಿ ವಲಸಿಗರಿಗೆ ದುಬಾರಿ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನ ಪಡೆದುಕೊಂಡಿದ್ದು, ನವದೆಹಲಿ ಮತ್ತು ಬೆಂಗಳೂರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿದ್ದವು. ಮರ್ಸರ್ಸ್ ಕಾಸ್ಟ್ ಆಫ್ ಲಿವಿಂಗ್ ವಿಶ್ವಾದ್ಯಂತ 227 ನಗರಗಳಲ್ಲಿ ಸಮೀಕ್ಷೆ ಮಾಡಿದೆ. ಜಾಗತಿಕವಾಗಿ ವಲಸಿಗರಿಗೆ ದುಬಾರಿ ನಗರಗಳಲ್ಲಿ ಮುಂಬೈ 147ನೇ ಸ್ಥಾನ ಪಡೆದುಕೊಂಡಿದೆ.

 Mumbai Ranked Most Expensive City In India For Expatriates: Bengaluru In 3rd Place

ಜಾಗತಿಕವಾಗಿ ವಲಸಿಗರಿಗೆ ದುಬಾರಿ ನಗರಗಳ ಪಟ್ಟಿಯಲ್ಲಿ ಚೆನ್ನೈ 184ನೇ ಸ್ಥಾನದಲ್ಲಿದ್ದರೆ, ಬೆಂಗಳೂರು 189, ಹೈದರಾಬಾದ್ 202, ಕೋಲ್ಕತ್ತಾ 211 ಮತ್ತು ಪುಣೆ 213ನೇ ಸ್ಥಾನದಲ್ಲಿವೆ. ಜಾಗತಿಕವಾಗಿ, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಜ್ಯೂರಿಚ್ ಈ ವರ್ಷ ಅಂತರರಾಷ್ಟ್ರೀಯ ಉದ್ಯೋಗಿಗಳಿಗೆ ಅತ್ಯಂತ ದುಬಾರಿ ನಗರಗಳಾಗಿವೆ ಎಂದು ವರದಿ ಹೇಳಿದೆ. ದುಬಾರಿ ನಗರವೆಂದು ನಿರ್ಧರಿಸುವಾಗ ವಸತಿ, ಸಾರಿಗೆ, ಆಹಾರ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆ ಸೇರಿದಂತೆ ಪ್ರತಿ ಸ್ಥಳದಲ್ಲಿ 200 ಕ್ಕೂ ಹೆಚ್ಚು ವಸ್ತುಗಳ ವೆಚ್ಚವನ್ನುಗಣನೆಗೆ ತೆಗೆದುಕೊಳ್ಳಲಾಗಿದೆ.

ವಂಚನೆ ಆರೋಪ ಸಂಬಂಧ ಬೆಂಗಳೂರು-ದಾವಣಗೆರೆಯ 7 ಕಡೆ ED ದಾಳಿವಂಚನೆ ಆರೋಪ ಸಂಬಂಧ ಬೆಂಗಳೂರು-ದಾವಣಗೆರೆಯ 7 ಕಡೆ ED ದಾಳಿ

ಸಂಬಳ ನಿರ್ಧರಿಸಲು ಸಹಾಯ

ಉದ್ಯೋಗದಾತರು ಅಂತರರಾಷ್ಟ್ರೀಯ ನಿಯೋಜಿತರಿಗೆ ಸಮರ್ಥ ಮತ್ತು ಪಾರದರ್ಶಕ ಪರಿಹಾರ ಪ್ಯಾಕೇಜ್‌ಗಳನ್ನು ವಿನ್ಯಾಸಗೊಳಿಸಲು ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಯನ್ನು ಈ ಸಮೀಕ್ಷೆ ನೀಡುತ್ತದೆ. ವಿಶ್ವಾದ್ಯಂತ 400 ಕ್ಕೂ ಹೆಚ್ಚು ನಗರಗಳಲ್ಲಿ ದಕ್ಷ ಮತ್ತು ಸಮಾನ ಪರಿಹಾರ ಪ್ಯಾಕೇಜ್‌ಗಳನ್ನು ವಿನ್ಯಾಸಗೊಳಿಸಲು ಇದು ಅಂತರರಾಷ್ಟ್ರೀಯ ಉದ್ಯೋಗದಾತರಿಗೆ ಸಹಾಯ ಮಾಡುತ್ತದೆ.

ಇನ್ನು ಜಗತ್ತಿನಲ್ಲಿ ಕಡಿಮೆ ಜೀವನ ವೆಚ್ಚ ಹೊಂದಿರುವ ನಗರಗಳಲ್ಲಿ ಹವಾನಾ ಕಳೆದ ವರ್ಷದ ಮಧ್ಯದಲ್ಲಿ ಬಲವಾದ ಕರೆನ್ಸಿ ಅಪಮೌಲ್ಯೀಕರಣದ ಕಾರಣದಿಂದಾಗಿ 83 ಸ್ಥಾನಗಳನ್ನು ಕಳೆದುಕೊಂಡಿದೆ, ಪಾಕಿಸ್ತಾನದ ಕರಾಚಿ ಮತ್ತು ಇಸ್ಲಾಮಾಬಾದ್ ಕೂಡ ಸ್ಥಾನಗಳನ್ನು ಕಳೆದುಕೊಂಡಿವೆ.

ಭಾರತೀಯ ನಗರಗಳಲ್ಲಿ, ಮುಂಬೈ ಹೊರತುಪಡಿಸಿ, ಇತರ ಸಮೀಕ್ಷೆಯ ನಗರಗಳಾದ ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಮತ್ತು ಪುಣೆ ಮುಂಬೈಗಿಂತ 50 ಪ್ರತಿಶತದಷ್ಟು ಕಡಿಮೆ ಮನೆ ವೆಚ್ಚವನ್ನು ಹೊಂದಿವೆ. ಈ ನಗರಗಳಲ್ಲಿ, ಕೋಲ್ಕತ್ತಾದಲ್ಲಿ ವಲಸಿಗರಿಗೆ ವಸತಿ ಸೌಕರ್ಯಗಳ ಕಡಿಮೆ ವೆಚ್ಚದಲ್ಲಿ ಸಿಗುತ್ತವೆ, ನಿವಾಸಿಗಳು ಮತ್ತು ವಲಸಿಗರಿಗೆ ಹೆಚ್ಚು ಕೈಗೆಟುಕುವ ಆಯ್ಕೆಯನ್ನು ಒದಗಿಸುತ್ತದೆ ಎಂದು ವರದಿ ಹೇಳಿದೆ.

English summary
Mumbai has been ranked as the most expensive city in India for expatriates, according to Mercer's Cost of Living report. Mumbai ranked 147th globally, while other Indian cities like New Delhi, Chennai, Bengaluru, Hyderabad, Kolkata, and Pune also featured on the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X