Mumbai-Pune Expressway Toll Fee: ಏಪ್ರಿಲ್ 1ರಿಂದಲೇ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಹೊಸ ನಿಯಮ ಜಾರಿ
Mumbai-Pune Expressway Toll Fee: ಪ್ರತಿ ತಿಂಗಳು ಒಂದಲ್ಲ ಒಂದು ನಿಯಮಗಳಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಇನ್ನೂ ಮಾರ್ಚ್ ಮುಗಿದು ಏಪ್ರಿಲ್ ಎಟ್ರಿಯಾಗಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಯಿಕಿದ್ದು, ಈ ತಿಂಗಳಲ್ಲಿ ಹಲವು ಬದಲಾವಣೆಗಳು ಆಗಲಿದೆ. ಹಾಗೆಯೇ ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ ಈ ನಿಯಮಗಳನ್ನು ಪಾಲನೆ ಮಾಡದಿದ್ದೆ ಹೆಚ್ಚುವರಿ ಶುಲ್ಕ ಕಟ್ಟಬೇಕಾಗುತ್ತದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಮುಂಬೈನ ಟೋಲ್ ಪ್ಲಾಜಾಗಳಲ್ಲಿ ಏಪ್ರಿಲ್ 1, 2025ರಿಂದ ಹೊಸ ಫಾಸ್ಟ್‌ಟ್ಯಾಗ್ ನಿಯಮಗಳು ಜಾರಿಗೆ ಬರಲಿವೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಈ ಹೊಸ ನಿಯಮಗಳನ್ನು ಜಾರಿ ಮಾಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೊಸ ನಿಯಮಗಳ ಪ್ರಕಾರ, ಮುಂಬೈನ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಟೋಲ್ ಪಾವತಿ ಮಾಡಬಹುದು. ಫಾಸ್ಟ್‌ಟ್ಯಾಗ್ ಇಲ್ಲದೆ, ಟೋಲ್ ಪ್ಲಾಜಾ ಮೂಲಕ ಹಾದು ಹೋದರೆ, ಪ್ರಯಾಣಿಕರು ದುಪ್ಪಟ್ಟು ಟೋಲ್ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಆದರೆ, ಶಾಲಾ ಬಸ್‌ಗಳು, ಲಘು ಮೋಟಾರು ವಾಹನಗಳು ಮತ್ತು ರಾಜ್ಯ ಸಾರಿಗೆ ಬಸ್‌ಗಳಿಗೆ ಫಾಸ್ಟ್‌ಟ್ಯಾಗ್‌ನಿಂದ ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿ ಮುಲುಂಡ್ ವೆಸ್ಟ್, ಮುಲುಂಡ್ ಈಸ್ಟ್, ಐರೋಲಿ, ದಹಿಸರ್ ಮತ್ತು ವಾಶಿ ಟೋಲ್ ಪ್ಲಾಜಾಗಳಿಗೆ ಮಾತ್ರ ಅನ್ವಯಿಸುತ್ತದೆ.
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ, ಹಳೆಯ ಮುಂಬೈ-ಪುಣೆ ಹೆದ್ದಾರಿ ಮತ್ತು ಮುಂಬೈ-ನಾಗಪುರ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ. ಪ್ರಯಾಣಿಕರು ಪೇಟಿಎಂ, ಅಮೆಜಾನ್, ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಫಾಸ್ಟ್‌ಟ್ಯಾಗ್ ಅನ್ನು ಖರೀದಿ ಮಾಡಬಹುದು. ಫೋನ್ ಪೇ, ಗೂಗಲ್ ಪೇ ಮತ್ತು ಅಮೆಜಾನ್ ಪೇನಂತಹ ಪಾವತಿ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಆಯ್ಕೆಗಳು ಲಭ್ಯ ಇವೆ.
ಫಾಸ್ಟ್‌ಟ್ಯಾಗ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದರೆ, ರೀಚಾರ್ಜ್ ಮಾಡಿದರೂ ಸಹ ಹೆಚ್ಚಿನ ಪ್ರಮಾಣದಲ್ಲಿ ಟೋಲ್ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ, ಪ್ರಯಾಣಿಕರು ತಮ್ಮ ಫಾಸ್ಟ್‌ಟ್ಯಾಗ್ ಅನ್ನು ಮುಂಚಿತವಾಗಿ ರೀಚಾರ್ಜ್ ಮಾಡುವುದು ಉತ್ತಮ. ಈ ಹೊಸ ನಿಯಮಗಳು ದಟ್ಟಣೆ ನಿಯಂತ್ರಿಸಲು ಮತ್ತು ತೊಂದರೆ ಇಲ್ಲದ ಟೋಲ್ ವಹಿವಾಟುಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿವೆ. ಅಲ್ಲದೆ, ಇದರಿಂದ ವಾಹನಸ ವಾರರ ಸಮಯ ಕೂಡ ಉಳಿತಾಯವಾಗಲಿದೆ ಎಂದು ಹೇಳಲಾಗುತ್ತದೆ.
ನಿತಿನ್ ಗಡ್ಕರಿ ಹೇಳಿದ್ದೇನು?: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಸಂಗ್ರಹವು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಶಾಶ್ವತವಾಗಿ ಮುಂದುವಯಲಿದೆ. ಅದನ್ನು ಸ್ಥಗಿತಗೊಳಿಸುವ ಪ್ರಸ್ತಾಪಗಳು ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ಡಿಎಂಕೆ ರಾಜ್ಯಸಭಾ ಸದಸ್ಯ ಪಿ.ವಿಲ್ಸನ್ ಅವರು, ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ಮಾಡಲಾದ ಹೂಡಿಕೆ ಮತ್ತು ಸಂಗ್ರಹಿಸಿದ ಹಣದ ಲೆಕ್ಕ ಪರಿಶೋಧನೆ ಮಾಡಲಾಗುತ್ತಿದೆಯೇ ಹಾಗೂ ಟೋಲ್ ಶುಲ್ಕವನ್ನು ಇಳಿಕೆ ಮಾಡುವ ಇಲ್ಲವೇ ಟೋಲ್ ಪ್ಲಾಜಾಗಳನ್ನು ಮುಚ್ಚುವ ಪ್ರಸ್ತಾಪಗಳಿವೆಯೇ ಎಂದು ಪ್ರಶ್ನೆ ಕೇಳಿದದರು. ಇದಕ್ಕೆ ನಿತಿನ್ ಗಡ್ಕರಿ ಅವರು ಉತ್ತರವನ್ನೂ ಕೂಡ ಕೊಟ್ಟಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವ ನಿತಿನ್ ಗಡ್ಕರಿ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರಿಂದ ಟೋಲ್ ಶುಲ್ಕವನ್ನು ನಿರಂತರವಾಗಿ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಹಣದ ಹೂಡಿಕೆ ಹಾಗೂ ಸಂಗ್ರಹಿಸಿದ ಹಣ, ಶುಲ್ಕ ಕಡಿಮೆ ಮಾಡುವ ಪ್ರಶ್ನೇಯೇ ಇಲ್ಲ. ಅಲ್ಲದೆ, ಟೋಲ್‌ಗಳನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಉತ್ತರಿಸಿದರು.












Click it and Unblock the Notifications