ಜಗತ್ತಿನ ದುಬಾರಿ ನಗರಗಳಲ್ಲಿ ಮುಂಬೈಗೆ 2ನೇ ಸ್ಥಾನ!

Posted By:
Subscribe to Oneindia Kannada

ಭಾರತದ ವಾಣಿಜ್ಯ ನಗರಿ ಮುಂಬೈ, ಜಗತ್ತಿನ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಆಕ್ಸ್ ಫರ್ಡ್ ಎಕನಾಮಿಕ್ಸ್ ಸಂಸ್ಥೆಯು ನಡೆಸಿರುವ ಈ ಸಮೀಕ್ಷಾ ವರದಿಯಲ್ಲಿ ಮುಂಬೈ ಭಾರತದ ಅತ್ಯಂತ ದುಬಾರಿ ನಗರವೆಂದೂ ಪರಿಗಣಿಸಲ್ಪಟ್ಟಿದೆ.

ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಹಾಂಕಾಂಗ್ ಇದ್ದರೆ, ಮೂರನೇ ಸ್ಥಾನದಲ್ಲಿ ಬೀಜಿಂಗ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಶಾಂಘೈ ಇದೆ.

ವರ್ಷಗಳೇ ಬೇಕು ವಾಸಕ್ಕೊಂದು ಜಾಗ ಕೊಳ್ಳಲು

ವರ್ಷಗಳೇ ಬೇಕು ವಾಸಕ್ಕೊಂದು ಜಾಗ ಕೊಳ್ಳಲು

ಸಮೀಕ್ಷೆಯ ಪ್ರಕಾರ, ಮುಂಬೈನಲ್ಲಿ 90 ಸ್ಕ್ವಯರ್ ಮೀಟರ್ (970 ಚದುರಡಿ) ಜಾಗ ಖರೀದಿಸಬೇಕೆಂದರೆ ಇಂದಿನ ದರ ಪ್ರಕಾರ, ಮಧ್ಯಮ ಹಂತದ ವರಮಾನವಿರುವ ಕುಟುಂಬಕ್ಕೆ ಏನಿಲ್ಲವೆಂದರೂ ಕನಿಷ್ಠ 30 ವರ್ಷ ಬೇಕು.

ಯಾರಿಗೆ ಸಾಲುತ್ತೆ ಸಂಬಳ

ಯಾರಿಗೆ ಸಾಲುತ್ತೆ ಸಂಬಳ

ಮುಂಬೈನಲ್ಲಿ ಮನೆ ಬಾಡಿಗೆ ಕಡಿಮೆ ಎನ್ನುವುದು ವಾಡಿಕೆ. ಆದರೆ, ಇಲ್ಲಿನ ಮಧ್ಯಮ ವರ್ಗದ ಜನರ ಸರಾಸರಿ ವರಮಾನಕ್ಕೆ ಅನುಗುಣವಾಗಿ ಯೋಚಿಸಿದರೆ, ಟೋಕಿಯೋ, ನ್ಯೂಯಾರ್ಕ್ ಗಳಲ್ಲಿರುವ ಮನೆ ಬಾಡಿಗೆಗಳಿಗಿಂತ ಹೆಚ್ಚು ಎನ್ನಲಾಗಿದೆ.

ಇರಲು ಜಾಗವಿಲ್ಲದಂಥ ಪರಿಸ್ಥಿತಿ

ಇರಲು ಜಾಗವಿಲ್ಲದಂಥ ಪರಿಸ್ಥಿತಿ

ವರ್ಷದಿಂದ ವರ್ಷಕ್ಕೆ ಉದ್ಯೋಗ ಮತ್ತಿತರ ಕಾರಣಗಳಿಗಾಗಿ ಇಲ್ಲಿಗೆ ವಲಸೆ ಬರುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಸತಿ ಸೌಕರ್ಯ ನೀಡಲು ಈ ನಗರಕ್ಕೆ ಸಾಧ್ಯವಾಗುತ್ತಿಲ್ಲ. ಇದೇ ಮನೆ ಬಾಡಿಗೆ ಏರಿಕೆಗೆ ಕಾರಣವೆಂದು ಹೇಳಲಾಗಿದೆ.

ಮೂಲ ಸೌಕರ್ಯಕ್ಕೆ ಪೈಪೋಟಿ

ಮೂಲ ಸೌಕರ್ಯಕ್ಕೆ ಪೈಪೋಟಿ

ಮೊದಲೇ ವಾಣಿಜ್ಯ ಕೇಂದ್ರವಾಗಿರುವುದರಿಂದ ಎಲ್ಲೆಲ್ಲೂ ಮೂಲಸೌಕರ್ಯಗಳ ಕೂಗು ಇದ್ದೇ ಇದೆ ಈ ನಗರದಲ್ಲಿ. ಕೆಲವಾರು ವೈಭವೋಪೇತ ಪ್ರದೇಶಗಳಲ್ಲಿ ಸೌಕರ್ಯಗಳಿಗೆ ಪೈಪೋಟಿಯಿಲ್ಲ. ಆದರೆ, ಮಧ್ಯಮವರ್ಗ, ಬಡವರು ವಾಸಿಸುವ ಪ್ರದೇಶಗಳಲ್ಲಿ ಇದಕ್ಕೆ ಪೈಪೋಟಿಯಿದ್ದು ಬೆಲೆ ಏರಿಕೆಗೆ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಏಷ್ಯಾದಲ್ಲೇ ದುಬಾರಿ ಎನಿಸಲಿದೆಯೇ ಮುಂಬೈ?

ಏಷ್ಯಾದಲ್ಲೇ ದುಬಾರಿ ಎನಿಸಲಿದೆಯೇ ಮುಂಬೈ?

ಸದ್ಯಕ್ಕೆ ಮುಂಬೈ ನಗರವು ಭಾರತದಲ್ಲೇ ಅತಿ ದುಬಾರಿ ಎಂದೆನಿಸಿದೆ. ಆದರೆ, ಇದು ಇಷ್ಟಕ್ಕೇ ತಟಸ್ಥವಾಗುವುದಿಲ್ಲ. ಮುಂಬರುವ ವರ್ಷಗಳಲ್ಲಿ ಏಷ್ಯಾದ ಅತಿ ದುಬಾರಿ ನಗರವಾಗಿಯೂ ಇದು ರೂಪುಗೊಳ್ಳುವ ಅವಕಾಶಗಳಿವೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai city emerged as the one among the top four costliest cities in the world and is in top two position after Hong Kong. Beijing and Shanghai follow mumbai in the list.
Please Wait while comments are loading...