ಬೆಂಗಳೂರು, ಮುಂಬೈ, ದೆಹಲಿ ಸ್ಮಾರ್ಟ್ ಸಿಟಿಗಳಲ್ಲ: ಸಮೀಕ್ಷೆ

Posted By:
Subscribe to Oneindia Kannada

ಬೆಂಗಳೂರು, ಮೇ 31: ನೂರಾರು ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ ಸಿಟಿ ವಿನ್ಯಾಸಗೊಳಿಸಲು ಮೋದಿ ಸರ್ಕಾರ ಪ್ರಯಾಸ ಪಡುತ್ತಿದೆ. ಈ ನಡುವೆ ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಸ್ಮಾರ್ಟ್ ಸಿಟಿಗಳಲ್ಲ ಎಂದು ಸಮೀಕ್ಷಾ ವರದಿ ಹೇಳಿದೆ.

2016ರ ಸಿಟೀಸ್ ಇನ್ ಮೋಷನ್ ಇಂಡೆಕ್ಸ್ (ಸಿಐಎಂಐ), ಬಾರ್ಸಿಲೋನಾದಲ್ಲಿರುವ ನವರ್ರರಾ ವಿಶ್ವವಿದ್ಯಾಲಯ ಮತ್ತು ಸೆಂಟರ್ ಫಾರ್ ಗ್ಲೋಬಲೈಸೇಷನ್ ಅನದ ಸ್ಟ್ರೆಟರ್ಜಿ ಜಂಟಿಯಾಗಿ ನಡೆಸಿದ್ ಸಮೀಕ್ಷಾ ವರದಿಯಿಂದ ಈ ವಿಷಯ ಬಹಿರಂಗವಾಗಿದೆ.[ವೆಂಕಯ್ಯ, ಸ್ಮಾರ್ಟ್ ಸಿಟಿಗಳು ಇನ್ನೂ ಬೇಕಯ್ಯ!]

Mumbai, Delhi, Bangaluru not really smartcity: CIMI IESE survey

ಭಾರತದ ಪ್ರಮುಖ ನಗರಗಳು ಜಾಗತಿಕವಾಗಿ ಅತ್ಯಂತ ಕಡಿಮೆ ಅಂಕ ಗಳಿಸಿ ಶ್ರೇಯಾಂಕ ಪಟ್ಟಿಯಲ್ಲಿ ಕೆಳಗಿವೆ. ಆರ್ಥಿಕತೆ, ಜನಸಂಖ್ಯೆ, ತಂತ್ರಜ್ಞಾನ, ಪರಿಸರ, ಅಂತಾರಾಷ್ಟ್ರೀಯ ಸಂಪರ್ಕ, ಆಡಳಿತ, ನಗರ ಯೋಜನೆ, ನಾಗರೀಕರ ನಿರ್ವಹಣೆ, ಸಾಮಾಜಿಕ ಒಗ್ಗಟ್ಟು, ನಗರದ ಚಲನ ಶೀಲತೆ (ಮೊಬಿಲಿಟಿ) ಮತ್ತು ರಸ್ತೆ ಹಾಗೂ ಸಂಪರ್ಕ ವ್ಯವಸ್ಥೆ ಈ ಹತ್ತು ಅಂಶಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ.[ಸ್ಮಾರ್ಟ್ ಸಿಟಿಗಳ ಮೊದಲ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ]

ಒಟ್ಟು 181 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅಮೆರಿಕದ ನ್ಯೂಯಾರ್ಕ್ ಮೊದಲ ಸ್ಥಾನ ಪಡೆದಿದ್ದರೆ, ಲಂಡನ್, ಪ್ಯಾರಿಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೋಸ್ಟನ್ ನಂತರದ ಸ್ಥಾನಗಳಲ್ಲಿವೆ. [ಅಮೃತ್ ಯೋಜನೆಯಡಿ ಬೆಂಗಳೂರಿಗೆ ಹೆಚ್ಚು ಅನುದಾನ]

ಭಾರತದ ನಗರಗಳ ಪೈಕಿ ನವದೆಹಲಿ 174ನೇ ಸ್ಥಾನ, ಬೆಂಗಳೂರು 176ನೇ ಸ್ಥಾನ, ಕೋಲ್ಕತಾ 179ನೇ ಸ್ಥಾನ ಪಡೆದಿವೆ. ಮುಂಬೈ 167ನೇ ಸ್ಥಾನ ಪಡೆದಿದೆ. ನೈಜೀರಿಯಾದ ಲಾಗೋಸ್ ನಗರ 180ನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಕರಾಚಿ 181ನೇ ಸ್ಥಾನ ಪಡೆದಿದೆ.

ಎನ್​ಡಿಎ ಸರ್ಕಾರ 2022ರೊಗಳಗೆ 100 ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸುವುದಾಗಿ ಘೊಷಿಸಿದೆ. ಹಂತ ಹಂತವಾಗಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಎನ್ ಡಿಎ ಸರ್ಕಾರ ಘೋಷಣೆ ಮಾಡಿರುವ ಸ್ಮಾರ್ಟ್ ಸಿಟಿಗಳ ಪಟ್ಟಿ(33)ಯಲ್ಲಿ ಈ ಎಲ್ಲಾ ನಗರಗಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
According to a recent survey, 2016 Cities in Motion Index (CIMI), prepared jointly by IESE Business School and the Centre for Globalisation and Strategy, the top four Indian cities of Mumbai, Bangaluru, Delhi and Kolkata were at the bottom of a global livability survey of 181 cities.
Please Wait while comments are loading...