ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸನ್ಮುಖಿ ವಸುಂಧರೆಯ ಮಡಿಲಲ್ಲಿ ನಿಗಿನಿಗಿ ಜ್ವಾಲಾಮುಖಿ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 26 : ಸರಿಯಾಗಿ 7 ವರ್ಷಗಳ ಹಿಂದೆ ಇದೇ ದಿನಗಳಲ್ಲಿ ಮುಂಬೈ ಮೇಲೆ ದಾಳಿ ಮಾಡಿದ ಉಗ್ರರ ಮೇಲೆ ಮುಗಿಬಿದ್ದು ಹುತಾತ್ಮರಾದ ವೀರಯೋಧರಿಗೆ ಹೆಮ್ಮೆಯ, ಭಾವುಕತೆಯ ಸೆಲ್ಯೂಟ್. ತದನಂತರ ಇಂತಹ ಭೀಕರ ದಾಳಿಗಳಾಗಿಲ್ಲ. ಆದರೆ, ಇಂದಿನ ದಿನಗಳಲ್ಲಿ ನಾವು ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಕೇಳಿಕೊಳ್ಳಲೇಬೇಕಾಗಿದೆ.

ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಭಾರತ ಸಾಕಷ್ಟು ಶ್ರಮ ವಹಿಸಿದೆ ಅನ್ನುವಷ್ಟರಲ್ಲೇ, ಮುಂಬೈ ದಾಳಿಯ ಮಾದರಿಯಲ್ಲಿ ಪ್ಯಾರಿಸ್ ಮೇಲೆ ಹತ್ಯಾಕಾಂಡ ಸಂಭವಿಸಿರುವುದು, ಉಗ್ರವಾದ ಕುರಿತು ನಮ್ಮ ನಿಲುವನ್ನು ಮತ್ತೆ ಪರಾಮರ್ಶಿಸಿಕೊಳ್ಳುವಂಥ ಸಂದರ್ಭ ತಂದೊದಗಿಸಿದೆ. ಡೇಂಜರಸ್ ಐಎಸ್ಐಎಸ್ ನಿಂದಾಗಿ ವಿಶ್ವವಿಂದು ಥರಥರ ಅನ್ನುತ್ತಿದೆ. [26/11 ದಾಳಿ ಪಕ್ಕಕ್ಕಿಟ್ಟು ತಾಜ್ ನಲ್ಲಿ ಚಾ ಕುಡಿಯೋಣ ಬನ್ನಿ]

Mumbai attacks and its aftermath- The world is a very dangerous today

ಪ್ಯಾರಿಸ್ ದಾಳಿ ಕಲಿಸಿದ ಪಾಠವೇನು?

ಪ್ಯಾರಿಸ್ ದಾಳಿಯ ನಂತರ ಯಾವ ವಿಷಯ ವಿದಿತವಾಗಿದೆಯೆಂದರೆ, ವಿಶ್ವದಲ್ಲಿನ ಯಾವುದೇ ನಗರದ ಮೇಲೆ ಇದೇ ರೀತಿಯ ದಾಳಿ ನಡೆಯಬಹುದು. ನೂರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಅದು ಬೇಕಾಬಿಟ್ಟಿ ನಡೆಸಿದ ದಾಳಿಯಲ್ಲ. ಅತ್ಯಂತ ಕರಾರುವಾಕ್ಕಾಗಿ ಮತ್ತು ವ್ಯವಸ್ಥಿತವಾಗಿ ರೂಪಿಸಿದಂಥ ಡೆಡ್ಲಿ ದಾಳಿ. ಐಸಿಸ್ ನಿರ್ನಾಮವಾಗದಿದ್ದರೆ ಶತ್ರು ದೇಶಕ್ಕೆ ಉಳಿಗಾಲವಿಲ್ಲ.

ಮುಂಬೈ ಮೇಲೆ ದಾಳಿ ನಡೆಸಿದ ಲಷ್ಕರ್-ಇ-ತಯ್ಬಾ ಕಡಿಮೆ ಶಕ್ತಿಶಾಲಿ ಸಂಘಟನೆಯೇನಲ್ಲ. ಜಗತ್ತಿನಾದ್ಯಂತ ತನ್ನ ಬಾಹುಗಳನ್ನು ಈಗಾಗಲೆ ಪಸರಿಸಿಕೊಳ್ಳುತ್ತಿದೆ. ಈ ಕನಸು ನನಸು ಮಾಡಿಕೊಳ್ಳಲು ಸಾಜಿದ್ ಮಿರ್ ನನ್ನು ನೇಮಿಸಿತ್ತು. ಆದರೆ, 2008ರ ಮುಂಬೈ ದಾಳಿಯ ನಂತರ ತುಸು ಮೆತ್ತಗಾಯಿತು. [ಉಗ್ರ ಕಸಬ್ ಹಿಡಿದ ಓಂಬಳೆ ಸಾಹಸ ಸ್ಮರಣೀಯ]

ಆದರೆ, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಲಷ್ಕರ್ ಹಿಮ್ಮೆಟ್ಟುವಂತೆ ಮಾಡಲು ತಯಾರಿಲ್ಲ. ಭಾರತದ ಮೇಲೆ ದಾಳಿ ನಡೆಸಲು ಲಷ್ಕರನ್ನು ಐಸಿಸ್ ಪುಸಲಾಯಿಸುತ್ತಲೇ ಇದೆ. ಕಾಶ್ಮೀರಕ್ಕಾಗಿ ಲಷ್ಕರನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಲೇ ಇದೆ ಮತ್ತು ಅಫಘಾನಿಸ್ತಾನದಲ್ಲಿ ತಾಲಿಬಾನ್‌ಗೂ ಬೆಂಬಲಿಸುತ್ತಿದೆ. ಅಂದುಕೊಂಡಿದ್ದಿಕ್ಕಿಂತ ಐಸಿಸ್ ಇಂದು ಬಲಶಾಲಿಯಾಗಿದೆ. [ಅಜ್ಮಲ್ ಕಸಬ್ ಗಿಂತ ಮೊದಲು ಗಲ್ಲಿಗೇರಿದ್ದು ಯಾರು?]

ಉಗ್ರ ಸಂಘಟನೆಗಳೆಲ್ಲ ಒಟ್ಟಾಗುವವೆ?

ಈ ಎಲ್ಲ ಉಗ್ರ ಸಂಘಟನೆಗಳೆಲ್ಲ ಒಟ್ಟುಗೂಡಿ ಜಗತ್ತಿನ ನಿದ್ದೆಯನ್ನು ಮತ್ತಷ್ಟು ಕೆಡಿಸಲಿವೆ ಎಂಬ ಮಾತು ಚಾಲ್ತಿಯಲ್ಲಿದೆ. ಪಾಕ್ ಗುಪ್ತಚರ ಇಲಾಖೆಯ ಹಿಡಿತದಲ್ಲಿರುವ ಲಷ್ಕರ್ ಮತ್ತು ಐಸಿಸ್ ಒಟ್ಟಾಗುವ ಸೂಚನೆಗಳು ಸದ್ಯಕ್ಕೆ ಕಾಣಿಸದಿದ್ದರೂ, ಐಎಸ್ಐಎಸ್ ನಡೆಸಿರುವ ಎಲ್ಲ ದಾಳಿಗಳನ್ನು ಲಷ್ಕರ್ ಸಮರ್ಥಿಸಿಕೊಂಡಿರುವುದು ಚಿಂತನೀಯ ವಿಷಯವಾಗಿದೆ.

ಆದರೆ, ಯೆಮನ್, ಅಫಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಪ್ರಬಲವಾಗಿರುವ ಅಲ್ ಖೈದಾದಿಂದ ಸಿಡಿದಿದ್ದ ಐಎಸ್ಐಎಸ್ ಮತ್ತೆ ಅಲ್ ಖೈದಾ ಜೊತೆ ಕೈಜೋಡಿಸುವ ಸೂಚನೆಗಳು ದಟ್ಟವಾಗಿ ಕಾಣುತ್ತಿವೆ. ಹಲವಾರು ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ತೊಡೆ ತಟ್ಟಿರುವುದರಿಂದ ಬಲ ವರ್ಧಿಸಿಕೊಳ್ಳಲು ಅಲ್ ಖೈದಾದೊಂದಿಗೆ ಐಎಸ್ಐಎಸ್ ಕೈಮಿಲಾಯಿಸುವುದನ್ನು ತಳ್ಳಿಹಾಕುವಂತಿಲ್ಲ.

English summary
India today observes another 26/11 anniversary. While saluting the brave who gave up their lives fighting the terrorists, it is once again time to ask the pertinent question and that is how safe are we from terrorist attacks. While there has been a marked improvement in India where handling of terror related cases are concerned, the world sure has become a more unsafe place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X