'ಪಾರಡೈಸ್' ತನಿಖೆಯೂ ಪನಾಮ ಪೇಪರ್ಸ್ ಹೊಣೆ ಹೊತ್ತ ತಂಡದಿಂದಲೇ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 6: ಹಲವು ಸಂಸ್ಥೆಗಳ ತಂಡವು ಪನಾಮಾ ಪೇಪರ್ಸ್ ಬಗ್ಗೆ ತನಿಖೆ ನಡೆಸುತ್ತಿದ್ದು, ಅವೇ ಸಂಸ್ಥೆಗಳು 'ಪಾರಡೈಸ್ ಪೇಪರ್ಸ್' ತನಿಖೆಯನ್ನೂ ನಡೆಸುತ್ತವೆ. ಪ್ಯಾರಡೈಸ್ ನಲ್ಲಿ ಭಾರತೀಯರ ವೈಯಕ್ತಿಕ ಹೆಸರೂ ಹಾಗೂ ಸಂಸ್ಥೆಗಳದೂ ಸೇರಿದಂತೆ 714 ಹೆಸರುಗಳಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ಯಾರಡೈಸ್ ಪೇಪರ್ಸ್ ಹಗರಣ: ಸಮಜಾಯಿಷಿ ನೀಡಿದ ಸಚಿವ ಜಯಂತ್ ಸಿನ್ಹಾ

ಭಾರತೀಯರು ಕಾನೂನು ಬಾಹಿರವಾಗಿ ವಿದೇಶಗಳಲ್ಲಿ ಹೂಡಿಕೆ ಮಾಡಿರುವ ವಿವರಗಳನ್ನು ಪನಾಮಾ ಪೇಪರ್ಸ್ ಬಹಿರಂಗಗೊಳಿಸಿತ್ತು. ಆ ನಂತರ ಅಂದರೆ ಕಳೆದ ವರ್ಷ ಏಪ್ರಿಲ್ ನಲ್ಲಿ ಇದರ ತನಿಖೆಗಾಗಿ ವಿವಿಧ ಸಂಸ್ಥೆಗಳ ಗುಂಪೊಂದನ್ನು ರಚಿಸಲಾಗಿತ್ತು. ಇದೀಗ ಬಹಿರಂಗವಾಗಿರುವ ಪ್ಯಾರಡೈಸ್ ಪೇಪರ್ಸ್ ನ ಬಗ್ಗೆ ಕೂಡ ಅದೇ ಗುಂಪು ತನಿಖೆ ಮಾಡಲಿದೆ.

Black money

ಸಿಬಿಡಿಟಿ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಆರ್ಥಿಕ ಗುಪ್ತಚರ ಇಲಾಖೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಸಂಸ್ಥೆಗಳು ತನಿಖೆಯನ್ನು ನಡೆಸುತ್ತಿವೆ. ಪ್ಯಾರಡೈಸ್ ಪೇಪರ್ಸ್ ನಲ್ಲಿ ಪ್ರಸ್ತಾವ ಆಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಆದಾಯ ತೆರಿಗೆ ಮಾಹಿತಿಯನ್ನು ಮೊದಲಿಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಹಿರಿಯ ಅಧಿಕಾರಿಗಳು ಮಾತನಾಡಿದ್ದು, ವೈಯಕ್ತಿಕವಾಗಿ ಎಲ್ಲರಿಗೂ ಹಾಗೂ ಕಂಪನಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಪ್ರಭಾವಿ ರಾಜಕಾರಣಿಗಳು, ಪ್ರಸಿದ್ಧ ಕಾರ್ಪೋರೇಟ್ ಕಂಪೆನಿಗಳ ಜೊತೆಗೆ ಆಪಲ್, ನೈಕೆ, ಉಬರ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದ ಹೆಸರಾಂತ ಕಂಪೆನಿಗಳು ತೆರಿಗೆ ಹಣ ಉಳಿಸಲು ಮಾಡಿದ ಅವ್ಯವಹಾರಗಳು ಈ ಪ್ಯಾರಡೈಸ್ ಪೇಪರ್ಸ್ ನಲ್ಲಿ ದಾಖಲಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A multi-agency group probing the Panama Papers leak will look into the 'Paradise Papers' on financial holdings abroad that list a number of 714 Indian individuals and entities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ