ಮುಲಾಯಂ 'ರೇಪ್ ಹೇಳಿಕೆ'ಗೆ ತೀವ್ರ ಆಕ್ರೋಶ
ಮೊರಾದಾಬಾದ್, ಏ.11: ಹುಡುಗರು ತಪ್ಪು(ರೇಪ್) ಮಾಡುತ್ತಾರೆ... ಹಾಗಂತ ಅವರನ್ನು ಗಲ್ಲಿಗೇರಿಸೋದು ಸರಿನಾ? ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಹೇಳಿಕೆ ನೀಡಿ ಅತ್ಯಾಚಾರಿಗಳ ಪರ ವಾದಿಸಿದ್ದನ್ನು ಖಂಡಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಲಾಗಿದೆ.
ಚುನಾವಣಾ ಆಯೋಗ ಏಕೆ ಮುಲಾಯಂ ಅವರ ಮೇಲೆ ಸ್ವಯಂ ದೂರು ದಾಖಲಿಸಿಕೊಳ್ಳಬಾರದು ಎಂದು ಪ್ರಶ್ನಿಸಲಾಗಿದೆ.
ಇಡೀ ದೇಶವೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು ಎಂದು ಕೂಗೆದ್ದಿರುವಾಗ 'ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನನ್ನೇ ಬದಲಾಯಿಸ್ತೇವೆ ಎಂದು ಸಮಾಜವಾದಿ ಪಕ್ಷದ ಪ್ರಧಾನಿ ಅಭ್ಯರ್ಥಿ ಮುಲಾಯಂ ಸಿಂಗ್ ಯಾದವ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಲಾಯಂ ಅವರ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಇತರೆ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಯಾವುದೋ ಕಾರಣಕ್ಕೆ ಸಂಬಂಧ ಮುರಿದು ಬಿದ್ದಾಗ ಹುಡುಗಿಯರು ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನನ್ನು ಬದಲಾಯಿಸುವ ಅಗತ್ಯ ಇದೆ. ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಶಿಕ್ಷಿಸುವ ಅಗತ್ಯ ಇದೆ. ಅತ್ಯಾಚಾರಕ್ಕೆ ಸಂಬಂಧಿಸಿ ಸುಳ್ಳು ಪ್ರಕರಣ ದಾಖಲಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ ಎಂದು ಮುಲಾಯಂ ಮೊರಾದಾಬಾದಿನಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಹೇಳಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಲೇಖಕಿ ತಸ್ಮೀಮಾ ನಸ್ರೀನ್, ರೇಪ್ ಎಂಬುದು ಮಿಸ್ಟೇಕ್ ಅಲ್ಲ ಅದು ಅಪರಾಧ, ರೇಪಿಸ್ಟ್ ಗಳು ಕ್ರಿಮಿನಲ್ ಗಳು ಗಲ್ಲುಶಿಕ್ಷೆಗೂ ವಿರೋಧಿಸುವ ನಿಟ್ಟಿನಲ್ಲಿ ರೇಪಿಸ್ಟ್ ಪರ ಹೇಳಿಕೆ ನೀಡಬೇಡಿ ಎಂದಿದ್ದಾರೆ. [ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೂ ಗಲ್ಲಿಗೇರಿಸಿ]
Do you need to defend rape only bcz you're against death penalty for rapists? FYI,Rape is a crime,not just a mistake. Rapists are criminals.
— taslima nasreen (@taslimanasreen) April 10, 2014 ಸಾಮಾಜಿಕ ಜಾಲ ತಾಣಗಳಲ್ಲಿ #BackingRapists ಫಾಲೋ ಮಾಡಿದರೆ ಇನ್ನಷ್ಟು ಟ್ವೀಟ್ ಗಳು ಸಿಗುತ್ತವೆ. ಈಗ ಅಬು ಅಜಂ ಕೂಡಾ ಈ ಟ್ವೀಟ್ ರಾಶಿಗೆ ಬಿದ್ದಿದ್ದಾರೆ. ಕೆಲವು ಪ್ರಮುಖ ಟ್ವೀಟ್ ಗಳು ಇಲ್ಲಿವೆ ನೋಡಿ...

ಮಹಿಳೆಯರು ಸುಳ್ಳು ಕೇಸ್ ಹಾಕುತ್ತಾರೆ
ಮಹಿಳೆಯರು ಸುಳ್ಳು ಕೇಸ್ ಹಾಕುತ್ತಾರೆ. ಪಾಪ ಹುಡುಗರು ಗೊತ್ತಿಲ್ಲದೆ ಸಿಕ್ಕಿ ಬೀಳುತ್ತ್ತಾರೆ. ಅತ್ಯಾಚಾರಕ್ಕೆ ಸಂಬಂಧಿಸಿ ಸುಳ್ಳು ಪ್ರಕರಣ ದಾಖಲಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ ಎಂದು ಮುಲಾಯಂ ಹೇಳಿದ್ದರು.
|
ತಸ್ಮೀಮಾ ನಸ್ರೀನ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ
ಲೇಖಕಿ ತಸ್ಮೀಮಾ ನಸ್ರೀನ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಖಂಡಿಸಿದ್ದಾರೆ.
|
ಸಮಾಜವಾದಿ ಪಕ್ಷ ಬ್ಯಾನ್ ಮಾಡಿ
ಸಮಾಜವಾದಿ ಪಕ್ಷ ಬ್ಯಾನ್ ಮಾಡಿ, ಮುಲಾಯಂ, ಅಜಂ ಹೇಳಿಕೆ ಅಸಹ್ಯ
|
ಸ್ವಾಮಿ ಬ್ರಹ್ಮ ಚಿತ್ ಅವರಿಂದ ಟ್ವೀಟ್
ಸ್ವಾಮಿ ಬ್ರಹ್ಮ ಚಿತ್ ಅವರಿಂದ ಟ್ವೀಟ್.. ಇದು ಚುನಾವಣೆ ಗಿಮಿಕ್, ವೋಟ್ ಬ್ಯಾಂಕ್ ರಾಜಕೀಯ
|
ಮುಲಾಯಂ ಕೆನ್ನೆಗೆ ಬಾರಿಸುವವರಿಲ್ಲವೇ?
ಇಂಥ ಅಸಹ್ಯಕರ ಹೇಳಿಕೆ ನೀಡುವ ಮುಲಾಯಂ ಕೆನ್ನೆಗೆ ಬಾರಿಸುವವರಿಲ್ಲವೇ?












Click it and Unblock the Notifications