• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಸದರ ಮಹತ್ವದ ನಿರ್ಣಯ; ನಿಜಕ್ಕೂ ಇದು ಜಾರಿಯಾಗಲಿದೆಯೇ?

|

ನವದೆಹಲಿ, ಡಿಸೆಂಬರ್ 6 : ದೇಶದ ಸಂಸದರು ಪಕ್ಷಬೇಧ ಮರೆತು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ನಿಜಕ್ಕೂ ಇದು ಜಾರಿಗೆ ಬರಲಿದೆಯೇ? ಎಂಬ ಪ್ರಶ್ನೆ ಎದ್ದಿದೆ. ಈ ನಿರ್ಣಯ ಜಾರಿಯಾದರೆ ಸರ್ಕಾರಕ್ಕೆ ವಾರ್ಷಿಕ 17 ಕೋಟಿ ರೂ. ಉಳಿತಾಯವಾಗಲಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಹೌದು, ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಸಿಗುವ ಊಟ, ಉಪಹಾರದ ಸಬ್ಸಿಡಿ ಪಡೆಯದಿರಲು ಸಂಸದರು ತೀರ್ಮಾನ ಕೈಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮುಂದಿನ ಅಧಿವೇಶನದಲ್ಲಿ ಸಂಸದರು ಸಬ್ಸಿಡಿ ಊಟವನ್ನು ಮಾಡುವುದಿಲ್ಲ.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸಲಹೆಯಂತೆ ಎಲ್ಲಾ ಪಕ್ಷಗಳ ಸಂಸದರು ಈ ತೀರ್ಮಾನ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲೋಕಸಭೆಯ ಸಂಸದೀಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಗಳು ನಡೆದಿವೆ.

ಎಲ್ಲಾ ಪಕ್ಷಗಳ ಸಂಸತ್ ಸದಸ್ಯರು ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಸಿಗುವ ಸಬ್ಸಿಡಿ ಊಟ, ಉಪಹಾರ ಬಿಟ್ಟುಕೊಡಲು ತೀರ್ಮಾನಿಸಿದ್ದಾರೆ. ಈ ತೀರ್ಮಾನ ಜಾರಿಗೆ ಬಂದರೆ ಕ್ಯಾಂಟೀನ್‌ನಲ್ಲಿ ಇನ್ನು ಮುಂದೆ ವಾಸ್ತವದ ದರದಲ್ಲಿಯೇ ಊಟ, ಉಪಹಾರ ಇರಲಿದೆ.

ಕೇಂದ್ರ ಸರ್ಕಾರಕ್ಕೆ ವೆಚ್ಚ ಕಡಿಮೆ

ಕೇಂದ್ರ ಸರ್ಕಾರಕ್ಕೆ ವೆಚ್ಚ ಕಡಿಮೆ

ಕೇಂದ್ರ ಸರ್ಕಾರ ಸಂಸದರು ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಸಬ್ಸಿಡಿ ಊಟ, ಉಪಹಾರ ಮಾಡಲು ವಾರ್ಷಿಕ 17 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಸಂಸದರು ಸಬ್ಸಿಡಿ ಆಹಾರ ಬಿಟ್ಟರೆ ಸರ್ಕಾರದ ಬೊಕ್ಕಸಕ್ಕೆ ಹೊರೆ ಕಡಿಮೆಯಾಗಲಿದೆ.

ಭಾರೀ ಚರ್ಚೆಯ ವಿಷಯ

ಭಾರೀ ಚರ್ಚೆಯ ವಿಷಯ

ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಸಿಗುವ ಕಡಿಮೆ ದರದ ಊಟ, ಉಪಹಾರದ ಬಗ್ಗೆ ಹಲವು ಭಾರಿ ಚರ್ಚೆಗಳು ನಡೆದಿವೆ. ಜನಪ್ರತಿನಿಧಿಗಳು ಸಬ್ಸಿಡಿ ದರದ ಊಟ, ಉಪಹಾರ ನೀಡುವ ಅಗತ್ಯ ಏನಿದೆ? ಎಂಬ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದರು. ಈಗ ಸಂಸದರೇ ಸಬ್ಸಿಡಿ ಊಟ ಬೇಡ ಎಂಬ ತೀರ್ಮಾನವನ್ನು ಕೈಗೊಂಡಿದ್ದಾರೆ.

ದರಪಟ್ಟಿ ನೋಡಿ ಆಶ್ಚರ್ಯ

ದರಪಟ್ಟಿ ನೋಡಿ ಆಶ್ಚರ್ಯ

ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಸಿಗುವ ಊಟ, ಉಪಹಾರದ ದರ ನೋಡಿದರೆ ಜನರು ಆಶ್ಚರ್ಯ ಪಡೆಬೇಕು. ಬ್ರೆಡ್ ಮತ್ತು ಬೆಣ್ಣೆ 6 ರೂ., ಚಪಾತಿ 2 ರೂ., ಚಿಕನ್ ಕರಿ 50 ರೂ., ಚಿಕನ್ ಕಟ್‌ಲೆಟ್ 41 ರೂ., ತಂದೂರಿ ಚಿಕನ್ 60 ರೂ., ಕಾಫಿ 5 ರೂ. ದರವಿದೆ.

ಬಿರಿಯಾನಿ 65 ರೂ.ಗಳು

ಬಿರಿಯಾನಿ 65 ರೂ.ಗಳು

ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಪ್ಲೇನ್ ದೋಸೆ 12 ರೂ., ಫಿಶ್ ಕರಿ 40 ರೂ., ಹೈದರಾಬಾದಿ ಚಿಕನ್ ಬಿರಿಯಾನಿ 65 ರೂ., ಮಟನ್ ಕರಿ 45 ರೂ., ಅನ್ನ 7 ರೂ., ಸೂಪ್ 14 ರೂ. ದರವಿದೆ. ಸಬ್ಸಿಡಿ ಊಟ, ಉಪಹಾರ ನೀಡಲು ಸರ್ಕಾರ ಜನರ ತೆರಿಗೆ ಹಣ ಖರ್ಚು ಮಾಡುತ್ತಿದೆ.

ಕೇಂದ್ರ ಸರ್ಕಾರ ಸಂಸದರು ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಸಬ್ಸಿಡಿ ಊಟ, ಉಪಹಾರ ಮಾಡಲು ವಾರ್ಷಿಕ 17 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಸಂಸದರು ಸಬ್ಸಿಡಿ ಆಹಾರ ಬಿಟ್ಟರೆ ಸರ್ಕಾರದ ಬೊಕ್ಕಸಕ್ಕೆ ಹೊರೆ ಕಡಿಮೆಯಾಗಲಿದೆ.

English summary
As per the report members of parliament have unanimously decided not to take subsidy food in Parliament canteen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X