ಮಧ್ಯಪ್ರದೇಶದಲ್ಲಿ ಸಿಕ್ಕಿವೆ 'ಗಾಂಧಿ ಮಿಸ್ಸಿಂಗ್' 2 ಸಾವಿರದ ನೋಟುಗಳು

Posted By:
Subscribe to Oneindia Kannada

ಭೋಪಾಲ್, ಜನವರಿ 5: ಮಧ್ಯಪ್ರದೇಶದ ಶಿಯಾಪುರ್ ಜಿಲ್ಲೆಯ ಹಳ್ಳಿಯೊಂದರ ರೈತರಿಗೆ ಗಾಂಧಿ ಚಿತ್ರವಿಲ್ಲದ 2 ಸಾವಿರ ರುಪಾಯಿಯ ನೋಟುಗಳು ಬ್ಯಾಂಕ್ ನಿಂದಲೇ ದೊರೆತಿವೆ. ಅವು ನಕಲಿ ಎಂದು ಗಾಬರಿಗೊಂಡ ರೈತರು ನೋಟು ಪಡೆದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಹೋಗಿ ಕೇಳಿದ್ದಾರೆ.

ಅ ನೋಟುಗಳನ್ನು ಹಿಂಪಡೆದ ಅಧಿಕಾರಿಗಳು, ಆ ನೋಟುಗಳು ಅಸಲಿ ಎಂದಿದ್ದಾರೆ. ಮುದ್ರಣ ದೋಷದ ಕಾರಣಕ್ಕೆ ಗಾಂಧಿ ಚಿತ್ರವೇ ನೋಟಿನಿಂದ ನಾಪತ್ತೆಯಾಗಿತ್ತು. ಈ ರೀತಿ ಸಮಸ್ಯೆಯಿರುವ, ಅಸಲಿ ನೋಟುಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾಲ್ತಿಯಲ್ಲಿವೆ ಎಂದು ಬ್ಯಾಂಕ್ ಹಾಗೂ ಪೊಲೀಸ್ ಮೂಲಗಳು ತಿಳಿಸಿವೆ.[ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]

ಎಸ್ ಬಿಐನಿಂದ ಅಂಥ ನೋಟನ್ನು ಪಡೆಯುವಾಗ ಸರಿಯಾಗಿ ಗಮನಿಸದ ರೈತರೊಬ್ಬರು, ಮಾರುಕಟ್ಟೆಗೆ ತೆರಳಿದ್ದಾರೆ. ಅಲ್ಲಿ ಮತ್ತೊಬ್ಬ ರೈತರು ಈ ಸಮಸ್ಯೆಯನ್ನು ಹೇಳಿದ್ದಾರೆ. ಆ ದೋಷವನ್ನು ಗಮನಿಸಿದ ರೈತರ ಬಳಿ ಅಂಥದ್ದೇ ಎರಡು ನೋಟುಗಳಿದ್ದವಂತೆ. ಆ ನಂತರ ಇಬ್ಬರೂ ರೈತರು ಬ್ಯಾಂಕ್ ಶಾಖೆಗೆ ತೆರಳಿ ದೋಷಪೂರಿತ ನೋಟುಗಳನ್ನು ಬದಲಿಸಿಕೊಂಡಿದ್ದಾರೆ.

MP farmers get 'genuine' 2000 notes sans image of Mahatma Gandhi

ಈ ಘಟನೆ ಎಸ್ ಬಿಐನ ಶಿವಪುರಿ ರಸ್ತೆ ಶಾಖೆಯಲ್ಲಿ ನಡೆದಿದೆ. ಈ ನೋಟುಗಳು ನಕಲಿಯಲ್ಲ. ಆದರೆ ಮುದ್ರಣ ದೋಷವಾಗಿದೆಯಷ್ಟೇ. ದೋಷ ಪತ್ತೆಯಾದ ತಕ್ಷಣವೇ ನೋಟುಗಳನ್ನು ವಾಪಸ್ ಪಡೆಯಲಾಗಿದೆ ಎಂದು ಶಿಯಾಪುರ್ ಜಿಲ್ಲೆ ಎಸ್ ಬಿಐ ಮ್ಯಾನೇಜರ್ ಹೇಳಿದ್ದಾರೆ.

ಗಾಂಧಿ ಚಿತ್ರವಿರುವ ನೋಟುಗಳನ್ನು 1996ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತರಿಸುತ್ತಿದೆ. ಆದರೆ ಗಾಂಧಿ ಚಿತ್ರ ಇಲ್ಲದ ದೋಷಪೂರಿತ ನೋಟುಗಳನ್ನು ಮಧ್ಯಪ್ರದೇಶದ ದೇವಸ್ ನಲ್ಲಿರುವ ಮುದ್ರಣಾಲಯದಲ್ಲಿ ಮುದ್ರಿಸಲಾಗಿದೆ. ಈ ರೀತಿ ಮುಂದೆ ಆಗದಂತೆ ಎಚ್ಚರವಹಿಸಿ ಎಂದು ಅಧಿಕಾರಿಗಳು ಮುದ್ರಣಾಲಯಕ್ಕೆ ಸೂಚಿಸಿದ್ದಾರೆ.[500ರ ಹೊಸ ನೋಟಿನಲ್ಲಿ ಮುದ್ರಣ ದೋಷ!]

ಈ ಹಿಂದೆ 500 ರುಪಾಯಿಯ 80 ಸಾವಿರ ನೋಟುಗಳು ಹಾಗೂ 1000 ರುಪಾಯಿಯ ಹತ್ತು ಸಾವಿರ ನೋಟುಗಳನ್ನು ಹೊಶಂಗಾಬಾದ್ ನ ಸರಕಾರಿ ಪೇಪರ್ ಮಿಲ್ ನಲ್ಲಿ ದೋಷಪೂರಿತವಾಗಿ ಮುದ್ರಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Farmers from a remote village in Madhya Pradesh's Sheopur district were taken aback when they received newly printed Rs 2000 notes without the image of Mahatma Gandhi from a State Bank of India branch.
Please Wait while comments are loading...