• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಟೇಲರಿಗೆ ಅಧ್ಯಕ್ಷ ಗಾದಿ ತಪ್ಪಿಸಿತೆ ಮೋತಿಲಾಲರ ಪತ್ರ?

|

ಅಹಮದಾಬಾದ್, ನ. 14: ಇದು 86 ವರ್ಷಗಳ ಹಿಂದಿನ ಕತೆ. ಅದು ಸ್ವಾತಂತ್ರ್ಯ ಚಳವಳಿ ಉತ್ತುಂಗದಲ್ಲಿದ್ದ ಕಾಲ. ಕಾಂಗ್ರೆಸ್ ಅಧ್ಯಕ್ಷ ಗಾದಿಯ ಸಂಬಂಧ ಮಹಾತ್ಮ ಗಾಂಧೀಜಿ ಮತ್ತು ಮೋತಿಲಾಲ್ ನೆಹರು ನಡುವೆ ನಡೆದ ಪತ್ರ ವಿನಿಮಯದ ಘಟನಾವಳಿಗಳ ಚಿತ್ರಣ.

1928 ರಲ್ಲಿ ಕಾಂಗ್ರೆಸ್ ನಾಯಕತ್ವ ನೀಡಿಕೆ ಸಂಬಂಧ ಗೊಂದಲ ಉಂಟಾಗಿತ್ತು. ಕಾಂಗ್ರೆಸ್ ಗೆ ಒಬ್ಬ ಯುವ ಮತ್ತು ಗಟ್ಟಿ ಮಾತಿನ ನೇತಾರ ಬೇಕಿತ್ತು. ಈ ಸಂದರ್ಭ ಮೋತಿಲಾಲ್ ನೆಹರು ಸ್ವತಃ ಗಾಂಧೀಜಿಗೆ ಬರೆದ ಪತ್ರ ಚಿತ್ರಣವನ್ನೇ ಬದಲಾಯಿಸಿತ್ತು.[ಉಕ್ಕಿನ ಮಹಿಳೆ vs ಉಕ್ಕಿನ ಮನುಷ್ಯ ಏನಿದರ ಮರ್ಮ?]

ಕಾಂಗ್ರೆಸ್ ನಾಯಕತ್ವದ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಿದ್ದು ಸರ್ದಾರ್ ವಲ್ಲಭಬಾಯ್ ಪಟೇಲ್. ಈ ಸಂದರ್ಭ ಮೋತಿಲಾಲ್ ನೆಹರು ಗಾಂಧೀಜಿಗೆ ಬರೆದ ಪತ್ರದ ಸಾರಾಂಶವನ್ನು ಹೇಳಲೇಬೇಕು. ಕಾಂಗ್ರೆಸ್ ಮುನ್ನೆಡೆಸಲು ಪಟೇಲರೇ ಉತ್ತಮ ಆಯ್ಕೆ ಎಂಬುದು ನನಗೆ ತಿಳಿದಿದೆ. ಆದರೆ ಪಕ್ಷ ಜವಾಹರ ಲಾಲ್ ಅಂಥವರಿಂದ ಮುನ್ನಡೆಯಬೇಕೆಂಬುದು ನನ್ನ ಇಚ್ಛೆ ಎಂದು ಬರೆದಿದ್ದರು.

ಅದೇ ವರ್ಷ ಅಂದರೆ 1928 ರಲ್ಲಿ ಕೊಲ್ಕತ್ತಾ ದಲ್ಲಿ ನಡೆದ ಸಮಾವೇಶದಲ್ಲಿ ಮೋತಿಲಾಲರೇ ಅಧ್ಯಕ್ಷರಾಗಿ ನೇಮಕವಾಗುತ್ತಾರೆ. ನಂತರ 1929 ರ ಲಾಹೋರ್ ಅಧಿವೇಶನದಲ್ಲಿ ಜವಾಹರಲಾಲ್ ನೆಹರುಗೆ ಪಟ್ಟ ಕಟ್ಟಲಾಗುತ್ತದೆ.[ಪೌರುಷಕ್ಕಾಗಿ ಎತ್ತಿನ ವೃಷಣದ ಸಾರ ಸೇವಿಸುತ್ತಿದ್ದ ಹಿಟ್ಲರ್]

ಆದರೆ ಇಷ್ಟೆಲ್ಲಾ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿದ್ದು ಎರಡು ಪತ್ರಗಳು. ಜೂನ್ 19, 1928 ರಂದು ಮಹಾತ್ಮ ಗಾಂಧೀಜಿ ಮೋತಿಲಾಲ್ ನೆಹರುಗೊಂದು ಪತ್ರ ಬರೆಯುತ್ತಾರೆ. 'ನಿಮಗೆ ಮತ ಹಾಕಲು ಗುಜರಾತ್ ಕಾಂಗ್ರೆಸ್ ಸಮಿತಿಯಿಂದ ನಾನು ಬರಬೇಕಿದೆ. ಜವಾಹರ ಲಾಲ್ ಗೆ ಪಟ್ಟ ಕಟ್ಟಲು ಇದು ಸಕಾಲವಲ್ಲ. ಒಂದು ವೇಳೆ ನಿಜವಾಗಿಯೂ ಸಮಸ್ಯೆ ಉಂಟಾಗಿದ್ದರೆ ನೀವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಿರಿ' ಎಂದು ಬರೆದು ಕಳುಹಿಸುತ್ತಾರೆ.

ಇದಕ್ಕೆ ಜುಲೈ 11, 1928 ರಂದು ಉತ್ತರ ಬರೆದ ಮೋತಿಲಾಲ್, 'ನನಗೆ ಗೊತ್ತು ಈ ಕ್ಷಣಕ್ಕೆ ವಲ್ಲಭಬಾಯಿ ಪಟೇಲರು ನಾಯಕರಂತೆ ಎಲ್ಲರಿಗೆ ಕಂಡುಬರುತ್ತಿದ್ದಾರೆ. ನಿಜವಾಗಿಯೂ ಅವರ ಸಾರ್ವಜನಿಕ ಸೇವೆಯನ್ನು ಅಭಿನಂದಿಸಬೇಕಾಗುತ್ತದೆ. ಆದರೆ ಇವತ್ತಿನ ಪರಿಸ್ಥಿತಿ ಗಮನಿಸಿದರೆ ಜವಾಹರಲಾಲ್ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿಸುವುದು ಉತ್ತಮ. ಜವಾಹರಲಾಲ್ ಅಂಥವರ ನಾಯಕತ್ವದಲ್ಲೇ ನಮ್ಮ ಮುಂದಿನ ಹೋರಾಟ ಮುಂದುವರಿಯಬೇಕು' ಎಂದು ಹೇಳುತ್ತಾರೆ.[ಒನ್ಇಂಡಿಯಾದಿಂದ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ]

ನೆಹರು ವಸ್ತು ಸಂಗ್ರಹಾಲಯದಿಂದ ಈ ಪತ್ರವನ್ನು ಹೊರಗೆಳೆದಿರುವ ಇತಿಹಾಸಕಾರ ರಿಜ್ವಾನ್ ಕದ್ರಿ ಹೇಳುವಂತೆ, ಮೋತಿಲಾಲ್ ಗೆ ಪಕ್ಷ ಯುವಕರ ನಾಯಕತ್ವದಲ್ಲಿ ಸಾಗಬೇಕೆಂದಿತ್ತು. ಜನರ ದೃಷ್ಟಿಕೋನದಲ್ಲಿ ಗಾಂಧೀಜಿ ಮತ್ತು ತನ್ನ ಬಗ್ಗೆ ಯಾವ ಅಭಿಪ್ರಾಯಗಳಿವೆ ಎಂಬುದನ್ನೂ ಅರಿಯಬೇಕಿತ್ತು. ಅಲ್ಲದೇ ಈ ಘಟನೆಗಳು ಕಾಂಗ್ರೆಸ್ ನಾಯಕರ ಮೇಲೂ ಯಾವ ಪರಿಣಾಮ ಬೀರುತ್ತದೆ ಎಂದು ನೋಡುವ ಇರಾದೆ ಇಟ್ಟುಕೊಂಡಿದ್ದರು ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Eighty-six years ago, in July 1928, the Congress party was wrestling over who should lead the party: whether its reins should be handed over to young, energetic leaders, or the old guards should be allowed to retain control. One of Congress stalwarts at that time, Motilal Nehru, wrote a rare letter to Mahatma Gandhi saying although Sardar Vallabhbhai Patel was the best choice for the post of Congress president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more