ವರದಕ್ಷಿಣೆ ಬೇಡಿಕೆ ಈಡೇರಿಸದಿದ್ದಕ್ಕೆ ಸೊಸೆಗೆ ಎಚ್‌ಐವಿ ಸೋಂಕಿತ ಚುಚ್ಚುಮದ್ದು ನೀಡಿದ ಅತ್ತೆ-ಮಾವ
ಕಾನೂನಿನ ಪ್ರಕಾರ ವಧು ಅಥವಾ ಅವರ ಕುಟುಂಬದ ಬಳಿ ವರನ ಕಡೆಯವರು ವರದಕ್ಷಿಣೆ ಕೇಳುವುದು ದೊಡ್ಡ ಅಪರಾಧವಾಗಿದೆ. ಈ ನಡುವೆಯೂ ಕೆಲವೆಡೆ ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಸೊಸೆಯನ್ನು ಚಿತ್ರಹಿಂಸೆ ಕೊಟ್ಟಿರುವ ಉದಾಹರಣೆಗಳು ಇವೆ. ಅಂತಹದ್ದೇ ಒಂದು ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೆಚ್ಚುವರಿ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ಪೋಷಕರು ವಿಫಲವಾದ ಬಳಿಕ ತನಗೆ ಎಚ್‌ಐವಿ ಸೋಂಕಿತ ಸಿರಿಂಜ್ ಚುಚ್ಚುಮದ್ದನ್ನು ನೀಡಲಾಗಿದೆ ಎಂದು ಸೊಸೆ ಆರೋಪಿಸಿದ್ದರಯ. ಹೀಗೆ ಆರೋಪಿಸಿದ 30 ವರ್ಷದ ಮಹಿಳೆಯ ಅತ್ತೆ ಮಾವನ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆ ಸಹರಾನ್ಪುರ ನ್ಯಾಯಾಲಯವು ಉತ್ತರ ಪ್ರದೇಶ ಪೊಲೀಸರಿಗೆ ನಿರ್ದೇಶನ ನೀಡಿದೆ.

ನ್ಯಾಯಾಲಯದ ಆದೇಶದ ನಂತರ, ಪೊಲೀಸರು ಆರೋಪಿ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸಹರಾನ್ಪುರ ಎಸ್ಪಿ (ಗ್ರಾಮೀಣ) ಸಾಗರ್ ಜೈನ್ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಸಂತ್ರಸ್ತೆ ಸಹರಾನ್ಪುರದ ನಿವಾಸಿಯಾಗಿದ್ದಾರೆ.
ಇನ್ನು ಆಕೆಯ ಪತಿ (32), ಸೋದರ ಮಾವ (38), ಅತ್ತಿಗೆ (35) ಮತ್ತು ಅತ್ತೆ (56) ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 498 ಎ, 323, 328, 406 ಮತ್ತು ಸಂಬಂಧಿತ ವರದಕ್ಷಿಣೆ ವಿಭಾಗಗಳ ಅಡಿಯಲ್ಲಿ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ನಾವು ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ಮಾಡುತ್ತಿದ್ದೇವೆ ಎಂದರು.
ಪೊಲೀಸರ ಪ್ರಕಾರ, ಮಹಿಳೆಯ ತಂದೆ "ಫೆಬ್ರವರಿ 2023ರಲ್ಲಿ ಮದುವೆಯಾಗಿದ್ದು, ಕುಟುಂಬವು ಮದುವೆಗಾಗಿ ಸುಮಾರು 45 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ," ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. "ನಾವು ವರನ ಕುಟುಂಬಕ್ಕೆ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು 15 ಲಕ್ಷ ರೂಪಾಯಿಗಳನ್ನು ನೀಡಿದ್ದೇವೆ. ಆದರೆ, ನಂತರ ಅವರು ಹೆಚ್ಚುವರಿ 10 ಲಕ್ಷ ರೂಪಾಯಿಗಳು ಮತ್ತು ದೊಡ್ಡ ಎಸ್‌ಯುವಿಯನ್ನು ಒತ್ತಾಯಿಸಿದರು" ಎಂದು ಅವರು ಹೇಳಿದರು.
ಗಂಡನ ಕಿಡ್ನಿ ಮಾರಿಸಿದ ಪತ್ನಿ: ಪತ್ನಿಯೊಬ್ಬಳು 10,00,000 ರೂಪಾಯಿಗಾಗಿ ತನ್ನ ಗಂಡನ ಕಿಡ್ನಿಯನ್ನ ಒತ್ತಾಯದಿಂದ ಮಾರಿಸಿ, ಅದೇ ಹಣ ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಈ ಶಾಕಿಂಗ್ ಘಟನೆ ಹೌರಾ ಜಿಲ್ಲೆಯ ಸಂಕ್ರೈಲ್ನಲ್ಲಿ ನಡೆದಿದೆ. ಮೂಲಗಳ ಪ್ರಕಾರ, ಹೆಂಡತಿ ತನ್ನ ಪತಿಯ ಕಿಡ್ನಿಯನ್ನು ಮಗಳು ಶಿಕ್ಷಣ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹಣ ಬೇಕೆಂದು ಹಠ ಹಿಡಿದು ಒತ್ತಾಯದಿಂದ ಕಿಡ್ನಿ ಮಾರಿಸಿದ್ದಾಳೆ. ಬಳಿಕ ಆ ಹಣವನ್ನು ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
ಇನ್ನು ಪತ್ನಿಯ ಕಾಟ ತಾಳಲಾರದೆ ಆತ ಸತತ 3 ತಿಂಗಳುಗಳ ಕಾಲ ಕಿಡ್ನಿ ಕೊಳ್ಳುವವರನ್ನು ಹುಡುಕಿ ಕಿಡ್ನಿಯನ್ನು ಮಾರಾಟ ಮಾಡಿದ್ದಾನೆ. ಇದರಿಂದ ತನ್ನ ಮನೆಯ ಹಣಕಾಸಿನ ಸಮಸ್ಯೆ ಪತ್ನಿ ಹೇಳದಂತೆ ಉತ್ತಮ ಸ್ಥಿತಿಗೆ ಬರಬಹುದು ಎಂದು ನಂಬಿಕೆ ಇಟ್ಟಿದ್ದ. ಆದರೆ, ಈ ಹಣದಿಂದ ಮನೆಯ ಬಡತನದ ಸಮಸ್ಯೆ ಮುಗಿದು ಮಗಳನ್ನು ಚೆನ್ನಾಗಿ ಓದಿಸಿ ಅವಳ ವಿವಾಹ ಮಾಡಬೇಕೆಂದುಕೊಂಡಿದ್ದ.
ಮತ್ತೊಂದೆಡೆ ಪತಿ ತನ್ನ ಕಿಡ್ನಿ ಮಾರಿ ಮನೆತನ ಬಡತನ ನಿರ್ಮೂಲನೆ ಆಗಬಹುದೆಂದು ಕನಸು ಕಾಣುತ್ತಿದ್ದ. ಆದರೆ ಅವನ ಪತ್ನಿ ಅದೇ ಹಣವನ್ನು ತೆಗೆದುಕೊಂಡು ಪೇಂಟ್ ಮಾರುತ್ತಿದ್ದ ರವಿ ದಾಸ್ ಎಂಬುವವನ ಜೊತೆ ಪ್ರೇಮಾಂಕುರದಲ್ಲಿ ಮುಳುಗಿ ಹೋಗಿದ್ದಳು. ಪತಿ ಕಿಡ್ನಿ ಮಾರಿ ಅದರಿಂದ ಬಂದಂತಹ 10,00,000 ರೂಪಾಯಿ ಹಣವನ್ನು ನಂಬಿಕೆಯಿಟ್ಟು ಪತ್ನಿಯ ಕೈಗೆ ಕೊಟ್ಟಿದ್ದ. ಆದರೆ, ಆಕೆ ರವಿದಾಸ್ ಜೊತೆ ಅದೇ ಹಣದೊಂದಿಗೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ.












Click it and Unblock the Notifications