ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಿನ ಬೆಲೆ ಲೀಟರ್‌ಗೆ 2 ರೂಪಾಯಿ ಏರಿಸಿದ ಮದರ್ ಡೈರಿ

|
Google Oneindia Kannada News

ನವದೆಹಲಿ, ನವೆಂಬರ್‌ 20: ಪೂರೈಕೆ ವ್ಯತ್ಯಯ, ಉತ್ಪಾದನಾ ವೆಚ್ಚದ ಏರಿಕೆಯ ಕಾರಣದಿಂದ ಸೋಮವಾರದಿಂದ ಜಾರಿಗೆ ಬರುವಂತೆ ದೆಹಲಿ ಹಾಗೂ ವಿವಿಧೆಡೆ ಮಾರುಕಟ್ಟೆಯಲ್ಲಿ ಪೂರ್ಣ ಕ್ರೀಮ್ ಹಾಲಿನ ಬೆಲೆಯನ್ನು ಲೀಟರ್‌ಗೆ 1 ರೂಪಾಯಿ ಮತ್ತು ಟೋಕನ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಲು ಮದರ್ ಡೈರಿ ನಿರ್ಧರಿಸಿದೆ.

ದಿನಕ್ಕೆ 30 ಲಕ್ಷ ಲೀಟರ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸರಬರಾಜು ಮಾಡುವ ಮದರ್‌ ಡೈರಿ ದೆಹಲಿ ಹಾಗೂ ದೇಶದ ಇತರ ಭಾಗದಲ್ಲಿ ಪ್ರಮುಖ ಹಾಲು ಪೂರೈಕೆದಾರರಲ್ಲಿ ಒಂದಾಗಿದ್ದು, ಈ ವರ್ಷದಲ್ಲಿ ಹಾಲಿನ ಬೆಲೆಯಲ್ಲಿ ನಾಲ್ಕನೇ ಬಾರಿ ಏರಿಕೆ ಮಾಡಿದೆ. ಮದರ್ ಡೈರಿಯು ಪೂರ್ಣ ಕೆನೆ ಹಾಲಿನ ಬೆಲೆಯನ್ನು ಲೀಟರ್‌ಗೆ 64 ರೂಪಾಯಿಗೆ ಹೆಚ್ಚಿಸಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಮತ್ತೆ ಬೆಲೆ ಹೆಚ್ಚಿಸಿದ ಅಮೂಲ್‌, ಮದರ್‌ ಡೇರಿ, ಏರಿಸಿದ ಹಾಲಿನ ಬೆಲೆ ಎಷ್ಟು?ಮತ್ತೆ ಬೆಲೆ ಹೆಚ್ಚಿಸಿದ ಅಮೂಲ್‌, ಮದರ್‌ ಡೇರಿ, ಏರಿಸಿದ ಹಾಲಿನ ಬೆಲೆ ಎಷ್ಟು?

ಆದರೆ 500 ಮಿಲಿ ಪ್ಯಾಕ್‌ಗಳಲ್ಲಿ ಅಂದರೆ ಅರ್ಧ ಲೀಟರ್‌ ಮಾರಾಟವಾಗುವ ಪೂರ್ಣ ಕೆನೆ ಹಾಲಿನ ಬೆಲೆಯನ್ನು ಕಂಪನಿಯು ಹೆಚ್ಚಿಸಿಲ್ಲ. ಟೋಕನ್ ಹಾಲು ಸೋಮವಾರದಿಂದ ಲೀಟರ್‌ಗೆ 50 ರೂಪಾಯಿ ಮಾರಾಟವಾಗಲಿದ್ದು, ಪ್ರಸ್ತುತ ಪ್ರತಿ ಲೀಟರ್‌ಗೆ 48 ರೂಪಾಯಿ ಇತ್ತು. ಆಹಾರ ಹಣದುಬ್ಬರವು ಈಗಾಗಲೇ ಹೆಚ್ಚಿನ ಮಟ್ಟದಲ್ಲಿ ಇರುವ ಸಮಯದಲ್ಲಿ ಹಾಲಿನ ಬೆಲೆಗಳ ಹೆಚ್ಚಳವು ಈಗ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.

ಆಹಾರ ಮತ್ತು ಮೇವಿನ ವೆಚ್ಚ ಹೆಚ್ಚಳ

ಆಹಾರ ಮತ್ತು ಮೇವಿನ ವೆಚ್ಚ ಹೆಚ್ಚಳ

ಮದರ್ ಡೈರಿಯು ಡೈರಿ ರೈತರಿಂದ ಕಚ್ಚಾ ಹಾಲಿನ ಸಂಗ್ರಹಣಾ ವೆಚ್ಚದಲ್ಲಿ ಹೆಚ್ಚಳವು ಬೆಲೆ ಏರಿಕೆಗೆ ಕಾರಣವಾಗಿದೆ. ಈ ವರ್ಷ ಇಡೀ ಡೈರಿ ಉದ್ಯಮವು ಹಾಲಿನ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ಅಂತರವನ್ನು ಕಂಡಿದೆ ಎಂದು ವಕ್ತಾರರು ಹೇಳಿದರು. ಆಹಾರ ಮತ್ತು ಮೇವಿನ ವೆಚ್ಚ ಹೆಚ್ಚಿದ ಮತ್ತು ಅನಿಯಮಿತ ಮಾನ್ಸೂನ್, ಕಚ್ಚಾ ಹಾಲಿನ ಬೆಲೆಗಳ ಮೇಲೆ ಒತ್ತಡವನ್ನು ಉಂಟು ಮಾಡುವುದರಿಂದ ಹಸಿ ಹಾಲಿನ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ಇದಲ್ಲದೆ, ಸಂಸ್ಕರಿತ ಹಾಲಿಗೆ ಬೇಡಿಕೆ ಹೆಚ್ಚಿದೆ ಎಂದು ಮದರ್ ಡೈರಿ ಹೇಳಿದೆ.

ರೈತರಿಗೆ ಬೆಂಬಲವನ್ನು ಮುಂದುವರಿಸಲು ಕ್ರಮ

ರೈತರಿಗೆ ಬೆಂಬಲವನ್ನು ಮುಂದುವರಿಸಲು ಕ್ರಮ

ಹಬ್ಬದ ಋತುವಿನ ನಂತರವೂ ಬೇಡಿಕೆ ಹಾಗೂ ಸರಬರಾಜಿನಲ್ಲಿ ಏರಿಳಿತವು ಕಚ್ಚಾ ಹಾಲಿನ ಬೆಲೆಗಳನ್ನು ಮತ್ತಷ್ಟು ಏರಿಸಲು ಕಾರಣವಾಗಿದೆ. ಆದ್ದರಿಂದ ನಾವು ಕೆಲವು ಗ್ರಾಹಕ ಬೆಲೆಗಳ ಪರಿಷ್ಕರಣೆಯೊಂದಿಗೆ ಪರಿಣಾಮವನ್ನು ಭಾಗಶಃ ಕಡಿಮೆ ಮಾಡಲು ಯೋಜನೆ ಮಾಡಿದ್ದೇವೆ. ಬೆಲೆಯಲ್ಲಿನ ಪರಿಷ್ಕರಣೆಯು ಗ್ರಾಹಕರಿಗೆ ಗುಣಮಟ್ಟದ ಹಾಲನ್ನು ನೀಡುವ ಜೊತೆಗೆ ಸರಿಯಾದ ಸಂಭಾವನೆಯೊಂದಿಗೆ ರೈತರಿಗೆ ಬೆಂಬಲವನ್ನು ಮುಂದುವರಿಸಲು ಕಂಪನಿಗೆ ಅನುವು ಮಾಡಿಕೊಡುತ್ತದೆ ಎಂದು ಮದರ್ ಡೈರಿ ಹೇಳಿದೆ.

ನಂದಿನಿ ಹಾಲಿನ ದರ ಏರಿಕೆಗೆ ತಡೆ: ಸಿಎಂ ಸಭೆ ಬಳಿಕ ಮುಂದಿನ ನಿರ್ಧಾರ
ಹಾಲಿನ ಬೆಲೆ ಲೀಟರ್‌ಗೆ 2 ರು ಹೆಚ್ಚಳ

ಹಾಲಿನ ಬೆಲೆ ಲೀಟರ್‌ಗೆ 2 ರು ಹೆಚ್ಚಳ

ಗ್ರಾಹಕರು ಪಾವತಿಸುವ ದರದಲ್ಲಿ ಸುಮಾರು 75ರಿಂದ 80 ಪ್ರತಿಶತವನ್ನು ಮದರ್ ಡೈರಿ ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ. ಅಕ್ಟೋಬರ್ 16 ರಂದು ಮದರ್ ಡೈರಿಯು ದೆಹಲಿ ಹಾಗೂ ದೇಶದ ಇತರೆಡೆ ಮತ್ತು ಉತ್ತರ ಭಾರತದ ಕೆಲವು ಮಾರುಕಟ್ಟೆಗಳಲ್ಲಿ ಪೂರ್ಣ ಕೆನೆ ಹಾಲು ಮತ್ತು ಹಸುವಿನ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗೆ ಹೆಚ್ಚಿಸಿದೆ. ಮಾರ್ಚ್ ಮತ್ತು ಆಗಸ್ಟ್‌ನಲ್ಲಿ ಎಲ್ಲಾ ಬಗೆಯ ಹಾಲಿಗೆ ಪ್ರತಿ ಲೀಟರ್‌ಗೆ 2 ರೂಪಾಯಿಯನ್ನು ಹೆಚ್ಚಿಸಲಾಗಿದೆ.

ದಿನಕ್ಕೆ ಸುಮಾರು 40 ಲಕ್ಷ ಲೀಟರ್ ಮಾರಾಟ

ದಿನಕ್ಕೆ ಸುಮಾರು 40 ಲಕ್ಷ ಲೀಟರ್ ಮಾರಾಟ

ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ, ದೆಹಲಿ ಹಾಗೂ ಇತರೆಡೆ ಮಾರುಕಟ್ಟೆಯಲ್ಲಿ ಪ್ರಮುಖ ಮಾರಾಟಗಾರ ಕಂಪೆನಿ. ಇದು ದಿನಕ್ಕೆ ಸುಮಾರು 40 ಲಕ್ಷ ಲೀಟರ್ ಮಾರಾಟ ಮಾಡುತ್ತದೆ. ವಿಶ್ವದ ಅತಿದೊಡ್ಡ ಉತ್ಪಾದಕರಾದ ಭಾರತದಲ್ಲಿ ಹಾಲಿನ ಉತ್ಪಾದನೆಯು ವಾರ್ಷಿಕವಾಗಿ ಸುಮಾರು 210 ಮಿಲಿಯನ್ ಟನ್‌ಗಳಷ್ಟಿದೆ.

English summary
Mother Dairy has decided to increase the price of full cream milk by Rs 1 per liter and the price of token milk by Rs 2 per liter in Delhi and other markets with effect from Monday due to increase in production cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X