ಕೃಷ್ಣಗಿರಿಯಲ್ಲಿ ಭೀಕರ ಅಪಘಾತ, 10 ಜನ ಸಾವು

Posted By:
Subscribe to Oneindia Kannada

ಕೃಷ್ಣಗಿರಿ(ತಮಿಳುನಾಡು), ಜುಲೈ 24: ಕೃಷ್ಣಗಿರಿ ತಾಲೂಕಿನ ಸೂಳಗಿರಿ ಬಳಿ ಭಾನುವಾರ ಭೀಕರ ಅಪಘಾತ ಸಂಭವಿಸಿದೆ. ಕೃಷ್ಣಗಿರಿಯಿಂದ ಹೊಸೂರಿಗೆ ತೆರಳುತ್ತಿದ ಖಾಸಗಿ ಬಸ್ ಹಾಗೂ ಕಂಟೈನರ್ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, 10 ಮಂದಿ ಸಾವನ್ನಪ್ಪಿದ್ದರೆ 33ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

ಅತಿ ವೇಗವಾಗಿ ಚಲಿಸುತ್ತಿದ ಕಂಟೈನರ್ ಟ್ರಕ್ ವೊಂದು ರಸ್ತೆ ವಿಭಜಕ ದಾಟಿ ಎದುರುಗಡೆ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ.

More than 10 dead, 33 injured in Krishnagiri road accident

ಬೆಂಗಳೂರು- ಹೊಸೂರು ಹೆದ್ದಾರಿಯ ಸೂಳಗಿರಿ ಬಳಿ ಸಂಭಸಿದ ಈ ಭೀಕರ ಅಪಘಾತದಿಂದ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
More than 10 dead, 33 injured in Krishnagiri road accident

ಘಟನಾ ಸ್ಥಳಕ್ಕೆ 10ಕ್ಕೂ ಅಧಿಕ ಆಂಬ್ಯುಲೆನ್ಸ್ ವಾಹನಗಳು ಬಂದಿದ್ದು, ಗಾಯಗೊಂಡವರನ್ನು ಕೃಷ್ಣಗಿರಿಯ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

More than 10 dead, 33 injured in Krishnagiri road accident

ಸುಮಾರು ಒಂದು ತಿಂಗಳ ಹಿಂದೆ ಇಲ್ಲೇ ಸಮೀಪದಲ್ಲಿ ಸರಣಿ ಅಪಘಾತ ಸಂಭವಿಸಿ 17 ಜನ ಮೃತಪಟ್ಟಿದ್ದರು.

More than 10 dead, 33 injured in Krishnagiri road accident

ಭಾನುವಾರದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಖಾಸಗಿ ಬಸ್ ನಲ್ಲಿ 63ಜನ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A gruesome road accident occurred near Hossur, Krishnagiri district, killing 7 on the spot and gravely injuring 30 more. A private transport bus carrying passengers travelling from Sulagiri had an head on collision with a container truck travelling from Hosur
Please Wait while comments are loading...