ಮಹಿಳೆಯರಿಗಿಂತ ಹೆಚ್ಚು ಪುರುಷರು ಲಸಿಕೆ ಪಡೆದಿದ್ದಾರೆ, ಕಾರಣವೇನು?

ನವದೆಹಲಿ, ಜೂ.28: ದೇಶದಲ್ಲಿ ವ್ಯಾಕ್ಸಿನೇಷನ್ ವೇಗ ಹೆಚ್ಚುತ್ತಿದೆ, ಪ್ರತಿದಿನ ಸರಾಸರಿ 60 ಲಕ್ಷಕ್ಕೂ ಹೆಚ್ಚು ಲಸಿಕೆಗಳು ನಡೆಯುತ್ತಿವೆ. ಆದರೆ ಇದು ಲಿಂಗ ಅಸಮಾನತೆಯ ಸವಾಲು ಎದುರಾಗಿದೆ.

ದೇಶದಲ್ಲಿ ಶೇ. 46 ರಷ್ಟು ಮಹಿಳೆಯರಿಗೆ ಹೋಲಿಸಿದರೆ ಶೇ.54 ರಷ್ಟು ಪುರುಷರು ಕೋವಿಡ್‌ ಲಸಿಕೆ ಪಡೆದಿದ್ದಾರೆ. ಈ ಮಹಿಳೆಯರು ಹಾಗೂ ಪುರುಷರ ನಡುವಿನ ಲಸಿಕೆಯ ಅಂತರವು ಶೇ. 8 ರಷ್ಟಿದೆ. ಈ ಅಂತರವು ಈಗ ಚರ್ಚೆಗೆ ಕಾರಣವಾಗಿದೆ.

ಜನಸಂಖ್ಯೆಯ ದೃಷ್ಟಿಯಿಂದ ಭಾರತದಲ್ಲಿ ಮಹಿಳೆಯರಿಗಿಂತ 5 ಪ್ರತಿಶತದಷ್ಟು ಪುರುಷರು ಹೆಚ್ಚು ಇದ್ದಾರೆ. ಆದರೆ ಲಸಿಕೆ ವಿಚಾರದಲ್ಲೂ ಲಿಂಗ ಅಸಮಾನತೆ ಹೇಗೆ ಕಾಣಿಸಿಕೊಂಡಿದೆ ಎಂಬ ಪ್ರಶ್ನೆ ಈಗ ಉದ್ಭವಾಗಿದೆ.

 ''ಲಸಿಕೆಯಿಂದ ನನಗೆ ಏನಾದರು ಆದರೆ ಮಕ್ಕಳನ್ನು ಯಾರು ನೋಡಿಕೊಳ್ಳುವವರು?''

''ಲಸಿಕೆಯಿಂದ ನನಗೆ ಏನಾದರು ಆದರೆ ಮಕ್ಕಳನ್ನು ಯಾರು ನೋಡಿಕೊಳ್ಳುವವರು?''

ಲಸಿಕೆ ವಿಚಾರದಲ್ಲಿ ಹಲವಾರು ಮಂದಿಗೆ ಕೆಲವು ತಪ್ಪು ಮಾಹಿತಿಯಿದೆ. ಇದು ಹೆಚ್ಚಾಗಿ ಮಹಿಳೆಯರು ಲಸಿಕೆ ಪಡೆಯುವುದಕ್ಕೆ ತಡೆಗೋಡೆಯಾಗುತ್ತಿದೆ ಎಂದು ಹೇಳಲಾಗಿದೆ. 40 ವರ್ಷದ ಸರೋಜ್ ಗುಪ್ತಾ ನೈರುತ್ಯ ದೆಹಲಿಯ ಮುನಿರ್ಕಾದ ಕೊಳೆಗೇರಿಯಲ್ಲಿ ಒಂದು ಕೋಣೆಯ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಸರೋಜ್ ಗುಪ್ತಾ ಪತಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಲಸಿಕೆ ಪಡೆಯುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಈ ಮಹಿಳೆ, "ನಾನು ಭಯಭೀತಳಾಗಿದ್ದೇನೆ. ಏಕೆಂದರೆ ಲಸಿಕೆ ಪಡೆದ ಬಳಿಕ ಬಹಳಷ್ಟು ಜನರಿಗೆ ನ್ಯುಮೋನಿಯಾ, ಜ್ವರ ಅಥವಾ ಆಕ್ಸಿಜನ್ ಕೊರತೆ ಎದುರಾಗಿದೆ. ನನಗೆ ಏನಾದರೂ ಸಂಭವಿಸಿದರೆ ನನ್ನ ನಾಲ್ಕು ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ನನಗೆ ಅದರ ಭಯವಿದೆ. ನಾನು ಲಸಿಕೆ ಪಡೆಯಲು ಬಯಸುವುದಿಲ್ಲ," ಎಂದು ಎನ್‌ಡಿಟಿವಿಗೆ ಹೇಳಿದ್ದಾರೆ. ಇನ್ನು ಲಸಿಕೆ ಪಡೆಯಿರಿ ಎಂದು ಹೇಳಲು ಅಥವಾ ಲಸಿಕೆ ಬಗ್ಗೆ ಮಾಹಿತಿ ನೀಡಲು ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಆಶಾ ಕಾರ್ಯಕರ್ತರು ತಮ್ಮ ಮನೆಗೆ ಬಂದಿದ್ದಾರೆಯೇ ಎಂದು ಕೇಳಿದಾಗ, "ಯಾರೂ ಬರಲಿಲ್ಲ" ಎಂದು ಸರೋಜ್ ತಿಳಿಸಿದ್ದಾರೆ.

 ''ಲಸಿಕೆ ಕೇಂದ್ರಕ್ಕೆ ಹೋದಾಗ ಲಸಿಕೆಯೇ ಇರಲಿಲ್ಲ, ಮತ್ತೆ ಹೋಗಲಾರೆ''

''ಲಸಿಕೆ ಕೇಂದ್ರಕ್ಕೆ ಹೋದಾಗ ಲಸಿಕೆಯೇ ಇರಲಿಲ್ಲ, ಮತ್ತೆ ಹೋಗಲಾರೆ''

ಇನ್ನು 32 ವರ್ಷದ ಸಂಗೀತಾಗೆ ಲಸಿಕೆ ಕೇಂದ್ರಕ್ಕೆ ಹೋದಾಗ ಲಸಿಕೆಯೇ ದೊರೆತಿಲ್ಲ ಎಂದು ಹೇಳಿದ್ದಾರೆ. ಮನೆಕೆಲಸ ಮಾಡುವ ಆಕೆಗೆ ತಿಂಗಳಿಗೆ ಕೇವಲ 5,000 ರು. ಸಂಬಳ ಲಭಿಸುತ್ತದೆ. "ನಾನು ಹತ್ತಿರದ ಕೇಂದ್ರಕ್ಕೆ ಹೋಗಿದ್ದೆ. ಅಲ್ಲಿ ಲಸಿಕೆ ಇಲ್ಲ ಎಂದು ಹೇಳಿದ್ದಾರೆ. ಲಸಿಕೆ ಬೇಕಾದರೆ ದೂರ ಹೋಗಬೇಕು. ನನಗೆ ಅಷ್ಟು ದೂರ ಪ್ರಯಾಣ ಮಾಡಲು ಸಾಧ್ಯವಿಲ್ಲ. ಈ ದಿನಗಳಲ್ಲಿ ಬಸ್‌ನಲ್ಲಿ ಆಸನ ಪಡೆಯುವುದು ಕಷ್ಟ. ಆಟೊಗಳು ಹೆಚ್ಚಿನ ದರವನ್ನು ವಿಧಿಸುತ್ತವೆ. ನಾನು ಅದನ್ನು ಭರಿಸಲಾರೆ," ಎಂದಿದ್ದಾರೆ.

 ಈ ರಾಜ್ಯಗಳಲ್ಲಿ ಹೆಚ್ಚಿದೆ ಲಸಿಕೆ ವಿಚಾರದಲ್ಲಿ ಲಿಂಗ ಅಂತರ

ಈ ರಾಜ್ಯಗಳಲ್ಲಿ ಹೆಚ್ಚಿದೆ ಲಸಿಕೆ ವಿಚಾರದಲ್ಲಿ ಲಿಂಗ ಅಂತರ

ದೇಶದಲ್ಲಿ ಶೇ. 46 ರಷ್ಟು ಮಹಿಳೆಯರಿಗೆ ಹೋಲಿಸಿದರೆ ಶೇ.54 ರಷ್ಟು ಪುರುಷರು ಕೊರೊನಾ ಲಸಿಕೆ ಪಡೆದಿದ್ದಾರೆ. ಈ ಮಹಿಳೆಯರು ಹಾಗೂ ಪುರುಷರ ನಡುವಿನ ಲಸಿಕೆಯ ಅಂತರವು ಶೇ. 8 ರಷ್ಟಿದೆ. ಈ ಲಸಿಕೆ ಲಿಂಗ ಅಂತರ ಲೆಕ್ಕಾಚಾರವನ್ನು ರಾಜ್ಯಗಳ ನಡುವೆ ನೋಡಿದಾಗ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚು ಲಸಿಕೆ ಅಂತರವಿದೆ. ಈ ರಾಜ್ಯಗಳಲ್ಲಿ ಲಸಿಕೆ ಪಡೆದವರಲ್ಲಿ ಕೇವಲ 42 ಪ್ರತಿಶತದಷ್ಟು ಮಹಿಳೆಯರು ಇದ್ದರೆ, 58 ಪ್ರತಿಶತದಷ್ಟು ಪುರುಷರಾಗಿದ್ದಾರೆ.

 ಈ ನಾಲ್ಕು ರಾಜ್ಯಗಳಲ್ಲಿ ಮಾತ್ರವಿದೆ ಲಸಿಕೆಯಲ್ಲಿ ಸಮಾನತೆ

ಈ ನಾಲ್ಕು ರಾಜ್ಯಗಳಲ್ಲಿ ಮಾತ್ರವಿದೆ ಲಸಿಕೆಯಲ್ಲಿ ಸಮಾನತೆ

ಕೇವಲ ನಾಲ್ಕು ರಾಜ್ಯಗಳಲ್ಲಿ ಹೆಚ್ಚು ಮಹಿಳೆಯರು ಅಥವಾ ಸಮಾನವಾಗಿ ಮಹಿಳೆಯರೂ ಲಸಿಕೆ ಪಡೆದಿದ್ದಾರೆ. ಆಂಧ್ರಪ್ರದೇಶ, ಕೇರಳ, ಛತ್ತೀಸ್‌ಗಢ, ಹಿಮಾಚಲ ಪ್ರದೇಶದಲ್ಲಿ ಲಸಿಕೆ ವಿಚಾರದಲ್ಲಿ ಈ ಸಮಾನತೆಯಿದೆ. ಆಂಧ್ರಪ್ರದೇಶದಲ್ಲಿ ಶೇ.53 ರಷ್ಟು ಮಹಿಳೆಯರು ಲಸಿಕೆ ಪಡೆದಿದ್ದರೆ, ಶೇ. 46 ರಷ್ಟು ಪುರುಷರು ಲಸಿಕೆ ಪಡೆದಿದ್ದಾರೆ. ಇಲ್ಲಿ ಪುರುಷ, ಮಹಿಳೆಯರ ಲಸಿಕೆ ಪಡೆದ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಮಹಿಳೆಯರು ಹೆಚ್ಚಿಗೆ ಲಸಿಕೆ ಪಡೆದಿರುವುದು ಗಮನಾರ್ಹ. ಇನ್ನು ಕೇರಳದಲ್ಲಿ ಶೇ. 52 ರಷ್ಟು ಮಹಿಳೆಯರು ಹಾಗೂ ಶೇ. 48 ರಷ್ಟು ಪುರುಷರು ಲಸಿಕೆ ಪಡೆದಿದ್ದಾರೆ. ಇನ್ನು ಛತ್ತೀಸ್‌ಗಢದಲ್ಲಿ ಶೇ. 50 ರಷ್ಟು ಮಹಿಳೆಯರು ಹಾಗೂ ಶೇ. 49.6 ಪುರುಷರು ಲಸಿಕೆ ಪಡೆದಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶೇ. 49.9 ಮಹಿಳೆಯರು ಹಾಗೂ ಶೇ. 50 ಪುರುಷರು ಲಸಿಕೆ ಪಡೆದಿದ್ದಾರೆ.

 ಕೋವಿಡ್‌ ಲಸಿಕೆಯ ರಾಷ್ಟ್ರೀಯ ತಜ್ಞರ ಗುಂಪಿನ ಅಧ್ಯಕ್ಷ ಡಾ.ವಿ.ಕೆ ಪೌಲ್‌ ಹೇಳಿದ್ದಿಷ್ಟು..

ಕೋವಿಡ್‌ ಲಸಿಕೆಯ ರಾಷ್ಟ್ರೀಯ ತಜ್ಞರ ಗುಂಪಿನ ಅಧ್ಯಕ್ಷ ಡಾ.ವಿ.ಕೆ ಪೌಲ್‌ ಹೇಳಿದ್ದಿಷ್ಟು..

ಕೋವಿಡ್ -19 ಲಸಿಕೆಯ ರಾಷ್ಟ್ರೀಯ ತಜ್ಞರ ಗುಂಪಿನ ಅಧ್ಯಕ್ಷ ಡಾ.ವಿ.ಕೆ ಪೌಲ್‌ ಈ ಲಸಿಕೆ ವಿಚಾರದಲ್ಲಿನ ಲಿಂಗ ಅಸಮಾನತೆ ಒಪ್ಪಿಕೊಂಡಿದ್ದಾರೆ. "ಮುಂದಿನ ದಿನಗಳಲ್ಲಿ ಲಿಂಗ ಅಸಮತೋಲನವನ್ನು ಸರಿಪಡಿಸಬೇಕಾಗಿದೆ. ಈ ಅಸಮತೋಲನ ಇರುವಲ್ಲಿ ಪರಿಹರಿಸಬೇಕಾಗಿದೆ, ಮಹಿಳೆಯರಿಗೆ ಲಸಿಕೆ ಪಡೆಯಲು ಸುಲಭವಾಗುವ ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ. ಜಾಗೃತಿ ಮೂಡಿಸುವುದು ಇದಕ್ಕೆ ಸೂಕ್ತ ಪರಿಹಾರವೆಂದು ಕೂಡಾ ಇದೇ ವೇಳೆ ಹೇಳಿದ್ದಾರೆ.

 ಡಾ. ಸುನೀಲಾ ಗರ್ಗ್ ಹೇಳಿದ್ದಿಷ್ಟು..

ಡಾ. ಸುನೀಲಾ ಗರ್ಗ್ ಹೇಳಿದ್ದಿಷ್ಟು..

ಲ್ಯಾನ್ಸೆಟ್ ಆಯೋಗದ ಕೋವಿಡ್ -19 ಟಾಸ್ಕ್ ಫೋರ್ಸ್ಮ್ ಸದಸ್ಯೆ, ಐಸಿಎಂಆರ್ ಸಲಹೆಗಾರರು ಡಾ.ಸುನೀಲಾ ಗರ್ಗ್ ಈ ವಿಚಾರದಲ್ಲಿ, "ಮೊದಲನೆಯದಾಗಿ, ಮಹಿಳೆಯರಲ್ಲಿ ಲಸಿಕೆ ಹಿಂಜರಿಕೆಯನ್ನು, ಅವರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಕಾರ್ಯ ಆಗಬೇಕು. ಆಶಾ ಕಾರ್ಮಿಕರು ಮನೆ-ಮನೆಗೆ ತೆರಳಿ ಮಹಿಳೆಯರಿಗೆ ಲಸಿಕೆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

ಎರಡನೆಯದಾಗಿ, ಭಾರತೀಯ ನೆಲೆಯಲ್ಲಿ ಮಹಿಳೆಯರು ಹೆಚ್ಚಾಗಿ ಪುರುಷರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಪುರುಷರಲ್ಲಿ ಜಾಗೃತಿ ಮೂಡಿಸುವುದು ಕೂಡಾ ಮುಖ್ಯ. ಪುರುಷರು ತಾವು ಲಸಿಕೆ ಹಾಕುವುದು ಮಾತ್ರವಲ್ಲದೇ ತಮ್ಮ ಕುಟುಂಬದ ಮಹಿಳೆಯರಿಗೂ ಹಾಕಿಸುತ್ತಾರೆಯೇ ಎಂಬುವುದನ್ನು ಆಶಾ ಕಾರ್ಯಕರ್ತೆಯರು ಖಚಿತಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+