ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 1ರ ಮೊದಲು ಕೇರಳಕ್ಕೆ ಮುಂಗಾರು - IMD

|
Google Oneindia Kannada News

ನವದೆಹಲಿ ಮೇ 27: ಮೇ 15 ರಂದು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮುಂಗಾರು ಅಪ್ಪಳಿಸಿದ ನಂತರ ಹವಾಮಾನ ಇಲಾಖೆಯು ಮೇ 27 ರಂದು ಮುಂಗಾರು ಕೇರಳವನ್ನು ತಲುಪುತ್ತದೆ ಎಂದು ಹೇಳಿತ್ತು. ಸಾಮಾನ್ಯವಾಗಿ ಇದು ಜೂನ್ 1 ರಂದು ಕೇರಳವನ್ನು ತಲುಪುತ್ತದೆ. ಆದರೆ ಈ ಬಾರಿ ಅದು ಸಮಯಕ್ಕಿಂತ ಮುಂಚಿತವಾಗಿ ಅಂದರೆ ಮೇ 27 ರಂದು ತಲುಪುತ್ತದೆ ಎಂದು ಹೇಳಲಾಗಿತ್ತು. ಆದರೀಗ ಜೂನ್ 1 ರ ಮೊದಲು ಕೇರಳದಲ್ಲಿ ಮುಂಗಾರು ಅಪ್ಪಳಿಸಲಿದೆ ಎಂದು ಹವಮಾನ ಇಲಾಖೆ ತನ್ನ ನವೀಕರಣದಲ್ಲಿ ಹೇಳಿದೆ.

ಐಎಂಡಿ ತನ್ನ ಟ್ವೀಟ್‌ನಲ್ಲಿ 'ದಕ್ಷಿಣ ಅರೇಬಿಯನ್ ಸಮುದ್ರದ ಮೇಲೆ ಪಶ್ಚಿಮ ಮಾರುತಗಳು ತೀವ್ರಗೊಂಡಿದೆ. ಉಪಗ್ರಹ ಚಿತ್ರಗಳ ಪ್ರಕಾರ, ಕೇರಳ ಕರಾವಳಿ ಮತ್ತು ಪಕ್ಕದ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಮೋಡ ಕವಿದಿದೆ. ಹೀಗಾಗಿ, ಮುಂದಿನ 2-3 ದಿನಗಳಲ್ಲಿ ಕೇರಳದ ಮೇಲೆ ಮುಂಗಾರು ಆರಂಭಕ್ಕೆ ಅನುಕೂಲಕರವಾದ ಪರಿಸ್ಥಿತಿಗಳು ಇವೆ' ಎಂದಿದೆ.

ಟಿಮೋರ್ ಕರಾವಳಿಯಲ್ಲಿ ಭೂಕಂಪ: ಸುನಾಮಿ ಎಚ್ಚರಿಕೆಟಿಮೋರ್ ಕರಾವಳಿಯಲ್ಲಿ ಭೂಕಂಪ: ಸುನಾಮಿ ಎಚ್ಚರಿಕೆ

ಮುಂಗಾರು ಪ್ರವೇಶಕ್ಕೂ ಮುನ್ನ ಮಳೆ

ಮುಂಗಾರು ಪ್ರವೇಶಕ್ಕೂ ಮುನ್ನ ಮಳೆ

ಅನುಕೂಲಕರ ವಾತಾವರಣವಿಲ್ಲದಿರುವುದು ಕೇರಳಕ್ಕೆ ಮುಂಗಾರು ಪ್ರವೇಶ ವಿಳಂಬಕ್ಕೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ. ಮಾನ್ಸೂನ್ ಆಗಮನಕ್ಕೆ ಗಾಳಿಯಲ್ಲಿ ಸ್ಥಿರತೆಯ ಅಗತ್ಯವಿದೆ ಮತ್ತು ಪ್ರಸ್ತುತ ಕೇರಳದಲ್ಲಿ ಪಶ್ಚಿಮ ಮಾರುತಗಳು ಮುಂದುವರೆದಿದೆ, ಆದ್ದರಿಂದ ಅದು ಇಂದು ಕೇರಳವನ್ನು ತಲುಪುತ್ತಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಆದರೆ ಕೇರಳದಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನ ಮುಂಗಾರು ಪೂರ್ವ ಮಳೆ ಮುಂದುವರಿದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿಯೂ ಮಳೆ ಮುಂದುವರೆಯಲಿದೆ. ಇದರಿಂದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆದರೆ, ಈ ವರ್ಷ ಶೇ.99ರಷ್ಟು ಮುಂಗಾರು ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಮುಂಗಾರು ಹಂಗಾಮು ರೈತರಿಗೆ ಸಂತಸ ತರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಪ್ರವಾಹ ಪೀಡಿತ ಅಸ್ಸಾಂಗೆ 324 ಕೋಟಿ ರೂ. ಬಿಡುಗಡೆಪ್ರವಾಹ ಪೀಡಿತ ಅಸ್ಸಾಂಗೆ 324 ಕೋಟಿ ರೂ. ಬಿಡುಗಡೆ

ಮುಂಗಾರು ಚುರುಕು ಸಾಧ್ಯತೆ

ಮುಂಗಾರು ಚುರುಕು ಸಾಧ್ಯತೆ

ಹೀಗಾಗಿ ಮುಂದಿನ 48 ಗಂಟೆಗಳಲ್ಲಿ ಆಗ್ನೇಯ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಕೆಲವು ಭಾಗಗಳಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಮಾಹಿತಿ ಸಂಸ್ಥೆ ಸ್ಕೈಮೆಟ್ ತಿಳಿಸಿದೆ. ಮಾನ್ಸೂನ್ ಸಾಮಾನ್ಯ ಸಮಯಕ್ಕೆ ಕೇರಳವನ್ನು ತಲುಪುತ್ತದೆ ಮತ್ತು ತಡವಾಗುವುದಿಲ್ಲ ಎಂದಿದೆ.

ಮೊದಲು ಎಲ್ಲಿ ಆಗುತ್ತದೆ?

ಮೊದಲು ಎಲ್ಲಿ ಆಗುತ್ತದೆ?

ಮಾನ್ಸೂನ್ ಮಳೆಯು ಋತುಮಾನದ ಮಳೆಯಾಗಿದೆ. ಬಿರು ಬೇಸಿಗೆಯ ನಂತರ ಮುಂಗಾರು ಹಂಗಾಮು ಆರಂಭವಾಗುತ್ತದೆ. ಭಾರತದಲ್ಲಿ ಇದು ಜೂನ್ ನಿಂದ ಸೆಪ್ಟೆಂಬರ್ ವರೆಗೆ ಅಂದರೆ ನಾಲ್ಕು ತಿಂಗಳವರೆಗೆ ಇರುತ್ತದೆ. ಭೂಮಿಯ ಮೇಲ್ಮೈ ಸಾಕಷ್ಟು ಬೆಚ್ಚಗಿರುವಾಗ, ಅರೇಬಿಯನ್ ಸಮುದ್ರದಲ್ಲಿನ ಕಡಿಮೆ ಒತ್ತಡದ ಪ್ರದೇಶದಿಂದ ತೇವಾಂಶ-ಹೊತ್ತ ಗಾಳಿಯು ಮೇಲಕ್ಕೆ ಚಲಿಸುತ್ತದೆ ಮತ್ತು ಮೋಡಗಳೊಂದಿಗೆ ಡಿಕ್ಕಿ ಹೊಡೆದು ಮಳೆಯಾಗುತ್ತದೆ. ಈ ಗಾಳಿಯ ವೇಗವು ತುಂಬಾ ವೇಗವಾಗಿರುತ್ತದೆ, ಇದು ಭಾರತದಲ್ಲಿ ಮೊದಲು ಕೇರಳದ ಕರಾವಳಿಗೆ ಅಪ್ಪಳಿಸುತ್ತದೆ ಮತ್ತು ಮಳೆಯೊಂದಿಗೆ ತಂಪಾಗುತ್ತದೆ.

ಜುಲೈನಲ್ಲಿ ಇಡೀ ಭಾರತದಲ್ಲಿ ಮುಂಗಾರು ಮಳೆ

ಜುಲೈನಲ್ಲಿ ಇಡೀ ಭಾರತದಲ್ಲಿ ಮುಂಗಾರು ಮಳೆ

ಕೇರಳದ ನಂತರ ಮುಂಗಾರು ಮಹಾರಾಷ್ಟ್ರದತ್ತ ಸಾಗುತ್ತಿದೆ. ಸಾಮಾನ್ಯವಾಗಿ ಈ ಅವಧಿಯು ಜೂನ್ 10 ರ ಆಸುಪಾಸಿನಲ್ಲಿದೆ. ನಂತರ ಅದು ದೆಹಲಿಯನ್ನು ತಲುಪುತ್ತದೆ, ಅದು ಜೂನ್ ಕೊನೆಯಾಗಿರುತ್ತದೆ ಮತ್ತು ದೆಹಲಿಯ ನಂತರ ಅದು ಜುಲೈನಲ್ಲಿ ಇಡೀ ಉತ್ತರ ಭಾರತವನ್ನು ಮತ್ತು ಇಡೀ ಭಾರತದಲ್ಲಿ ಮಳೆಯ ರೂಪದಲ್ಲಿ ಆವರಿಸುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Weather department has said in its update that monsoon is likely to hit Kerala before June 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X