ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಅಧಿವೇಶನದಲ್ಲಿ ಮೋದಿ ಸರ್ಕಾರಕ್ಕೆ ಐದು ಸವಾಲುಗಳು

By Mahesh
|
Google Oneindia Kannada News

Recommended Video

ಚಳಿಗಾಲದ ಅಧಿವೇಶನ ಜುಲೈ 18ರಿಂದ : ಮೋದಿ ಸರ್ಕಾರಕ್ಕೆ 5 ಸವಾಲುಗಳು | Oneindia Kannada

ನವದೆಹಲಿ, ಜುಲೈ 13: ಮುಂಗಾರು ಅಧಿವೇಶನವನ್ನು ಎದುರಿಸಲು ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸಜ್ಜಾಗುತ್ತಿದೆ. ಜುಲೈ 18ರಿಂದ ಆರಂಭವಾಗಲಿರುವ ಅಧಿವೇಶನವು 18 ದಿನಗಳ ಕಾಲ ಬಿಸಿಬಿಸಿ ಚರ್ಚೆಗೆ ವೇದಿಕೆ ಒದಗಿಸಲಿದೆ. ಈ ಸಂದರ್ಭದಲ್ಲಿ ಐದು ಪ್ರಮುಖ ಮಸೂದೆಗಳನ್ನು ಮಂಡಿಸಲು ಮೋದಿ ಸರ್ಕಾರ ಸಿದ್ಧವಾಗಿದೆ.

ಕಳೆದ ವರ್ಷದ ಮುಂಗಾರು ಅಧಿವೇಶನದಲ್ಲಿ 13 ಮಸೂದೆಗಳು ಮಂಡನೆಯಾಗಿತ್ತು. 34 ಗಂಟೆ, 29 ನಿಮಿಷಗಳ ಕಾಲ ಉಭಯ ಸದನಗಳಲ್ಲಿ ಮಸೂದೆ ಬಗ್ಗೆ ಚರ್ಚೆ ನಡೆದಿತ್ತು.

Monsoon Session of Parliament begins next Wednesday: Here’s what to expect

ಸಂಸದೀಯ ವ್ಯವಹಾರಗಳ ಖಾತೆ (ರಾಜ್ಯ) ಸಚಿವ ವಿಜಯ್ ಗೋಯಲ್ ಅವರು ಅಧಿವೇಶನದ ಬಗ್ಗೆ ಮಾಹಿತಿ ನೀಡಿ, ಲೋಕಸಭೆಯಲ್ಲಿ 68 ಮಸೂದೆಗಳು ಹಾಗೂ ರಾಜ್ಯ ಸಭೆಯಲ್ಲಿ 40 ಮಸೂದೆಗಳು ಬಾಕಿ ಉಳಿದಿವೆ ಎಂದು ಲೋಕಸಭೆ ಹಾಗೂ ರಾಜ್ಯಸಭೆ ವೆಬ್ ಸೈಟಿನಲ್ಲಿ ಹೇಳಲಾಗಿದೆ. ಆದರೆ, ಕ್ರಮವಾಗಿ 27 ಹಾಗೂ 48 ಮಸೂದೆಗಳು ಮಂಡನೆಯಾಗಬೇಕಿದೆ ಎಂದರು.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಐದು ಪ್ರಮುಖ ಮಸೂದೆಗಳು ಮಂಡನೆಯಾಗಲು ಸಿದ್ಧವಾಗಿವೆ.
1. 123ನೇ ಸಂವಿಧಾನ ತಿದ್ದುಪಡಿ ಮಸೂದೆ
2. ಸಂವಿಧಾನದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ತಿದ್ದುಪಡಿ) ಮಸೂದೆ 2016.
3. ಬಾಡಿಗೆ ತಾಯಿ(ಸಕ್ರಮ) ಮಸೂದೆ
4. ಮುಸ್ಲಿಂ ಮಹಿಳೆ (ಮದುವೆ ಹಕ್ಕು ಭದ್ರತೆ) ಕಾಯ್ದೆ
5. ರಾಷ್ಟ್ರೀಯ ಆರೋಗ್ಯ ಆಯೋಗ ಮಸೂದೆ

123ನೇ ಸಂವಿಧಾನ ತಿದ್ದುಪಡಿ ಮಸೂದೆ

123ನೇ ಸಂವಿಧಾನ ತಿದ್ದುಪಡಿ ಮಸೂದೆ

123ನೇ ಸಂವಿಧಾನ ತಿದ್ದುಪಡಿ ಮಸೂದೆ : ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದು. ಹಾಲಿ ಹಿಂದುಳಿದ ವರ್ಗಗಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಹೆಚ್ಚಿಸಿ, ಹೊಸ ಕೋಟಾ ಸೇರಿಸಲು ಮೋದಿ ಅವರು ಮುಂದಾಗಿದ್ದಾರೆ. ಇದರಲ್ಲಿ ಗೆದ್ದರೆ, ಮುಂದಿನ ಚುನಾವಣೆಯಲ್ಲಿ ಪ್ರಮುಖ ಅಸ್ತ್ರ ಸಿಕ್ಕಿದ ಹಾಗೆ ಆಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ತಿದ್ದುಪಡಿ) ಮಸೂದೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ತಿದ್ದುಪಡಿ) ಮಸೂದೆ

2. ಸಂವಿಧಾನದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ತಿದ್ದುಪಡಿ) ಮಸೂದೆ 2016.
ಕಾಯ್ದೆಗೆ ಸೇರ್ಪಡೆಯಾಗದಿರುವ ಎಸ್ ಸಿ /ಎಸ್ಟಿಪಟ್ಟಿಯನ್ನು ಸೇರ್ಪಡೆಗೊಳಿಸುವುದು. 1950ರ ಎಸ್ಟಿ ಕಾಯ್ದೆಗೆ ತಿದ್ದುಪಡಿ ಮಾಡಿ, ಅಸ್ಸಾಂ, ಚತ್ತೀಸ್ ಗಢ, ಜಾರ್ಖಂಡ್, ತಮಿಳುನಾಡು ಹಾಗೂ ತ್ರಿಪುರದ ಬುಡಕಟ್ಟುಜನಾಂಗದವರ್ರೆ ನೆರವಾಗುವುದು. ಚತ್ತೀಸ್ ಗಢದಲ್ಲಿ ಈ ವರ್ಷ ಚುನಾವಣೆ ನಡೆಯಲಿದ್ದು, ಬುಡಕಟ್ಟು ಜನಾಂಗದ ಮತಗಳನ್ನು ಬಿಜೆಪಿ ಸೆಳೆಯಬಹುದು.

ಬಾಡಿಗೆ ತಾಯಿ(ಸಕ್ರಮ) ಮಸೂದೆ

ಬಾಡಿಗೆ ತಾಯಿ(ಸಕ್ರಮ) ಮಸೂದೆ

2016ರ ನವೆಂಬರ್ ನಿಂದ ಮಸೂದೆ ಮಂಡನೆಯಾಗದೆ ಉಳಿದಿದೆ. ಬಾಡಿಗೆ ತಾಯಿ ವ್ಯವಸ್ಥೆ ಬಳಸಲು ದಂಪತಿಗೆ ಸೂಕ್ತ ನೀತಿ ನಿಯಮಗಳನ್ನು ಈ ಮಸೂದೆ ತಿಳಿಸಲಿದೆ. ಹತ್ತಿರದ ಸಂಬಂಧಿಗಳನ್ನು ಮಾತ್ರ ಬಾಡಿಗೆ ತಾಯಿಯಾಗಿ ಹೊಂದಬಹುದು. ಆದರೆ, ಹತ್ತಿರದ ಸಂಬಂಧಿ ಎಂಬ ವ್ಯಾಖ್ಯೆಗೆ ಸರಿಯಾದ ವಿವರಣೆ ಇನ್ನೂ ಸಿಕ್ಕಿಲ್ಲ

ಮುಸ್ಲಿಂ ಮಹಿಳೆ (ಮದುವೆ ಹಕ್ಕು ಭದ್ರತೆ) ಕಾಯ್ದೆ

ಮುಸ್ಲಿಂ ಮಹಿಳೆ (ಮದುವೆ ಹಕ್ಕು ಭದ್ರತೆ) ಕಾಯ್ದೆ

ಮುಸ್ಲಿಂ ಮಹಿಳೆ (ಮದುವೆ ಹಕ್ಕು ಭದ್ರತೆ) ಮಸೂದೆ ಅಥವಾ ತ್ರಿವಳಿ ತಲಾಖ್ ಮಸೂದೆ ಇನ್ನೂ ವಿವಾದದಿಂದ ಹೊರ ಬಂದು ಕಾಯ್ದೆ ರೂಪ ಪಡೆದುಕೊಂಡಿಲ್ಲ. ಪತ್ರ ರೂಪದ ತಲಾಖ್ ಅಥವಾ ಇಮೇಲ್ ಮೂಲಕದ ತಲಾಖ್ ಗೆ ಮಾನ್ಯತೆ ಇಲ್ಲ. ಜಾಮೀನು ರಹಿತ ಅಪರಾಧ ಹಾಗೂ ಮೂರು ವರ್ಷಗಳ ಶಿಕ್ಷೆ ಬಗ್ಗೆ ಸರಿಯಾದ ಒಮ್ಮತ ಮೂಡಿಲ್ಲ. ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿ ಓಕೆ ಯಾಗಿದ್ದರೂ ರಾಜ್ಯಸಭೆಯಲ್ಲಿ ಓಕೆ ಆಗಿಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ಈ ಬಾರಿ ಸಂಸತ್ತಿನ ಕಲಾಪವನ್ನು ಈ ಮಸೂದೆ ಆವರಿಸಲಿದೆ.

ರಾಷ್ಟ್ರೀಯ ಆರೋಗ್ಯ ಆಯೋಗ ಮಸೂದೆ

ರಾಷ್ಟ್ರೀಯ ಆರೋಗ್ಯ ಆಯೋಗ ಮಸೂದೆ

ರಾಷ್ಟ್ರೀಯ ಆರೋಗ್ಯ ಆಯೋಗ ಸ್ಥಾಪಿಸಿ, ಮೆಡಿಕಲ್ ಶಿಕ್ಷಣ ಹಾಗೂ ತರಬೇತಿ ಮೇಲೆ ನಿಯಂತ್ರಣ ಹೊಂದಲು ಸರ್ಕಾರ ಮುಂದಾಗಿದೆ. ಇದಲ್ಲದೆ ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳ ಶೇ 40ರಷ್ಟು ಸೀಟುಗಳ ಮೇಲೆ ಎನ್ ಎಂಸಿ ನಿಯಂತ್ರಣ ಹೊಂದಲಿದೆ.

English summary
The Monsoon Session of Parliament is set to begin on July 18 and will go on for 18 days until August 10. The session is expected to clear pending Bills and Ordinances and introduce new ones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X