ತಬ್ಬು ತಬ್ಬಿಬ್ಬು, ಕಾರ್ಟೂನ್ ನಲ್ಲೇ ಕಣ್ಮಿಟುಕಿಸಿದ ಅಮೂಲ್ ಬೇಬಿ!

ಸಕಾಲಿಕ ವಿಷಯಕ್ಕೆ ಹಾಸ್ಯದ ಸ್ಪರ್ಶ ನೀಡುವ ಅಮೂಲ್ ಬೇಬಿಯ ಇಂದಿನ ವಿಶೇಷ ಹಗ್! ಹೌದು, ನರೇಂದ್ರ ಮೋದಿಯವರನ್ನು ತಬ್ಬಿಕೊಂಡು ಲೋಕಸಭೆಯನ್ನು ತಬ್ಬಿಬ್ಬಾಗಿಸಿದ ರಾಹುಲ್ ಗಾಂಧಿ ಅವರ ಕಾರ್ಟೂನ್ ಇಂದಿನ ಅಮೂಲ್ ಬೇಬಿ ಕಾರ್ಟೂನಿನ ವಿಶೇಷ.

ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ನಿನ್ನೆ(ಜು.21) ವಿರೋಧ ಪಕ್ಷಗಳು ಎನ್ ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದವು. ಇದಕ್ಕೂ ಮುನ್ನ ಮಾತನಾಡಿದ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, 'ಹಿಂದು ಧರ್ಮ ಎಲ್ಲರನ್ನೂ ಗೌರವದಿಂದ ಕಾಣಿ ಎಂದು ಹೇಳುತ್ತದೆ. ನೀವು ನನ್ನನ್ನು ಪಪ್ಪು ಎಂದು ಕರೆಯಬಹುದು. ಆದರೆ ನಾನು ನಿಮ್ಮನ್ನು ಗೌರವಿಸುತ್ತೇನೆ' ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡರು. ಈ ಅನಿರೀಕ್ಷಿತ ಕ್ಷಣಕ್ಕೆ ಕೆಲ ಹೊತ್ತು ಲೋಕಸಭೆಯಲ್ಲಿ ಮೌನ ಆವರಿಸಿತ್ತು. ಇದಾಗಿ ಕೆಲ ಹೊತ್ತಿನಲ್ಲೇ ರಾಹುಲ್ ಗಾಂಧಿ ಕಣ್ಮಿಟುಕಿಸಿದರು.

ಈ ಎರಡೂ ಕ್ಷಣಗಳನ್ನೂ ಒಂದೇ ಚಿತ್ರದಲ್ಲಿ ಹಿಡಿದಿಟ್ಟಿದೆ ಅಮೂಲ್. ಓದಿಯವರನ್ನು ತಬ್ಬಿಕೊಂಡು, ಕಣ್ಮಿಟುಕಿಸುತ್ತಿರುವ ರಾಹುಲ್ ಇಂದಿನ ಅಮೂಲ್ ಕಾರ್ಟೂನ್ ವಿಶೇಷ!

Monsoon session: Hug and wink cartoon by Amul

ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಜು.20 ರಂದು ನಡೆದ ವಿಶ್ವಾಸ ಮತ ನಿರ್ಣಯ ಪ್ರಕ್ರಿಯೆಯಲ್ಲಿ ಬಿಜೆಪಿ 325 ಮತ ಪಡೆದು ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+