ಚುನಾವಣೆ ಫಲಿತಾಂಶ 
ಮಧ್ಯ ಪ್ರದೇಶ - 230
PartyLW
CONG1150
BJP1050
BSP40
OTH60
ರಾಜಸ್ಥಾನ - 199
PartyLW
CONG1004
BJP644
IND120
OTH141
ಛತ್ತೀಸ್ ಗಢ - 90
PartyLW
CONG651
BJP170
BSP+60
OTH10
ತೆಲಂಗಾಣ - 119
PartyLW
TRS1570
TDP, CONG+518
AIMIM25
OTH13
ಮಿಜೋರಾಂ - 40
PartyLW
MNF026
IND08
CONG05
OTH01
 • search

ಮುಂಗಾರು ಅಧಿವೇಶನ : 21 ಮಸೂದೆ ಅಂಗೀಕಾರ- ಅನಂತ್ ಹರ್ಷ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ ಆಗಸ್ಟ್ 10: ಕೇಂದ್ರ ಸರಕಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ 21 ಮಹತ್ವಪೂರ್ಣ ಮಸೂದೆಗಳಿಗೆ ಅಂಗೀಕಾರ ನೀಡುವ ಮೂಲಕ ಈ ಬಾರಿಯ ಮುಂಗಾರು ಅಧಿವೇಶನ ಬಹಳ ಫಲಪ್ರದವಾಗಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

  ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಅನಂತಕುಮಾರ್ ಅಧಿವೇಶನದ ಬಗ್ಗೆ ಮಾಹಿತಿಯನ್ನು ನೀಡಿದರು.

  ಮುಂಬೈಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ: ಖರ್ಗೆಗೆ ಗೋಯಲ್ ಚಾಲೆಂಜ್

  ಅಲ್ಲದೆ ಈ ಬಾರಿಯ ಮುಂಗಾರು ಅಧಿವೇಶನ ಸಮರ್ಪಕವಾಗಿ ಹಾಗೂ ಫಲಪ್ರದವಾಗಿ ನಡೆಯಲು ಅವಕಾಶ ಮಾಡಿಕೊಟ್ಟ ಸದಸ್ಯರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಅಧಿವೇಶನದಲ್ಲಿ 21 ಮಸೂದೆಗಳನ್ನು ಅಂಗೀಕರಿಸಲಾಯಿತು. ಈಬಾರಿಯ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯ ಉತ್ಪಾದಕತೆ ಶೇಕಡಾ 118 ಮತ್ತು ರಾಜ್ಯ ಸಭೆಯ ಉತ್ಪಾದಕತೆ ಶೇಕಡಾ 68 ಎಂದರು.

  Monsoon Session 2018 : Ananth Kumar on Bills passed on Lok Sabha

  ಕರುಣಾನಿಧಿಯವರಿಗೆ ಶ್ರದ್ದಾಂಜಲಿ ಸಲ್ಲಿಸಲು ಒಂದು ದಿನ ಅಧಿವೇಶನ ಮೊಟಕುಗೊಂಡಿದ್ದರೂ ಕೂಡಾ, ನಿಗದಿಪಡಿಸಿದ್ದಕ್ಕಿಂತಾ 22 ಕ್ಕೂ ಹೆಚ್ಚು ಗಂಟೆಗಳ ಕಾಲ ಸದನ ತನ್ನ ಕಾರ್ಯಕಲಾಪವನ್ನು ನಡೆಸಿದೆ. ಈ ಬಾರಿಯ ಅಧಿವೇಶನದಲ್ಲಿ 30 ಮಸೂದೆಗಳನ್ನು ಪರಿಚಯಿಸಲಾಯಿತು. ಅದರಲ್ಲಿ 21 ಮಸೂದೆಗಳು ಅಂಗೀಕಾರಗೊಂಡಿವೆ.

  ವ್ಯಕ್ತಿ ಚಿತ್ರ : ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ್

  ಒಂದು ದಿನ ಅವಿಶ್ವಾಸ ಗೊತ್ತುವಳಿಗೆ ಮೀಸಲಿಡಲಾಗಿತ್ತು. ಬಹಳ ದಿನಗಳ ಕನಸಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಡಗದ ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಮಸೂದೆಯನ್ನೂ ಈ ಬಾರಿ ಅಂಗೀಕರಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ಮಹತ್ವದ ವಿಷಯಗಳಾದ ಪ್ರವಾಹ ಮತ್ತು ಬರದಂತಹ ಹಲವಾರು ಪ್ರಮುಖ ವಿಷಯಗಳನ್ನು ಚರ್ಚಿಲಾಯಿತು ಎಂದು ತಿಳಿಸಿದರು.

  ತ್ರಿವಳಿ ತಲಾಖ್ ಬಗ್ಗೆ: ತ್ರಿವಳಿ ತಲಾಖ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮುಸ್ಲಿಂ ಮಹಿಳೆಯರ ಹಿತಾಸಕ್ತಿಗೆ ಪೂರಕವಾಗಿದ್ದ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾಗದೇ ಇರುವುದು ಬಹಳ ದುಖಃಕರ ಸಂಗತಿ ಎಂದರು. ಈ ಮಸೂದೆ ಕೇಂದ್ರ ಸರಕಾರ ಅಂಗೀಕರಿಸಿದ ಇತರೇ ಪ್ರಮುಖ ಮಸೂದೆಗಳಾದ ಎಸ್ ಸಿ ಎಸ್ ಟಿ ಮತ್ತು ಎನ್ ಸಿ ಬಿ ಸಿ ಯಂತಹ ಸಾಮಾಜಿಕ ಹಾಗೂ ಲಿಂಗ ಸಮಾನತೆಯಂತಹ ಮಹತ್ವದ ಹಾಗೂ ಸಂಕೀರ್ಣ ಮಸೂದೆಯಾಗಿತ್ತು.

  Monsoon Session 2018 : Ananth Kumar on Bills passed on Lok Sabha

  ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಪಕ್ಷ ಮುಸ್ಲೀಂ ಸಹೋದರಿಯರಿಗೆ ನ್ಯಾಯ ಒದಗಿಸುವ ಈ ಮಸೂದೆಗೆ ಬೆಂಬಲ ನೀಡುವ ಮುತುವರ್ಜಿಯನ್ನು ತೋರಿಸಲಿಲ್ಲಾ.


  ಕೇಂದ್ರ ಸರಕಾರಕ್ಕೆ ಇನ್ನೂ ಆಶಾಭಾವನೆ ಇದೆ, ಕಾಂಗ್ರೆಸ್ ಗೆ ಒಳ್ಳೆಯ ಭಾವನೆ ಮೂಡುವ ಮೂಲಕ ಕಾಂಗ್ರೆಸ್ ನವರು ತಲಾಖ್ - ಇ - ಬಿದ್ದತ್ ನಿಂದ ತೊಂದರೆಗೊಳಗಾಗಿರುವ ಮುಸ್ಲೀಂ ಮಹಿಳೆಯರಿಗಾಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಈ ಮಸೂದೆಯನ್ನು ಅಂಗೀಕಾರಗೊಳಿಸಲು ಸಹಕಾರ ನೀಡಲಿದ್ದಾರೆ ಎಂದರು.

  ಇದು ಕಾಂಗ್ರೆಸ್ ಪಕ್ಷದ ಇಬ್ಬಗೇ ನೀತಿಯ ಕರಾಳ ಪ್ರದರ್ಶನವಾಗಿದೆ. ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಬಹುಮತಗಳಿಂದ ಅಂಗೀರಕಾರವಾಗಿತ್ತು. ಆದರೆ, ರಾಜ್ಯ ಸಭೆಯಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಈ ಮಸೂದೆಯನ್ನು ಹಿಡಿದಿಟ್ಟುಕೊಂಡಿದೆ ಎಂದರು. ಇದಕ್ಕೆ ಒಂದು ಸಮಿತಿಯ ಕಾರಣವನ್ನಿಟ್ಟುಕೊಂಡು ಇಂತಹ ಮಹತ್ವದ ಮಸೂದೆಯ ಅಂಗೀಕಾರಕ್ಕೆ ತಡೆಹಾಕಿದೆ. ಮುಂದಿನ ದಿನಗಳಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಜಾರಿಗೆ ಸರಕಾರ ಬದ್ದವಾಗಿರಲಿದೆ ಎಂದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Union Parliamentary Affairs Minister Ananth Kumar extended his gratitude and congratulations to all the members of Parliament in making the Monsoon Session 2018 a great success. The government, under the able leadership of PM Narendra Modi was able to get important bills passed as all the members cooperated by sitting

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more