ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ

|
Google Oneindia Kannada News

ಗಾಜಿಪುರ ಡಿಸೆಂಬರ್ 15: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಶಾಸಕ ಹಾಗೂ ಬಾಹುಬಲಿ ಮುಖ್ತಾರ್ ಅನ್ಸಾರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮಾಜಿ ಶಾಸಕ ಅನ್ಸಾರಿಗೆ ನ್ಯಾಯಾಲಯ 5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿ ಮತ್ತು ಭಾಮ್ ಸಿಂಗ್ ತಪ್ಪಿತಸ್ಥರು ಎಂದು ಸಾಬೀತಾಗಿದೆ. ಇದಾದ ನಂತರ ಗಾಜಿಪುರ ಐದು ಬಾರಿ ಶಾಸಕನಾದ ಅನ್ಸಾರಿ ಹಾಗೂ ಭಾಮ್ ಸಿಂಗ್ ಅವರನ್ನು ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿತ್ತು. ಇದರೊಂದಿಗೆ ಮುಕ್ತಾರ್‌ಗೆ 5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. 1996ರಲ್ಲಿ ದಾಖಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ 26 ವರ್ಷ ಪೂರೈಸಿದ ಬಳಿಕ ಇಂದು ಕೋರ್ಟ್ ತೀರ್ಪು ನೀಡಿದೆ.

ಇದಕ್ಕೂ ಮೊದಲು ಡಿಸೆಂಬರ್ 12 ರಂದು ಮುಖ್ತಾರ್ ಅನ್ಸಾರಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 11 ಸಾಕ್ಷಿಗಳ ಸಾಕ್ಷ್ಯ, ಕ್ರಾಸ್ ಎಕ್ಸಾಮಿನೇಷನ್ ಮತ್ತು ವಾದಗಳು ಪೂರ್ಣಗೊಂಡಿದ್ದು, ತೀರ್ಪು ಘೋಷಣೆಯ ದಿನಾಂಕವನ್ನು ಡಿಸೆಂಬರ್ 15 ಕ್ಕೆ ನಿಗದಿಪಡಿಸಲಾಗಿತ್ತು.

ಬಿಜೆಪಿ ಸೇರ್ಪಡೆಗೆ ವಿಜಯೇಂದ್ರ ನನಗೆ ಹಣ ಕೊಡಲು ಬಂದಿದ್ದ: ಹೆಚ್. ವಿಶ್ವನಾಥ್ ಬಿಜೆಪಿ ಸೇರ್ಪಡೆಗೆ ವಿಜಯೇಂದ್ರ ನನಗೆ ಹಣ ಕೊಡಲು ಬಂದಿದ್ದ: ಹೆಚ್. ವಿಶ್ವನಾಥ್

ಬಾಹುಬಲಿ ಮುಖ್ತಾರ್ ಅನ್ಸಾರಿ ವಿರುದ್ಧ 5 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಅವುಗಳಲ್ಲಿ 4 ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಲಾಗಿತ್ತು. ಈ ಪ್ರಕರಣಗಳಲ್ಲಿ ಗಾಜಿಪುರದಲ್ಲಿ ಎರಡು, ವಾರಣಾಸಿಯಲ್ಲಿ ಎರಡು ಮತ್ತು ಚಂದೌಲಿಯಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ. ಅವಧೇಶ್ ರೈ ಹತ್ಯೆ ಪ್ರಕರಣ, ಘಾಜಿಪುರದಲ್ಲಿ ಎಸ್‌ಎಸ್‌ಪಿ ಮತ್ತು ಪೊಲೀಸರ ಮೇಲೆ ಹತ್ಯೆಗೈದ ಪ್ರಕರಣ ಇದರಲ್ಲಿ ಸೇರಿವೆ. ಇದರಲ್ಲಿ ಕಾಂಗ್ರೆಸ್ ನಾಯಕ ಅಜಯ್ ರೈ ಅವರ ಹೇಳಿಕೆ ಮಹತ್ವದ್ದಾಗಿದೆ. ಅಜಯ್ ರೈ ಅವಧೇಶ್ ರೈ ಅವರು ಸಹೋದರರಾಗಿದ್ದಾರೆ.

Money laundering case: Mukhtar Ansari sentenced to 10 years in jail

ಬಾಹುಬಲಿ ಮುಖ್ತಾರ್ ಅನ್ಸಾರಿ ಸದ್ಯ ಬಂದಾ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಅನ್ಸಾರಿ ಮತ್ತು ಆತನ ಸಹಚರ ಭೀಮ್ ಸಿಂಗ್ ವಿರುದ್ಧ 1996 ರಲ್ಲಿ ಸದರ್ ಕೊತ್ವಾಲಿಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. 26 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ನವೆಂಬರ್ 25 ರಂದು ತೀರ್ಪು ಪ್ರಕಟಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಆದರೆ ನ್ಯಾಯಾಧೀಶರ ವರ್ಗಾವಣೆಯಿಂದಾಗಿ ತೀರ್ಪಿನಲ್ಲಿ ಸ್ವಲ್ಪ ವಿಳಂಬವಾಗಿದೆ.

ಇದಕ್ಕೂ ಒಂದು ದಿನ ಮುಂಚಿತವಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬುಧವಾರ ಇಡಿ ಬಾಹುಬಲಿ ಮಾಫಿಯಾ ಮುಕ್ತಾರ್ ಅನ್ಸಾರಿಯನ್ನು ಅಲಹಾಬಾದ್‌ನ ಜಿಲ್ಲಾ ನ್ಯಾಯಾಧೀಶ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಇಡಿ ನ್ಯಾಯಾಲಯದಿಂದ ಮುಕ್ತಾರ್‌ನನ್ನು 10 ದಿನಗಳ ಕಸ್ಟಡಿಗೆ ಪಡೆದಿತ್ತು. ಇಂದು ತೀರ್ಪು ಘೋಷಣೆ ಮಾಡಿದೆ.

English summary
Former MLA and Baahubali Mukhtar Ansari was jailed in a money laundering case, has been sentenced to ten years in prison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X