ಅಕ್ರಮ ಹಣ ವರ್ಗಾವಣೆ ಪ್ರಕರಣ: ಎಎಪಿಗೆ 60 ಕೋಟಿ ರೂ. ನೀಡಿರುವುದಾಗಿ ಸುಕೇಶ್ ಆರೋಪ
ದೆಹಲಿ ಡಿಸೆಂಬರ್ 20: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್ ಅವರು ಆಮ್ ಆದ್ಮಿ ಪಕ್ಷಕ್ಕೆ 60 ಕೋಟಿ ರೂಪಾಯಿ ನೀಡಿರುವುದಾಗಿ ಆರೋಪಿಸಿದ್ದಾರೆ. ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ನಲ್ಲಿರುವ ಉನ್ನತಾಧಿಕಾರ ಸಮಿತಿಯು ಸುಕೇಶ್ ಹೇಳಿಕೆಯನ್ನು ಸ್ವೀಕರಿಸಿ ತನಿಖೆ ನಡೆಸಬೇಕೆಂದು ಅವರ ವಕೀಲ ಅನಂತ್ ಮಲಿಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ಇಂದು ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಸುಕೇಶ್ ಪರ ವಕೀಲ ಅನಂತ್ ಮಲಿಕ್ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.
ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಹಿಂದೆ ಹಲವಾರು ಬಾರಿ ದೆಹಲಿ ಆಡಳಿತರೂಢ ಪಕ್ಷ ಎಎಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಎಎಪಿ ವಿರುದ್ಧ ಹಲವಾರು ಬಾರಿ ಪತ್ರ ಬರೆದು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ಇಂತೆಲ್ಲಾ ಆರೋಪಗಳಿಂದ ತಮ್ಮ ಮೇಲೆ ಜೈಲಿನಲ್ಲಿ ಒತ್ತಡ ಹೆಚ್ಚಾಗುತ್ತಿದೆ.
|
ಜೈಲು ಬದಲಿಸಿದ ಸುಕೇಶ್
ಜೈಲಾಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ ಎಂದು ಸುಕೇಶ್ ಚಂದ್ರಶೇಖರ್ ಆರೋಪಿಸಿದ್ದರು. ಉನ್ನತ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳಿಂದ ಹಣ ವಸೂಲಿ ಮಾಡಿದ ಆರೋಪದಲ್ಲಿ ಸುಕೇಶ್ ಅವರು ಪ್ರಸ್ತುತ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ಇದಕ್ಕೂ ಮೊದಲು ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ನಂತರ ಕೊಲೆ ಬೆದರಿಕೆಗಳನ್ನು ಉಲ್ಲೇಖಿಸಿ ಜೈಲು ಬದಲಾಯಿಸಲು ಪದೇ ಪದೇ ವಿನಂತಿಸಿದ ನಂತರ ಅವರನ್ನು ಸ್ಥಳಾಂತರಿಸಲಾಯಿತು. ಸದ್ಯ ಸುಕೇಶ್ ಮತ್ತೊಂದು ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಕೇಶ್ ಪರ ವಕೀಲ ಅನಂತ್ ಮಲಿಕ್ ಅವರು, 'ಇಂದು ಸುಖೇಶ್ ಚಂದ್ರಶೇಖರ್ ಅವರು ಆಪ್ ಗೆ 60 ಕೋಟಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಉನ್ನತ ಅಧಿಕಾರದ ಸಮಿತಿಯು ಅವರ ಹೇಳಿಕೆಯನ್ನು ತೆಗೆದುಕೊಂಡಿತು ಮತ್ತು ಸಮಿತಿಯು ತನ್ನ ಶಿಫಾರಸುಗಳನ್ನು ನೀಡಿದೆ ಮತ್ತು ಆರೋಪಗಳು ಗಂಭೀರವಾಗಿದೆ ಮತ್ತು ತನಿಖೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದೆ'' ಎಂದು ಹೇಳಿದ್ದಾರೆ.
|
ಎಎಪಿ ಹಣ ನೀಡಿದ ಆರೋಪ
ಎಎಪಿಗೆ 60 ಕೋಟಿ ರೂ.ಗಳನ್ನು ನೀಡುವುದಾಗಿ ಸುಕೇಶ್ ಹೇಳಿಕೊಂಡಿದ್ದು, ಇದಕ್ಕೂ ಮುನ್ನ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಬರೆದ ಸ್ಫೋಟಕ ಪತ್ರದಲ್ಲಿ, ಸೆರೆವಾಸದಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರಿಗೆ 'ರಕ್ಷಣಾ ಹಣ' ಎಂದು 10 ಕೋಟಿ ರೂಪಾಯಿಗಳನ್ನು ಪಾವತಿಸಿದ್ದೇನೆ. ಇದನ್ನು ಹೇಳಿಕೊಂಡು ಜೈಲಿನಲ್ಲಿ ಕಿರುಕುಳ ಮತ್ತು ಬೆದರಿಕೆ ನನಗೆ ಹಾಕಲಾಗಿದೆ ಎಂದು ಸುಕೆಶ್ ಅವರು ಹೇಳಿದ್ದಾರೆ.

ಪತ್ರ ಬರೆದು ಎಎಪಿ ವಿರುದ್ಧ ಆರೋಪಿಸಿದ ಸುಕೇಶ್
ಇದರ ನಂತರ ಹಲವಾರು ಫಾಲೋ-ಅಪ್ ಪತ್ರಗಳು ಬಂದವು. ಪತ್ರದಲ್ಲಿ ಅವರು ಎಎಪಿ ಕಾರ್ಯಕರ್ತರು ಪಾಠವನ್ನು ಕಲಿಸುವುದಾಗಿ ಬೆದರಿಸಿದ್ದಾರೆ. ನಮ್ಮ ಕುಟುಂಬಗಳಿಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರ ಆರೋಪಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೂ ವಿಸ್ತರಿಸಿದವು. ಎಎಪಿ ನಾಯಕರು ಮಕ್ಕಳ ಶಿಕ್ಷಣದ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲಪಟಾಯಿಸಿದ್ದಾರೆ ಎಂದು ಸುಕೇಶ್ ಆರೋಪಿಸಿದ್ದಾರೆ.
ಇತ್ತೀಚಿನ ಪತ್ರದಲ್ಲಿ, ಸತ್ಯೇಂದ್ರ ಜೈನ್ ಮತ್ತು ಕೇಜ್ರಿವಾಲ್ ಅವರು ಹಣ ಲಪಟಾಯಿಸಿದ್ದನ್ನು ಬಹಿರಂಗಪಡಿಸುವುದಾಗಿ ಸುಕೇಶ್ ಹೇಳಿದ್ದಾರೆ ಮತ್ತು ಈ ಪತ್ರಗಳನ್ನು ಬರೆಯಲು ಯಾರೂ ತನ್ನ ಮೇಲೆ ಒತ್ತಡ ಹೇರಿಲ್ಲ ಮತ್ತು ಅವರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಬರೆದಿರುವುದಾಗಿ ಹೇಳಿಕೊಂಡಿದ್ದಾರೆ.

ವಿಚಾರಣೆ ವೇಳೆ ಇಲ್ಲದ ಆರೋಪ ಈಗ ಯಾಕೆ?
ಈವರೆಗೆ ಸುಕೇಶ್ ಅವರ ಆರೋಪಗಳನ್ನು ಎಎಪಿ ತಳ್ಳಿ ಹಾಕಿದೆ. 'ಸುಕೇಶ್ ಬಿಜೆಪಿಯಂತೆ ಮಾತನಾಡುಲು ಶುರು ಮಾಡಿದ್ದಾರೆ. ಅವರು ಮುಂದೊಂದು ದಿನ ಬಿಜೆಪಿಗೆ ಸೇರಬಹುದು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ಕುತಂತ್ರದಿಂದ ಸುಕೇಶ್ ಈ ರೀತಿ ಮಾತನಾಡುತ್ತಿದ್ದಾರೆಂದು' ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ದೂರಿದ್ದಾರೆ. ಒಟ್ಟಿನಲ್ಲಿ ಜೈಲಿನಲ್ಲಿರುವ ಸುಕೇಶ್ ಆರೋಪಗಳು ಎಎಪಿಯತ್ತ ತಿರುಗಲು ಕಾರಣಗಳು ಇನ್ನೂ ತಿಳಿದು ಬಂದಿಲ್ಲ.
ಪತ್ರಗಳ ಮೂಲಕ ಮಾತ್ರ ಅವರು ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆ ಇಂತಹ ಆರೋಪಗಳನ್ನು ಅವರು ಮಾಡಿರಲಿಲ್ಲ. ವಿಚಾರಣೆ ವೇಳೆ ಸುಕೇಶ್ ಯಾವುದೇ ವಿಚಾರವನ್ನು ಹೇಳಿಕೊಂಡಿಲ್ಲ. ಆದರೆ ಪತ್ರದಲ್ಲಿ ಹೇಳಿಕೊಳ್ಳುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಗುರಿ ಮಾಡಿದೆ.












Click it and Unblock the Notifications