ಈಗಷ್ಟೇ ಹಣದ ಜತೆಗೆ ಮಾಲೀಕರನ್ನು ಗುರುತಿಸಲಾಗಿದೆ: ಜೇಟ್ಲಿ
"ಈಗಿನ್ನೂ ಹಣವನ್ನು ಅದರ ಮಾಲೀಕರ ಜತೆಗೆ ಗುರುತಿಸಲಾಗಿದೆ" ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ. ಶೇ 99ರಷ್ಟು ಅಮಾನ್ಯವಾದ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಂದಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿ ಬಂದ ನಂತರ ಅವರ ಪ್ರತಿಕ್ರಿಯೆ ಬಂದಿದೆ.
"ನೋಟು ನಿಷೇಧದ ಮೂಲಕ ಕಪ್ಪು ಹಣವನ್ನು ಗುರುತಿಸಿ, ಹೇಗೆ ವ್ಯವಸ್ಥೆಯೊಳಗೆ ಅದನ್ನು ತರಬೇಕು ಎಂಬುದರ ಬಗ್ಗೆ ಸರಿಯಾದ ಅರಿವು ಇಲ್ಲದ ಜನರು ಮಾತನಾಡುತ್ತಾರೆ" ಎಂದು ವಿಪಕ್ಷಗಳ ಟೀಕೆಗೆ ಅವರು ಉತ್ತರಿಸಿದ್ದಾರೆ.

ಅಪನಗದೀಕರನದ ಉದ್ದೇಶವೇ ಆರ್ಥಿಕ ವ್ಯವಸ್ಥೆಯಲ್ಲಿ ನಗದು ಪ್ರಮಾಣ ಕಡಿಮೆ ಮಾಡುವುದು, ಡಿಜಿಟಲ್ ವ್ಯವಹಾರಗಳನ್ನು ಹೆಚ್ಚಿಸುವುದು, ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚು ಮಾಡುವುದು ಮತ್ತು ಕಪ್ಪು ಹಣದ ವಿರುದ್ಧ ಹೋರಾಡುವುದು ಎಂದು ಜೇಟ್ಲಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಅಪನಗದೀಕರಣದ ನಂತರ ನಗದು ಹರಿವು ಕಡಿಮೆಯಾಯಿತು. ಛತ್ತೀಸಗಡ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರರು ಮತ್ತು ಪ್ರತ್ಯೇಕತಾ ಚಟುವಟಿಕೆಗಳು ಕಡಿಮೆ ಆಗಿರುವುದೇ ಇದಕ್ಕೆ ಸಾಕ್ಷಿ ಎಂದು ಜೇಟ್ಲಿ ಸಮರ್ಥನೆ ನೀಡಿದ್ದಾರೆ.
Recommended Video

"ಕಪ್ಪು ಹಣದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಜನ ನೋಟು ನಿಷೇಧದ ಉದ್ದೇಶವನ್ನು ಅರ್ಥ ಮಾಡಿಕೊಳ್ಳಲಾರರು. ಬ್ಯಾಂಕ್ ನಲ್ಲಿ ಹಣ ಜಮೆ ಮಾಡಿದ ಮಾತ್ರಕ್ಕೆ ಅವು ಕಾನೂನುಬದ್ಧ ಆಗಿಬಿಡಲ್ಲ" ಎಂದು ಅವರು ಹೇಳಿದ್ದಾರೆ.












Click it and Unblock the Notifications