ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ನವೀದ್ ಭಾರತಕ್ಕೆ ನುಸುಳಿ ಬಂದಿದ್ದು ಎಲ್ಲಿಂದ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 8 : ಜಮ್ಮು-ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ಮೊಹಮ್ಮದ್ ನವೀದ್ ಭಾರತಕ್ಕೆ ನುಸುಳಿದ್ದು ಹೇಗೆ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ಮಾರ್ಗದಿಂದ ನವೀದ್ ಮತ್ತು ಇತರ ಉಗ್ರರು ದೇಶಕ್ಕೆ ನುಸುಳಿ ಬಂದರು ಎಂಬುದು ತನಿಖೆಗೆ ಹೆಚ್ಚು ಸಹಕಾರಿಯಾಗಲಿದೆ.

ಉಧಾಂಪುರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಜಮ್ಮು-ಕಾಶ್ಮೀರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ದಳದ ತಂಡವೂ ತನಿಖೆಗೆ ಕೈ ಜೋಡಿಸಿದೆ. ಆದರೆ, ಪೊಲೀಸರು ಇನ್ನೂ ತನಿಖೆಯನ್ನು ಎನ್‌ಐಎ ಕೈಗೆ ಹಸ್ತಾಂತರ ಮಾಡಿಲ್ಲ.[ನವೀದ್ ಲಷ್ಕರ್ ಸೇರಿದ್ದು ಹೇಗೆ?]

mohammad naved

ಶನಿವಾರ ನವೀದ್‌ನನ್ನು ಕಾಶ್ಮೀರದ ವಿವಿಧ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಆತ ಭಾರತಕ್ಕೆ ನುಸುಳಿದ ಮಾರ್ಗದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ. ವಿಚಾರಣೆ ವೇಳೆ ಆತ ಹಲವು ಮಾರ್ಗಗಳ ಹೆಸರು ಹೇಳಿದ್ದು, ಗಡಿಯಲ್ಲಿನ ಬೇಲಿ ಕತ್ತರಿಸಿ ನುಸುಳಿದ್ದಾಗಿ ಹೇಳಿದ್ದಾನೆ. ಈ ಕುರಿತು ಇಂದು ತನಿಖೆ ನಡೆಯಲಿದೆ. [ನವೀದ್ ಬಾಲಾಪರಾಧಿ ಎಂದು ಸಾಬೀತಾದರೆ?]

ಸ್ಥಳೀಯರು ಸಹಕಾರ ನೀಡಿದ್ದರೆ? : ಮೂವರು ಉಗ್ರರು ಭಾರತಕ್ಕೆ ನುಸುಳಲು ಸ್ಥಳೀಯರು ಸಹಕಾರ ನೀಡಿದ್ದರೆ? ಎಂಬ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಭಾರತಕ್ಕೆ ನುಸುಳಿ ಬಂದ ನವೀದ್ ಕೆಲವು ದಿನ ಮನೆಯೊಂದರಲ್ಲಿ ತಂಗಿದ್ದೆ ಎಂದು ಹೇಳಿದ್ದಾನೆ. ಉಗ್ರನಿಗೆ ಆಶ್ರಯ ಕೊಟ್ಟವರು ಯಾರು? ಎಂದು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಎನ್‌ಐಗೆ ತನಿಖೆ ಹಸ್ತಾಂತರ : ಜಮ್ಮು-ಕಾಶ್ಮೀರ ಪೊಲೀಸರು ಉಗ್ರರ ದಾಳಿ ತನಿಖೆಯನ್ನು ಎನ್‌ಐಎಗೆ ಹಸ್ತಾಂತರ ಮಾಡಿಲ್ಲ. ಎನ್‌ಐಎ ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಈಗ ತನಿಖೆ ನಡೆಸುತ್ತಿದ್ದಾರೆ. ರಾಜ್ಯದ ಪೊಲೀಸರು ತನಿಖೆಯನ್ನು ಹಸ್ತಾಂತರ ಮಾಡುವ ಕುರಿತು ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ.

English summary
Understanding the route through which Mohammad Naved and his accomplice Noman sneaked in and carried out the Udhampur terror strike is a key part of the investigation. Naved is being taken to Kashmir among other places to identify the exact route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X