ಮೋದಿಯ ಏಕೀಕೃತ ಪಿಂಚಣಿ ಯೋಜನೆ: ಭಾರತಕ್ಕೆ ವಿಜಯದಲ್ಲಿ ವಿಜಯ
ನರೇಂದ್ರ ಮೋದಿ ಸರ್ಕಾರ ಪರಿಚಯಿಸಲಿರುವ ಹೊಸ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಒಂದು ಹೆಗ್ಗುರುತು ಮೂಡಿಸುವ ಯೋಜನೆಯಾಗಿದೆ. ನಿವೃತ್ತ ಪಿಂಚಣಿದಾರರ ಹಿತ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆರ್ಥಿಕ ಹೊರೆಯನ್ನು ಭವಿಷ್ಯದಲ್ಲಿ ಕಡಿಮೆ ಮಾಡಲಿದೆ. ಈ ಪರಿವರ್ತನೆ ಪಿಂಚಣಿದಾರರಿಗೆ ವಿಶ್ವಾಸಾರ್ಹ ಭದ್ರೆತೆಯನ್ನು ಒದಗಿಸುತ್ತದೆ ಹಾಗೂ ಮೋದಿ ಆಡಳಿತದ ಸಹಕಾರಿ ನೀತಿಯನ್ನು ಬಲಪಡಿಸುವ ಉದ್ಧೇಶಕ್ಕೆ ಕೊಡುಗೆಯನ್ನು ನೀಡುತ್ತದೆ.
ಯುಪಿಎಸ್ ನಿವೃತ್ತ ಪಿಂಚಣಿದಾರರಿಗೆ ಕಳೆದ 12 ತಿಂಗಳ ಮೂಲ ವೇತನದ ಸರಾಸರಿಯ ಶೇ 50ರಷ್ಟು ಪಿಂಚಣಿ ಬರುವುದನ್ನು ಖಾತ್ರಿ ಪಡಿಸುತ್ತದೆ, ಖಚಿತತೆ ಮತ್ತು ಭದ್ರತೆಯನ್ನು ನೀಡುತ್ತದೆ. ಈ ಭರವಸೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸ್ಥಾಪಿಸಿದ ಪಿಂಚಣಿ ಸುಧಾರಣೆಯ ಮೂಲ ತತ್ವವಾದ ಪಿಂಚಣಿದಾರರ ಕೊಡುಗೆ ಮತ್ತು ಸಹಾಯಧನದ ಆಧಾರದಲ್ಲೇ ಇದೆ. ಸರ್ಕಾರ ಮತ್ತು ಉದ್ಯೋಗಿಗಳನ್ನು ಒಳಗೊಂಡು ಪಿಂಚಣಿ ನಿಧಿಗೆ ಕೊಡುಗೆ ನೀಡಲಾಗುತ್ತದೆ. ಯುಪಿಎಸ್ ಪಿಂಚಣಿ ಪ್ರಯೋಜನಗಳು ಮತ್ತು ಆರ್ಥಿಕ ಜವಾಬ್ದಾರಿಗಳನ್ನು ಸಮತೋಲನ ಮಾಡುತ್ತಾ ಸುಸ್ಥಿರ ನೀತಿ ಪ್ರತಿಪಾದಿಸುತ್ತದೆ.

ಯುಪಿಎಸ್ ರಾಜ್ಯ ಸರ್ಕಾರಗಳಿಗೆ ಸಮರ್ಥನೀಯವಲ್ಲದ ಆರ್ಥಿಕ ಇಕ್ಕಟ್ಟಿಗೆ ಸಿಲುಕುವ ಹಾಗೂ ಹೊರೆಯಾಗಿದ್ದ ಹಳೆಯ ಪಿಂಚಣಿ ಯೋಜನೆ (ಒಪಿಎಸ್)ಗಿಂತ ಬಹಳ ಭಿನ್ನವಾಗಿ ನಿಲ್ಲುತ್ತದೆ. ಎನ್‌ಡಿಎ ಅಧಿಕಾರೇತರ ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಹಳೆಯ ಪಿಂಚಣಿ ಯೋಜನೆಗೆ ಮರಳಿವೆ, ಈ ನಡೆಯನ್ನು ಆರ್ಥಿಕ ಬೇಜವಾಬ್ದಾರಿ ಎಂದು ಟೀಕಿಸಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇದರಿಂದ ಉಂಟಾಗಬಹುದಾದ ಪರಿಣಾಮಗಳನ್ನು ಈಗಾಗಲೇ ತಿಳಿಸಿದೆ. ಒಪಿಎಸ್‌ಗೆ ಮರಳುವುದು ಆರ್ಥಿಕವಾಗಿ ಎನ್‌ಪಿಎಸ್‌ಗೆ ಹೋಲಿಕೆ ಮಾಡಿದರೆ ನಾಲ್ಕು ಪಟ್ಟು ಹೆಚ್ಚು ಹೊರೆ ಎಂದು ಅಂದಾಜಿಸಿದೆ.
ಮೋದಿ ಸರ್ಕಾರದ ಯುಪಿಎಸ್ ಯೋಜನೆ ಸರ್ಕಾರಿ ನೌಕರರ ಹಿತವನ್ನು ಕಾಯುತ್ತಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆರ್ಥಿಕ ಬಂಡವಾಳ ಹೂಡಿಕೆಗಳನ್ನು ನಿರ್ವಹಣೆ ಮಾಡಲು ವಿವೇಕಯುತವಾದ ಹೆಜ್ಜೆಯಾಗಿದೆ. ಸರ್ಕಾರದ ಕೊಡುಗೆಯನ್ನು ಮೂಲ ವೇತನದ ಶೇ 18.5ಕ್ಕೆ ಏರಿಸುವ ಜೊತೆಗೆ ಉದ್ಯೋಗಿಗಳ ಕೊಡುಗೆ ಶೇ 10ಕ್ಕೆ ಇರುವಂತೆ ನಿರ್ವಹಣೆ ಮಾಡುತ್ತದೆ. ಖಚಿತ ಪಿಂಚಣಿ ಮತ್ತು ಪಿಂಚಣಿ ನಿಧಿಗಳಿಕೆ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ನಿವೃತ್ತರ ಭವಿಷ್ಯವನ್ನು ಸುರಕ್ಷಿತವಾಗಿಸುತ್ತದೆ.
ಇದಕ್ಕಿಂತಲೂ ಮುಖ್ಯವಾಗಿ ಯುಪಿಎಸ್ ರಾಜ್ಯಗಳು ಸುರಕ್ಷಿತ ಪಿಂಚಣಿ ಮಾದರಿಯನ್ನು ಅಳವಡಿಕೊಳ್ಳಲು ಸಹಕಾರಿ ನೀತಿಯನ್ನು ಉತ್ತೇಜಿಸುತ್ತದೆ. ಯುಪಿಎಸ್ ಅಳವಡಿಕೆ ಮಾಡಿಕೊಳ್ಳುವ ಮೂಲಕ ರಾಜ್ಯ ಸರ್ಕಾರಗಳು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು, ಮೂಲ ಸೌಕರ್ಯದಲ್ಲಿ ಯಾವುದೇ ಆರ್ಥಿಕ ಹಿಂಜರಿತ ಎದುರಿಸದೇ ಹೂಡಿಕೆ ಮಾಡುವಂತೆ ಮಾಡುತ್ತದೆ. ಪಾರದರ್ಶಕತೆ, ವಿವೇಕಯುತ ಹೆಜ್ಜೆಯಾದ ಮೋದಿ ಆಡಳಿತ ನೀತಿ ಬಜೆಟ್‌ಯೇತರ ಸಾಲಗಳನ್ನು ಕಡಿಮೆಗೊಳಿಸುತ್ತದೆ, ಅಲ್ಲದೇ ಸಹಕಾರಿ ನೀತಿಯ ಮೂಲ ತತ್ವವನ್ನು ಬಲಡಿಸುತ್ತದೆ.
ಯುಪಿಎಸ್ ಮೋದಿ ಸರ್ಕಾರದ ಬದ್ಧತೆಯಾದ ಸಾಮಾಜಿಕ ಭದ್ರತೆಯೊಂದಿಗೆ ಆರ್ಥಿಕ ಬೆವಣಿಗೆ ಸಮತೋಲನ ಕಾಯ್ದುಕೊಳ್ಳಲು ಸಹಾಯಕ. ಇದು ಕೇವಲ ಪಿಂಚಣಿ ವ್ಯವಸ್ಥೆಯ ಪರಿವರ್ತನೆ ಅಲ್ಲ, ಭಾರತದ ರಾಜ್ಯಗಳು ಮತ್ತು ಜನರು ಸಮೃದ್ಧ ಭವಿಷ್ಯಕ್ಕಾಗಿ ಅಗತ್ಯವಾದ ಹಣಕಾಸು ಸಂಪತ್ತನ್ನು ಹೊಂದುವುದು ಖಚಿತಪಡಿಸುವ ತಂತ್ರವಾಗಿದೆ. ದೇಶ ಮುಂದುವರಿದಂತೆ, ಯುಪಿಎಸ್ ಈ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಲಕ್ಷಾಂತರ ಸರಕಾರಿ ನೌಕರರ ಹಣಕಾಸಿನ ಭವಿಷ್ಯವನ್ನು ಸುರಕ್ಷಿತಗೊಳಿಸುತ್ತಾ ದೇಶದ ಆರ್ಥಿಕ ಆರೋಗ್ಯವನ್ನು ಖಾತ್ರಿಗೊಳಿಸುತ್ತದೆ.












Click it and Unblock the Notifications