• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಘಲರಿಗೆ ಮಣ್ಣು ಮುಕ್ಕಿಸಿದ್ದ ಗ್ರಾಮ ಮೋದಿ ದತ್ತು

|

ವಾರಣಾಸಿ ನ.8: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ದತ್ತು ತೆಗೆದುಕೊಂಡಿರುವ ಜಯಪುರದ ಇತಿಹಾಸ ಪುಟಗಳನ್ನು ತೆರೆದರೆ ಅನೇಕ ಕುತೂಹಲಕಾರಿ ಸಂಗತಿಗಳು ಗರಿ ಬಿಚ್ಚಿಕೊಳ್ಳುತ್ತವೆ.

ಸುಮಾರು 450 ವರ್ಷಗಳ ನಂತರ ಗ್ರಾಮ ಮತ್ತೆ ಸುದ್ದಿಯಲ್ಲಿದೆ. ಮೊಘಲ್ ಅರಸ ಔರಂಗಜೇಬ್ ನೊಂದಿಗಿನ ಗ್ರಾಮಸ್ಥರ ಹೋರಾಟ ಇತಿಹಾಸದ ಪುಟದಲ್ಲಿ ದಾಖಲಾಗಿದೆ.[ವಾರಣಾಸಿಯ ಜಯಪುರವನ್ನು ದತ್ತು ಪಡೆದ ಸಂಸದ ಮೋದಿ]

ಬನಾರಸ್ ಹಿಂದು ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಕೆ.ಮಿಶ್ರಾ ಈ ಬಗ್ಗೆ ಅನೇಕ ವಿವರಗಳನ್ನು ನೀಡುತ್ತಾರೆ. ಹಿಂದು ದೇವಾಲಯಗಳನ್ನು ನಾಶ ಮಾಡುವಂತೆ 17 ಶತಮಾನದಲ್ಲಿ ಔರಂಗಜೇಬ್ ತನ್ನ ಸೈನಿಕರಿಗೆ ಆದೇಶಿಸಿದ್ದ. ಅದರಂತೆ ಜಯಪುರಕ್ಕೆ ದಾಳಿ ಇಟ್ಟ ಸೈನಿಕರು ಗ್ರಾಮದ ಹನುಮಂತನ ದೇವಾಲಯ ಧ್ವಂಸಕ್ಕೆ ಮುಂದಾಗುತ್ತಾರೆ.

ಮೊಘಲರ ದಾಳಿಗೆ ಬಗ್ಗದ ಗ್ರಾಮದ ಜನ ಹೋರಾಟಕ್ಕೆ ನಿಲ್ಲುತ್ತಾರೆ. ಆದರೆ ದೊಡ್ಡ ಸೈನ್ಯದ ಎದುರು ಸ್ಥಳೀಯರ ಶೌರ್ಯ ಸಾಕಾಗಲ್ಲ. ಗ್ರಾಮಸ್ಥರು ವಿರೋಚಿತ ಹೋರಾಟ ನೀಡಿ ಮೊಘಲ್ ಸೈನ್ಯ ಹಿಂದಕ್ಕೆ ಸರಿಯುವಂತೆ ಮಾಡುತ್ತಾರೆ ಎಂಬ ಮಾಹಿತಿ ಇತಿಹಾಸದಲ್ಲಿ ದಾಖಲಾಗಿದೆ. 2003ರಲ್ಲಿ ಇದೇ ಗ್ರಾಮದ ಅಜಯ್ ಕುಮಾರ್ ಎಂಬ ಸೈನಿಕ ಉಗ್ರರ ದಾಳಿಗೆ ಬಲಿಯಾಗಿದ್ದ ವೇಳೆ ಇಡೀ ಸಮುದಾಯವೇ ಶೋಕಸಾಗರದಲ್ಲಿ ಮುಳುಗಿತ್ತು.[ಸ್ವಚ್ಛ ಭಾರತಕ್ಕೆ ಮತ್ತೆ 9 ಜನರನ್ನು ಆಹ್ವಾನಿಸಿದ ಮೋದಿ]

ಸೈನಿಕರ ದಾಳಿಯಿಂದ ಕಂಗಟ್ಟ ಹನುಮಂತ ಕಪ್ಪು ಬಣ್ಣಕ್ಕೆ ತಿರುಗಿದ. ಹಾಗಾಗಿ ಇಂದು ಅಂದಿನಿಂದ ದೇವಸ್ಥಾನವನ್ನು 'ಕಾಲೆ ಹನುಮಾನ್ ದೇವಾಲಯ' ಕರೆಯಲಾಗುತ್ತಿದೆ ಎಂಬ ಪ್ರತೀತಿಯೂ ಇದೆ. ಪಟೇಲ್ ಸಮುದಾಯವೇ ಹೆಚ್ಚಾಗಿರುವ ಗ್ರಾಮದಲ್ಲಿ ಕಳೆದ ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ಸಂದರ್ಭ ಸಣ್ಣ ಸಂಘರ್ಷವೂ ಸಂಭವಿಸಿತ್ತು.

ಗ್ರಾಮದ ಬಹುತೇಕ ಜನ ಕೆಲಸ ಅರಸಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ವಲಸೆ ಬರುತ್ತಾರೆ. ಆದರೆ ಇಲ್ಲಿ ಬೆಳೆಯುವ ಕಬ್ಬಿಗೆ ವಿಶೇಷ ಬೇಡಿಕೆಯಿದೆ. ಕೇವಲ ಉತ್ತರ ಪ್ರದೇಶವಲ್ಲದೇ ಬಿಹಾರದ ಜನರ ಬಾಯನ್ನು ಸಿಹಿ ಮಾಡಲಾಗುತ್ತದೆ.

ಒಟ್ಟಿನಲ್ಲಿ ಶೌರ್ಯದ ಇತಿಹಾಸ ಹೊಂದಿರುವ ಗ್ರಾಮವನ್ನು ಸ್ವತಃ ಪ್ರಧಾನಿಯೇ ದತ್ತು ಪಡೆದಿದ್ದು ಇನ್ನಾದರೂ ಅಭಿವೃದ್ಧಿ ಪರ್ವ, ವಲಸೆ ತಡೆ ಸಾಧ್ಯವಾಗುವುದೋ ಎಂಬ ನಿರೀಕ್ಷೆ ಮನೆ ಮಾಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It was the second victory after a gap of nearly 450 years for the 3,500-odd villagers when it was announced that Prime Minister Narendra Modi would adopt and develop their Jayapur village in his constituency Varanasi. While the first victory dates back to the Mughal era and finds mention in History books, the second one is hitting the headlines a day Modi lands here and formally adopts the village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more