2017ರಲ್ಲಿ ಅತೀ ಹೆಚ್ಚು ಟ್ವೀಟ್, 2ನೇ ಸ್ಥಾನದಲ್ಲಿ ಮೋದಿ

Subscribe to Oneindia Kannada

ವಾಷಿಂಗ್ಟನ್, ಡಿಸೆಂಬರ್ 6: ಅತೀ ಹೆಚ್ಚು ಟ್ವೀಟ್ ಮಾಡಿರುವ ಜಾಗತಿಕ ಚುನಾಯಿತ ಪ್ರತಿನಿಧಿಗಳ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಈಗಲೂ ದೇಶದ ನಂಬರ್ 1 ಜನಪ್ರಿಯ ನಾಯಕ ನರೇಂದ್ರ ಮೋದಿ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮೋದಿ ಅಮೆರಿಕಾ ಅಧ್ಯಕ್ಷರ ನಂತರದ ಸ್ಥಾನವನ್ನು ಅಲಂಕರಿಸಿದ್ದಾರೆ.

Modi Was 'Most Tweeted World Leader' After Donald Trump In 2017

ಟ್ವಿಟರ್ ಸಂಸ್ಥೆ 2017ರಲ್ಲಿ ಅತೀ ಹೆಚ್ಚು ಟ್ವೀಟ್ ಮಾಡಿದ ಜಾಗತಿಕ ನಾಯಕರ ಪಟ್ಟಿಯನ್ನು ಟ್ವೀಟ್ ಮಾಡಿದ್ದು ಇದರಲ್ಲಿ ಈ ಮಾಹಿತಿಗಳಿವೆ.

ಮೊದಲ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿದ್ದರೆ, ನಂತರದ ನಾಲ್ಕು ಸ್ಥಾನಗಳನ್ನು ಕ್ರಮವಾಗಿ ನರೇಂದ್ರ ಮೋದಿ, ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೋ, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಪ್ ಎರ್ಡೋಗನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮಾಕ್ರನ್ ಪಡೆದುಕೊಂಡಿದ್ದಾರೆ.

ಅಂದಹಾಗೆ ಟ್ವಿಟ್ಟರಿನಲ್ಲಿ ಅಮೆರಿಕಾ ಅಧ್ಯಕ್ಷರು 4 ಕೋಟಿ 41 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಮೋದಿ ಅವರ ಹಿಂಬಾಲಕ ಸಂಖ್ಯೆ 3 ಕೋಟಿ 75 ಲಕ್ಷವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi was the "most tweeted world leader" after US President Donald Trump in 2017, according to Twitter data.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ