ಮೈನಸ್ ಡಿಗ್ರಿ ತಾಪಮಾನದಲ್ಲಿ ಕೇದರನಾಥನಿಗೆ ನರೇಂದ್ರ ಮೋದಿ ನಮನ
Recommended Video

ಹರ್ಶಿಲ್ (ಉತ್ತರಾಖಂಡ್), ನವೆಂಬರ್ 07 : ಮೈನಸ್ ಡಿಗ್ರಿ ತಾಪಮಾನವಿರುವ ಹಿಮಾಚ್ಛಾದಿತ ಕೇದಾರನಾಥಕ್ಕೆ ಭೇಟಿ ನೀಡಿರುವ ನರೇಂದ್ರ ಮೋದಿಯವರು, ದೀಪಾವಳಿಯ ಅಮಾವಾಸ್ಯೆಯಂದು ಕೇದಾರನಾಥನಿಗೆ ಬುಧವಾರ ನಮನ ಸಲ್ಲಿಸಿದರು.
2013ರಲ್ಲಿ ಕಂಡರಿಯದ ಪ್ರವಾಹದಿಂದಾಗಿ ಕೇದಾರನಾಥ ಸರ್ವನಾಶಗೊಂಡಿದ್ದರೂ ದೇವಸ್ಥಾನ ಮಾತ್ರ, ಅದರ ವಿನೂತನ ವಿನ್ಯಾಸದಿಂದಾಗಿ ಅಳಿಯದೆ ಗಟ್ಟಿಯಾಗಿ ನಿಂತಿತ್ತು. ದೇಗುಲ ದರ್ಶನದ ನಂತರ, ಕೇದಾರನಾಥ ಹೇಗೆ ಮರು ನಿರ್ಮಾಣವಾದ ದೃಶ್ಯಾವಳಿಗಳನ್ನು ಚಿತ್ರಗಳಲ್ಲಿ ವೀಕ್ಷಿಸಿದರು.
2013ರ ಜೂನ್ 16ರಂದು ಸಂಭವಿಸಿದ ಮೇಘಸ್ಫೋಟದಿಂದಾಗಿ ಉಕ್ಕಿ ಹರಿದಿದ್ದ ಮಂದಾಕಿನಿ ನದಿ, ತನ್ನ ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲ ಕೊಚ್ಚಿಕೊಂಡು ಹೋಗಿತ್ತು, ಒಟ್ಟು 5,700 ಜನರು ಈ ಪ್ರವಾಹದಿಂದಾಗಿ ಪ್ರಾಣ ಕಳೆದುಕೊಂಡಿದ್ದರು.
ಕೇದಾರನಾಥದಲ್ಲಿ ಭಾರೀ ಪ್ರಮಾಣದಲ್ಲಿ ಹಿಮ ಬಿದ್ದಿರುವುದರಿಂದ ಅಲ್ಲಿ ತಾಪಮಾನ ಮೈನಸ್ 7 ಡಿಗ್ರಿ ಇದ್ದು, 4ರಿಂದ 5 ಅಡಿ ಹಿಮ ಬಿದ್ದಿದೆ. ಪಕ್ಕದಲ್ಲಿಯೇ ಅಲಕನಂದಾ ಮತ್ತು ಮಂದಾಕಿನಿ ನದಿಯ ಸಂಗಮವೂ ಇದೆ.

ಜವಾನರೊಂದಿಗೆ ದೀಪಾವಳಿ : ಹಿಂದೂ ಧರ್ಮೀಯರ ಪವಿತ್ರ ಕ್ಷೇತ್ರವಾಗಿರುವ ಗಂಗೋತ್ರಿಗೆ ಹೋಗುವ ದಾರಿಯಲ್ಲಿರುವ, ಭಾಗೀರತಿ ನದಿಯ ದಡದಲ್ಲಿರುವ, ಉತ್ತರಕಾಶಿ ಜಿಲ್ಲೆಯ ಎಂಬ ಗ್ರಾಮದಲ್ಲಿ, ದೇಶವನ್ನು ಕಾಪಾಡುತ್ತಿರುವ ಸೈನಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೀಪಾವಳಿಯ ದೀಪ ಬೆಳಗಿದರು.
PM @narendramodi celebrates Diwali with jawans of the Indian Army and ITBP, at Harsil in Uttarakhand. pic.twitter.com/adktShfPtt
— PIB India (@PIB_India) November 7, 2018
ಐಟಿಬಿಪಿ (ಇಂಡೋ ಟಿಬೇಟನ್ ಬಾರ್ಡರ್ ಪೊಲೀಸ್) ಸಿಬ್ಬಂದಿಗೆ ಸ್ವತಃ ಸಿಹಿಯನ್ನು ತಿನ್ನಿಸಿದ ಮೋದಿಯವರು, ವಿಪರೀತ ಪರಿಸ್ಥಿತಿಯಲ್ಲಿಯೂ ಭಾರತದ ಗಡಿ ಕಾಯುತ್ತಿರುವ ರಕ್ಷಣಾ ಸಿಬ್ಬಂದಿಯ ದೇಶಭಕ್ತಿಯನ್ನು ಶ್ಲಾಘಿಸಿದರು.
PM @narendramodi celebrates Diwali with jawans of the Indian Army and ITBP, at Harsil in Uttarakhand. pic.twitter.com/FtFf9zNClh
— PIB India (@PIB_India) November 7, 2018
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತ, "ದೂರದ ಹಿಮಾಚ್ಛಾದಿತ ಪ್ರದೇಶದಲ್ಲಿ ದೇಶದ ಗಡಿಯನ್ನು ಕಾಯುವ ನಿಮ್ಮ ಶ್ರದ್ಧೆ ಇಡೀ ದೇಶಕ್ಕೆ ನವಚೈತನ್ಯವನ್ನು ನೀಡುತ್ತದೆ ಮತ್ತು 125 ಕೋಟಿ ಭಾರತೀಯರ ಭವಿಷ್ಯ ಮತ್ತು ಕನಸನ್ನು ಸಂರಕ್ಷಿಸುತ್ತಿದೆ" ಎಂದು ಸಂದೇಶ ನೀಡಿದ್ದಾರೆ.
ದೇಶದ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಭದ್ರಪಡಿಸಲು ಸರಕಾರ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದೆ. ಒನ್ ಹುದ್ದೆ, ಒಂದು ಪಿಂಚಣಿ ಸೇರಿದಂತೆ, ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ ತೆಗೆದುಕೊಂಡಿದೆ. ಭಾರತದ ಸೇನಾ ವ್ಯವಸ್ಥೆಯ ಬಗ್ಗೆ ವಿಶ್ವದಾದ್ಯಂತ ಉತ್ತಮ ಅಭಿಪ್ರಾಯವಿದೆ ಎಂದು ಅವರು ಶ್ಲಾಘಿಸಿದರು.
-
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications