ನರೇಂದ್ರ ಮೋದಿಗೆ ಇಸ್ರೇಲಿನಿಂದ ರತ್ನಗಂಬಳಿ ಸ್ವಾಗತ
ನವದೆಹಲಿ, ಜುಲೈ 3: ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ನೆಲದ ಮೇಲೆ ಇಳಿಯಲಿದ್ದಾರೆ. ಮೋದಿ ಸ್ವಾಗತಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ರತ್ನಗಂಬಳಿ ಹಾಸಿ ಕಾದು ಕುಳಿತಿದ್ದಾರೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭೇಟಿ 'ಐತಿಹಾಸಿಕ ಮತ್ತು ಫಲಪ್ರದವಾಗಲಿದೆ' ಎಂದು ಇಸ್ರೇಲ್ ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಸೋಫರ್ ಹೇಳಿದ್ದಾರೆ. ಭಾರತ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ಸಂಬಂಧ ಆರಂಭವಾಗಿ 25 ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

ಇನ್ನು ಭೇಟಿಯುದ್ದಕ್ಕೂ ಇಸ್ರೇಲ್ ಪ್ರಧಾನಿ ನೇತನ್ಯಾಹು ನರೇಂದ್ರ ಮೋದಿಯವರಿಗೆ ಸಾಥ್ ನೀಡಲಿದ್ದಾರೆ. ತೀರಾ ವಿಶೇಷ ಅತಿಥಿಗಳು ಬಂದಾಗ ಮಾತ್ರ ಇಸ್ರೇಲ್ ಪ್ರಧಾನಿಗಳು ಹೀಗೆ ವಿದೇಶಿ ಅತಿಥಿಗಳನ್ನು ಎಸ್ಕಾರ್ಟ್ ಮಾಡುತ್ತಾರೆ.
ಇನ್ನು ಇಸ್ರೇಲ್ ಪ್ರಧಾನಿ ನೇತನ್ಯಾಹು ಕೂಡಾ ನರೇಂದ್ರ ಮೋದಿಯನ್ನು ತಮ್ಮ ಗೆಳೆಯ ಎಂದು ಸಂಬೋಧಿಸಿದ್ದಾರೆ. "ನಾಳೆ ನನ್ನ ಗೆಳೆಯ ಭಾರತದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲಿಗೆ ಬರಲಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಥ್ ನೀಡಲಿದ್ದೇನೆ," ಎಂದು ಬೆಂಜಮಿನ್ ನೇತನ್ಯಾಹು ಟ್ವೀಟ್ ಮಾಡಿದ್ದಾರೆ.
Tomorrow, my friend Indian Prime Minister @NarendraModi will arrive in Israel; India is the largest democracy in the world.
— PM of Israel (@IsraeliPM) July 3, 2017
ಪ್ರತಿವರ್ಷ ಸುಮಾರು 6 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಇಸ್ರೇಲಿನಿಂದ ಭಾರತ ಆಮದು ಮಾಡಿಕೊಳ್ಳುತ್ತದೆ. ಆದರೆ ಇದನ್ನು ಮೀರಿದ ಮಹತ್ವ ಈ ಭೇಟಿಗೆ ಇದೆ ಎಂದು ಇಸ್ರೇಲ್ ವಿದೇಶಾಂಗ ಸಚಿವರು ಹೇಳಿದ್ದು ಒಟ್ಟಾರೆ ಭೇಟಿ ಮಹತ್ವ ಪಡೆದುಕೊಂಡಿದೆ.
ನೀರಾವರಿ ಮತ್ತು ಕೃಷಿಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಪ್ರಮುಖ ಮಾತುಕತೆಗಳು ಮತ್ತು ಒಪ್ಪಂದಗಳು ನಡೆಯುವ ಸಾಧ್ಯತೆಯೂ ಇದೆ.












Click it and Unblock the Notifications