ಮೋದಿ ಕ್ಯಾಬಿನೆಟ್ ಅಂಕಿ ಅಂಶಗಳಲ್ಲಿ: 10 ರಾಜ್ಯಗಳಿಗೆ ಚಾನ್ಸ್

Posted By:
Subscribe to Oneindia Kannada

ಬೆಂಗಳೂರು, ಜುಲೈ 05: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸಚಿವ ಸಂಪುಟ ಮತ್ತೊಮ್ಮೆ ಪುನಾರಚನೆಯಾಗಿದೆ. ಹೊಸ ಸಂಪುಟಕ್ಕೆ 19 ಹೊಸ ಮುಖಗಳನ್ನು ಸೇರಿಸಿಕೊಳ್ಳಲಾಗಿದೆ. ಒಬ್ಬರಿಗೆ ಬಡ್ತಿ ನೀಡಲಾಗಿದೆ. ಈ ಪೈಕಿ ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರು ಸಂಪುಟ ದರ್ಜೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ಯಾಬಿನೆಟ್ ಗಾತ್ರ, ಯಾವ ರಾಜ್ಯಕ್ಕೆ ಎಷ್ಟು ಪಾಲು, ಯಾವ ಖಾತೆಗಳು ಸೇಫ್ ಮುಂದೆ ಓದಿ...

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಮಂಗಳವಾರ 11 ಗಂಟೆಗೆ ನೂತನ ಸಚಿವರುಗಳುಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಎರಡು ವರ್ಷ ಅವಧಿಯಲ್ಲಿ ಮೋದಿ ಸಂಪುಟ ಎರಡನೇ ಬಾರಿಗೆ ವಿಸ್ತರಣೆ ಅಥವಾ ಪುನರ್ ರಚನೆಯಾಗುತ್ತಿದೆ. 19 ಮಂದಿ ಹೊಸ ಮುಖಗಳ ಸೇರ್ಪಡೆ ನಂತರ ಸಂಪುಟದ ಚಿತ್ರಣ ಇಲ್ಲಿದೆ. [ಮೋದಿ ಸಂಪುಟ ಸೇರಿದ ನೂತನ ಸಚಿವರ ಪಟ್ಟಿ, ಪ್ರಕಾಶ್ ಗೆ ಬಡ್ತಿ]

Ramesh jigajinagi


* 82 ಕ್ಯಾಬಿನೆಟ್ ನ ಗರಿಷ್ಠ ಮಿತಿ

* 75ಕ್ಕೂ ಹೆಚ್ಚಿನ ವಯಸ್ಸಿನ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಕ್ರಮ ತೆಗೆದುಕೊಂಡ ಮೋದಿ.

* 64 ಮಂದಿ ಕೇಂದ್ರ ಸಚಿವರು (25 ಸಂಪುಟ ದರ್ಜೆ, 39 ರಾಜ್ಯ ಖಾತೆ)

* 19 ಸಂಸದರು ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆ.[ಗ್ಯಾಲರಿ : ಮೋದಿ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆ]

* 6 ಜನರಿಗೆ ಕೋಕ್ ಸಾಧ್ಯತೆ: ಸನ್ವಾರ್ ಲಾಲ್ ಜಾಟ್ (ಜಲ ಸಂಪನ್ಮೂಲ), ನಿಹಾಲ್ ಚಂದ್(ಪಂಚಾಯತ್ ರಾಜ್), ರಾಮ್ ಶಂಕತ್ ಕತಾರಿಯಾ (ಎಚ್ ಆರ್ ಡಿ), ಮೋಹಾನ್ ಭಾಯಿ ಕುಂದಾರಿಯಾ (ಕೃಷಿ) ಹಾಗೂ ಮನ್ಸುಖ್ ಭಾಯಿ ವಸಾವ (ಬುಡಕಟ್ಟು ವ್ಯವಹಾರ) ಎಲ್ಲರೂ ರಾಜ್ಯ ಖಾತೆ ಸಚಿವರು. ಕ್ಯಾಬಿನೆಟ್ ದರ್ಜೆಯ ಸಚಿವೆ ನಜ್ಮಾ ಹೆಫ್ತುಲಾ ಅವರು ಸಂಪುಟದಿಂದ ಕೆಳಗಿಳಿಯುವ ಸುದ್ದಿಯಿದೆ.[ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಪರಿಚಯ]

* 5 ಪರಿಶಿಷ್ಟ ಪಂಗಡದ ಸ‌ಚಿವರು -ಅಜಯ್ ತಮ್ಟಾ, ರಾಮದಾಸ್ ಅಥಾವಾಲೆ, ಅರ್ಜುನ್ ರಾಮ್ ಮೇಘವಾಲ್, ರಮೇಶ್ ಜಿಗಜಿಣಗಿ, ಕೃಷ್ಣಾ ರಾಜ್

* 4 ಖಾತೆ ಸೇಫ್. ಗೃಹ(ರಾಜನಾಥ್ ಸಿಂಗ್), ವಿದೇಶಾಂಗ ವ್ಯವಹಾರ(ಸುಷ್ಮಾ ಸ್ವರಾಜ್), ರಕ್ಷಣಾ (ಮನೋಹರ್ ಪಾರಿಕ್ಕಾರ್) ಹಾಗೂ ಹಣಕಾಸು (ಅರುಣ್ ಜೇಟ್ಲಿ)

* 2 ಮಿತ್ರಪಕ್ಷಗಳಿಗೆ ಅವಕಾಶ. ರಾಮದಾಸ್ ಅಥಾವುಲೆ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಅನುಪ್ರಿಯಾ ಪಟೇಲ್,ಉತ್ತರಪ್ರದೇಶದ ಅಪ್ನಾದಳದ ಸಂಸದೆ.

* 2 ಅಲ್ಪಸಂಖ್ಯಾತ ಸಚಿವರು- ಎಂಜೆ ಅಕ್ಬರ್, ಎಸ್ಎಸ್ ಅಹ್ಲುವಾಲಿಯಾ.

* 2 ಪರಿಶಿಷ್ಟ ಪಂಗಡದ ಸಚಿವರು- ಜಸ್ವಂತ್ ಸಿಂಗ್ ಭಾಬೊರ್, ಫಗನ್ ಸಿಂಗ್ ಕುಲಸ್ತೆ

* 1 ಬಡ್ತಿ. ಪರಿಸರ ಖಾತೆ (ಸ್ವತಂತ್ರ) ಹೊಂದಿದ್ದ ಪ್ರಕಾಶ್ ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ.

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
#ModiCabinet in Numbers: A total of 19 new ministers inducted in the expansion of the Union Council of Ministers on Tuesday. The Cabinet expansion has come ahead of Assembly polls in UP and a few other states next year.
Please Wait while comments are loading...