ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ

|
Google Oneindia Kannada News

ಡೆಹ್ರಾಡೂನ್‌, ನವೆಂಬರ್‌ 05: ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರಾಖಂಡದಲ್ಲಿ ಕೇದಾರನಾಥದಲ್ಲಿ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಕೇದಾರನಾಥ ಪ್ರವಾಸದಲ್ಲಿ ಇರಲಿದ್ದಾರೆ. ಇಂದು ಮುಂಜಾನೆಯೇ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ತಲುಪಿದ್ದು, ಪ್ರಾರ್ಥನೆ ಸಲ್ಲಿಸಿದ್ದಾರೆ. ಹಾಗೆಯೇ ಬಳಿಕ ಕೇದಾರನಾಥದಲ್ಲಿ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.

ಇಂದು ಬೆಳ್ಳಿಗೆ ಎಂಟು ಗಂಟೆ ಸುಮಾರಿಗೆ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಧಾನಿ ನರೇಂದ್ರ ಮೋದಿಯನ್ನು ಉತ್ತರಾಖಂಡ ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) ಮತ್ತು ಸಿಎಂ ಪುಷ್ಕರ್ ಸಿಂಗ್ ಧಾಮಿ ಬರಮಾಡಿಕೊಂಡರು.

ಬಳಿಕ 2013 ರ ಭೀಕರ ಪ್ರವಾಹದ ನಂತರ ಕೇದಾರನಾಥದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಧಾನಿ ಮೋದಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಪ್ರಧಾನಮಂತ್ರಿ ಕೇದಾರನಾಥ ದೇವಾಲಯದ ಸಂಕೀರ್ಣದಲ್ಲಿ ಕೈಗೊಂಡ ಹಾಗೂ ಪ್ರಸ್ತುತ ಕಾಮಗಾರಿ ನಡೆಯುತ್ತಿರುವುದನ್ನು ಪರಿಶೀಲನೆ ನಡೆಸಿದರು. ಹಾಗೆಯೇ ಕೇದಾರನಾಥ ದೇಗುಲದಲ್ಲಿ ಶಿವನ ದರ್ಶನ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಹಾಗೆಯೇ ಕೇದಾರನಾಥ ದೇವಾಲಯದಲ್ಲಿ ಆರತಿಯನ್ನು ಮಾಡಿದ್ದಾರೆ.

 Modi in Kedarnath: PM Modi unveils the statue of Shri Adi Shankaracharya at Kedarnath

ಬಳಿಕ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಪ್ರಧಾನಿ ಕಾರ್ಯಾಲಯದ ಸೂಚನೆಯ ಮೇರೆಗೆ ಈ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು, ಮೈಸೂರಿನ ಖ್ಯಾತ ಶಿಲ್ಪಿ ಯೋಗಿರಾಜ್ ಈ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. 2013ರಲ್ಲಿ ಉತ್ತರಾಖಂಡದಲ್ಲಿ ಭಾರೀ ಪ್ರವಾಹ ಉಂಟಾದ ಸಂದರ್ಭದಲ್ಲಿ ಪ್ರತಿಮೆಯು ನಾಶವಾಗಿದೆ. ಈ ಹಿನ್ನೆಲೆಯಿಂದಾಗಿ ಈ ಆದಿ ಗುರು ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ. ಈ ಪ್ರತಿಮೆಯು ಸುಮಾರು 12 ಅಡಿ ಆಗಿದೆ.

ಕೇದಾರನಾಥದಲ್ಲಿ 180 ಕೋಟಿ ರೂ ಮೌಲ್ಯ ಹಲವು ಯೋಜನೆಗಳಿಗೆ ಮೋದಿ ಚಾಲನೆಕೇದಾರನಾಥದಲ್ಲಿ 180 ಕೋಟಿ ರೂ ಮೌಲ್ಯ ಹಲವು ಯೋಜನೆಗಳಿಗೆ ಮೋದಿ ಚಾಲನೆ

ಉತ್ತರಾಖಂಡದಲ್ಲಿ ಬದ್ರಿನಾಥ್, ಕೇದಾರನಾಥ, ಯಮುನೋತ್ರಿ ಹಾಗೂ ಗಂಗೋತ್ರಿ ಸೇರಿದಂತೆ ಹಿಂದೂ ಪವಿತ್ರ ದೇವಾಲಯಗಳಿಗೆ ಪ್ರತಿವರ್ಷ ಸಾವಿರಾರು ಭಕ್ತಾದಿಗಳು ಪ್ರವಾಸ ಮಾಡುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದ ಅಭಿವೃದ್ಧಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿತ್ತು. ಈ ಮಧ್ಯೆ ಶುಕ್ರವಾರ ಕೇದಾರನಾಥಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

ಉತ್ತರಾಖಂಡದಲ್ಲಿ ಪ್ರಧಾನಿ ಮೋದಿ

ಇಂದು ಉತ್ತರಾಖಂಡಕ್ಕೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 180 ಕೋಟಿ ರೂಪಾಯಿ ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಿದ್ದಾರೆ. ಸಂಗಮ್ ಘಾಟ್ ಪುನರ್ ಅಭಿವೃದ್ಧಿ, ಪ್ರಾಥಮಿಕ ಚಿಕಿತ್ಸೆ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹ, ವಿಚಾರಣೆ ಕೇಂದ್ರ, ಮಂದಾಕಿನಿ ಅಷ್ಟಪಥ ಸಾಲು ನಿರ್ವಹಣೆ, ಮಳೆ ನಿರಾಶ್ರಿತರ ಕೇಂದ್ರ, ಸರಸ್ವತಿ ನಾಗರಿಕ ಸೌಕರ್ಯ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಹಾಗೆಯೇ ಸರಸ್ವತಿ ಅಷ್ಟಪಥದಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪರಿಶೀಲನೆ ನಡೆಸಲಿದ್ದಾರೆ. ಇದರ ಜೊತೆಗೆ ಈಗಾಗಲೇ ಪೂರ್ಣಗೊಂಡ ಮಂದಾಕಿನಿ ತಡೆಗೋಡೆ ಅಷ್ಟಪಥ, ಸರಸ್ವತಿ ತಡೆಗೋಡೆ ಅಷ್ಟಪಥ, ಮಂದಾಕಿನಿ ನದಿಯ ಮೇಲೆ ತೀರ್ಥ ಪುರೋಹಿತ್ ಮನೆ ಮತ್ತು ಗರುಡ ಚಟ್ಟಿ ಸೇತುವೆ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರವಷ್ಟೇ ದೇಶದ ಯೋಧರೊಂದಿಗೆ ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ. ಪ್ರತಿ ವರ್ಷವೂ ಪ್ರಧಾನಿ ಮೋದಿ ಯೋಧರೊಂದಿಗೆ ದೀಪಾವಳಿಯನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ. ಗುರುವಾರ ಬೆಳಗ್ಗೆ 10:30 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯ ನೌಶೇರಾ ಸೆಕ್ಟರ್‌ನ ಮುಂಭಾಗದ ಪ್ರದೇಶವನ್ನು ತಲುಪಿದ ಪ್ರಧಾನಿ ಮೋದಿ ಬಳಿಕ ಯೋಧರೊಂದಿಗೆ ದೀಪಾವಳಿಯನ್ನು ಆಚರಣೆ ಮಾಡಿದರು. (ಒನ್‌ಇಂಡಿಯಾ ಸುದ್ದಿ)

English summary
Modi in Kedarnath: PM Modi unveils the statue of Shri Adi Shankaracharya at Kedarnath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X