ಮೋದಿ ಸಂಪುಟ: 19 ಹೊಸ ಮುಖಗಳು ಇನ್, 6 ಮಂದಿ ಔಟ್

Posted By:
Subscribe to Oneindia Kannada

ನವದೆಹಲಿ, ಜುಲೈ 05: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸಚಿವ ಸಂಪುಟ ಪುನಾರಚನೆಗೆ ವೇದಿಕೆ ಸಿದ್ಧವಾಗಿದೆ. ನೂತನ ಸಚಿವರ ಪಟ್ಟಿಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ. ಲಭ್ಯ ಮಾಹಿತಿ ಪ್ರಕಾರ ಹೊಸ ಸಂಪುಟಕ್ಕೆ 19 ಹೊಸ ಮುಖಗಳನ್ನು ಸೇರಿಸಿಕೊಳ್ಳಲಾಗುತ್ತಿದೆ ಹಾಗೂ 6 ಮಂದಿಗೆ ಕೊಕ್ ನೀಡಲಾಗುತ್ತಿದೆ. [ಮೋದಿ ಸಂಪುಟ ಸೇರಿದ ನೂತನ ಸಚಿವರ ಪಟ್ಟಿ, ಪ್ರಕಾಶ್ ಗೆ ಬಡ್ತಿ]

ಜಾತಿ, ಮತ, ಪ್ರಾದೇಶಿಕತೆ, ಕೌಶಲ್ಯ, ಅನುಭವ, ವಿದ್ಯೆ ಎಲ್ಲವನ್ನು ಪರಿಗಣಿಸಿ ಮೋದಿ ಅವರು ಸಂಪುಟ ಪುನರ್ ರಚನೆ ಮಾಡುತ್ತಿದ್ದಾರೆ.ಉತ್ತರಪ್ರದೇಶಕ್ಕೆ ಹೆಚ್ಚಿನ ಆದ್ಯತೆ ಸಿಗುವುದು ಗೊತ್ತಿರುವ ವಿಷಯ.ಉತ್ತರಪ್ರದೇಶದಿಂದ ಮೂರು ಹಾಗೂ ಉತ್ತರಾಖಂಡ್ ನಿಂದ ಒಬ್ಬರಿಗೆ ಅವಕಾಶ ಸಿಗಲಿದೆ. [ಮೋದಿ ಸಂಪುಟಕ್ಕೆ ರಮೇಶ್ ಜಿಗಜಿಣಗಿ?]

ಕರ್ನಾಟಕದ ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಸಂಪುಟ ಸೇರುವ ಭಾಗ್ಯ ದೊರೆತರೆ, ರಾಜ್ಯ ಸಚಿವ ಜಿಎಂ ಸಿದ್ದೇಶ್ವರ ಅವರಿಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಿದೆ. [ಎನ್ ಡಿಎ ಸಂಪುಟ ವಿಸ್ತರಣೆ, ಡಿವಿಎಸ್ ಸೇಫ್, ದೇಕಾಗೆ ಚಾನ್ಸ್]

PM Narendra Modi likely to remove 6 ministers, 19 to be inducted

ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧರಾದವರು: ಪಿಪಿ ಚೌಧರಿ, ಎಸ್ಎಸ್ ಅಹ್ಲುವಾಲಿಯಾ, ಎಂಜೆ ಅಕ್ಬರ್, ಅನುಪ್ರಿಯ ಪಟೇಲ್, ಪುರುಷೋತ್ತಮ್ ರುಪಾಲ, ಮಹೇಂದ್ರ ಪಾಂಡೆ, ವಿಜಯ್ ಗೋಯಲ್, ಸುಭಾಶ್ ರಾಮ್ ಭಾಮ್ರೆ, ಅನಿಲ್ ಮಾಧವ ದಾವೆ, ಅರ್ಜುನ್ ಮೆಘ್ವಾಲ್, ರಮೇಶ್ ಜಿಗಜಿಣಗಿ, ಜಸ್ವಂತ್ ಸಿಂಗ್ ಭಾಬೊರೆ, ರಾಜನ್ ಗೊಹೈನ್, ಅಜಯ್ ತಮ್ಟಾ, ರಾಮದಾಸ್ ಅತಾವಲೆ, ಸಿಆರ್ ಚೌಧರಿ, ಕೃಷ್ಣರಾಜ್, ಮನ್ಸುಖ್ ಮಂದವಿಯಾ. [ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿಯಿಂದ ಎಂಎಂ ಜೋಶಿ ಅಭ್ಯರ್ಥಿ?]

ಕ್ಯಾಬಿನೆಟ್ ದರ್ಜೆ ಬಡ್ತಿ ಸಾಧ್ಯತೆ: ಪಿಯೂಷ್ ಗೋಯೆಲ್, ಇಂಧನ ಸಚಿವ, ಧರ್ಮೇಂದ್ರ ಪ್ರಧಾನ್, ಪೆಟ್ರೋಲಿಯಂ ಸಚಿವ, ಮುಖ್ತಾರ್ ಅಬ್ಬಾಸ್ ನಖ್ವಿ, ಅಲ್ಪ ಸಂಖ್ಯಾತ ಕಲ್ಯಾಣ ಸಚಿವ[ಗ್ಯಾಲರಿ : ಮೋದಿ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆ]

ಸೋನೋವಾಲ್ ಅವರ ಸ್ಥಾನಕ್ಕೆ ರಮನ್ ದೇಕಾ ಅವರು ಬರಲಿದ್ದಾರೆ. ಉತ್ತರ ಪ್ರದೇಶದಿಂದ ಬ್ರಾಹ್ಮಣ ಸಮುದಾಯದ ಮಹೇಂದ್ರ ನಾಥ್ ಪಾಂಡೆ, ಉತ್ತರಾಖಂಡ್ ನ ದಲಿತ ಮುಖಂಡ ಸಜಯ್ ತಮ್ಜಾ ಸಂಪುಟ ಸೇರಲಿದ್ದಾರೆ.75ಕ್ಕೂ ಅಧಿಕ ವಯಸ್ಸಿನ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ. ನಜ್ಮಾ ಹೆಫ್ತುಲ್ಲಾ ಜಾಗದಲ್ಲಿ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಬರಲಿದ್ದಾರೆ. ವಾಣಿಜ್ಯ, ರಕ್ಷಣಾ, ಗೃಹ ಹಾಗೂ ವಿದೇಶಾಂಗ ಖಾತೆಗಳು ಮಾತ್ರ ಭದ್ರವಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi will induct 19 new faces in his Council of Ministers and remove 6 from the cabinet.Non performers are likely to be dropped. There are likely to be two faces from Uttar Pradesh which is going to polls soon.
Please Wait while comments are loading...