ಇಂದಿರಾ ಗಾಂಧಿ ಮಾತೃತ್ವ ಯೋಜನೆ ದೇಶದೆಲ್ಲೆಡೆ ಜಾರಿ!

Posted By:
Subscribe to Oneindia Kannada

ಬೆಂಗಳೂರು, ಮೇ 18: ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷದ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಇಂದಿರಾ ಗಾಂಧಿ ಮಾತೃತ್ವ ಯೋಜನೆ ದೇಶದೆಲ್ಲೆಡೆ ಜಾರಿಗೊಳಿಸಲಾಗಿದೆ. ಆದರೆ, ಮಾತೃತ್ವ ಸೌಲಭ್ಯ ಮೊದಲ ಮಗುವಿಗೆ ಸೀಮಿತಗೊಳಿಸಲಾಗಿದೆ.

ಮಾತೃತ್ವ ಸೌಲಭ್ಯ ಮೊದಲ ಮಗುವಿಗೆ ಸೀಮಿತ ಇದುವರೆಗೂ ಎರಡು ಮಕ್ಕಳಿಗೆ ನೀಡಲಾಗುತ್ತಿದ್ದ ಮಾತೃತ್ವ ನೆರವನ್ನು ಕೇಂದ್ರ ಸರ್ಕಾರ ಒಂದು ಮಗುವಿಗೆ ಸೀಮಿತಗೊಳಿಸಿದೆ.

ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ ಮೂಲಕ ಗರ್ಭಿಣಿ ಮಹಿಳೆಯರಿಗೆ 6,000 ರೂ. ನೀಡಲಾಗುತ್ತಿದೆ. ಇದುವರೆಗೂ ಈ ಯೋಜನೆಯ ನೆರವನ್ನು ಎರಡನೇ ಬಾರಿ ಗರ್ಭಿಣಿಯಾಗುವವರಿಗೂ ನೀಡಲಾಗುತ್ತಿತ್ತು. ಈಗ ಅದನ್ನು ಒಂದು ಮಗುವಿಗೆ ಸೀಮಿತಗೊಳಿಸಲಾಗಿದೆ.

Modi Cabinet extends maternity benefit scheme across India

ಅಲ್ಲದೇ ನೆರವಿನ ಪ್ರಮಾಣವನ್ನು 5 ಸಾವಿರ ರೂ.ಗಳಿಗೆ ಸೀಮಿತಗೊಳಿಸಲಾಗಿದೆ. ಮೊದಲ ಹಂತದಲ್ಲಿ ಗರ್ಭಿಣಿಯರಿಗೆ 1,000 ರೂ. ನೀಡಲಾಗುವುದು. ಆರು ತಿಂಗಳ ಅವಧಿಯಲ್ಲಿ ತಪಾಸಣೆಗೆ ಬರುವ ಗರ್ಭಿಣಿಯರಿಗೆ 2,000 ರೂ. ಹಾಗೂ ಮಗುವಿನ ಜನನದ ವೇಳೆ 2,000 ರೂ. ನೀಡಲಾಗುವುದು. ಮಾರ್ಚ್ 2020ರ ತನಕದ ಈ ಯೋಜನೆ ವೆಚ್ಚ 12,661 ಕೋಟಿ ರು, ಇದರಲ್ಲಿ ಕೇಂದ್ರದ ಪಾಲು 7,932 ಕೋಟಿ ರು ನಷ್ಟಿದೆ.

ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಹಾಗೂ ರಕ್ತಹೀನತೆಯನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರವು 'ಮಾತೃಪೂರ್ಣ' ಯೋಜನೆ ಜಾರಿಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಗರ್ಭಿಣಿ ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶವುಳ್ಳ ತರಕಾರಿ, ಬೇಳೆ ಹಾಗೂ ಬಿಸಿಯೂಟವನ್ನು ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುತ್ತದೆ. ಪೌಷ್ಟಿಕಾಂಶದ ಆಹಾರ ಸೇವಿಸಲು ಇಚ್ಛಿಸುವವರು ಪ್ರತಿ ಊಟಕ್ಕೆ 10 ರೂ. ನೀಡಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Union cabinet on Wednesday decided to extend the maternity benefit scheme across India, under which pregnant and lactating mothers will get Rs 6,000 for their first born child
Please Wait while comments are loading...