Video: ದೆಹಲಿಯ ಇಂಡಿಯಾ ಗೇಟ್ ಮುಂದೆ ಮಾಡೆಲ್ ಟವೆಲ್ ಡ್ಯಾನ್ಸ್: ಕ್ಯಾಕರಿಸಿ ಉಗಿದ ನೆಟ್ಟಿಗರು..!
ದೆಹಲಿಯಲ್ಲಿರುವ ಇಂಡಿಯಾ ಗೇಟ್ ಭಾರತದ ಹೆಮ್ಮೆಯ ಸ್ಮಾರಕ. ಇದು ಐತಿಹಾಸಿಕ ಮತ್ತು ಸುಂದರವಾದ ರಾಷ್ಟ್ರೀಯ ಸ್ಮಾರಕವೂ ಹೌದು. ಇದರ ಮುಂದೆ ನಾಚಿಕೆಗೇಡಿನ ಕೆಲಸ ಮಾಡಿದರೆ ಎಂಥವರಿಗೂ ರಕ್ತ ಕುದಿಯುತ್ತದೆ. ಆದರೆ ಸನ್ನತಿ ಮಿತ್ರ (Sannati Mitra) ಎಂಬ ಮಾಡೆಲ್ ಇಂಡಿಯಾ ಗೇಟ್ ಮುಂದೆ ಟವೆಲ್ ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಂಗಣ್ಣಿಗೆ ಗುರಿಯಾಗಿದೆ. ಈ ರೀಲ್ ಅನ್ನು ಆಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಗೇಟ್ ಮುಂದೆ ಟವೆಲ್ ಸುತ್ತಿಕೊಂಡು ಮಾಡೆಲ್ ಡ್ಯಾನ್ಸ್ ಮಾಡಿದ್ದನ್ನು ನೋಡಿ ನೆಟ್ಟಗರು ಗರಂ ಆಗಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ಮಾಡೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದಾರೆ. ಜೊತೆಗೆ ಮಾಡೆಲ್‌ಗೆ ಕೆಲ ಸಲಹೆ ನೀಡಿದ್ದಾರೆ.

ದೆಹಲಿಯ ಪ್ರವಾಸ ಅಂದರೆ ಬಹುತೇಕರ ಫೇವರೆಟ್. ಇಲ್ಲಿ ಸಂದರ್ಶಿಸಬಹುದಾದ ಅನೇಕ ಸ್ಥಳಗಳಿವೆ. ಲೋಟಸ್ ದೇವಾಲಯದಿಂದ ಹಿಡಿದು ಅಚ್ಚರಿಗೊಳಿಸುವ ಜಂತರ್ ಮಂತರ್‌ವರೆಗೆ ಎಲ್ಲಾ ಸ್ಥಳಗಳು ಅದ್ಭುತವಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ದೆಹಲಿ ಶ್ರೀಮಂತ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ, ರಾತ್ರಿಯ ಮಾರುಕಟ್ಟೆಗೆ ತುಂಬಾ ಜನಪ್ರಿಯವಾಗಿರುವ ನಗರವಾಗಿದೆ. ಹೀಗೆ ದೆಹಲಿಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಇಂಡಿಯಾ ಗೇಟ್ ಕೂಡ ಒಂದಾಗಿದೆ.
ಇಂಡಿಯಾ ಗೇಟ್ ದಿನದ 24 ಗಂಟೆಗಳ ಕಾಲ ತೆರೆದಿರುವುದರಿಂದ ಯಾವ ಸಮಯದಲ್ಲಿಯಾದರೂ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದನ್ನು 'ಇಂಡಿಯಾ ವಾರ್ ಮೆಮೋರಿಯಲ್' ಎಂದು ಸಹ ಕರೆಯಲಾಗುತ್ತದೆ. ಇದನ್ನು ಭಾರತೀಯ ಸೇನೆಯ 82000 ಸೈನಿಕರನ್ನು ಸ್ಮರಿಸಲು ನಿರ್ಮಿಸಲಾಗಿದೆ. ಇಂಡಿಯಾ ಗೇಟ್‌ನ ವಾಸ್ತುಶಿಲ್ಪವು ವಿಜಯೋತ್ಸವದ ಕಮಾನು ಎಂದು ವಿಶ್ವಪ್ರಸಿದ್ಧವಾಗಿದೆ. ಇಂತಹ ಸ್ಥಳದಲ್ಲಿ ಮಾಡೆಲ್ ಮಹಿಳೆ ಟವಲ್ ಕಟ್ಟಿಕೊಂಡು ಡ್ಯಾನ್ಸ್ ಮಾಡ್ತಾಳೆ ಅಂದರೆ ಯಾರಿಗೆ ತಾನೆ ಕೋಪ ಬರೋದಿಲ್ಲ ಹೇಳಿ.
ಹೀಗಾಗಿ ನೆಟ್ಟಿಗರು ಆಕೆಯನ್ನು ಶಿಕ್ಷಿಸಲು ದೆಹಲಿ ಪೊಲೀಸರನ್ನು ವಿನಂತಿಸಿದ್ದಾರೆ. ಜೊತೆಗೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರ ಕಾಮೆಮಟ್ ಹೀಗಿದೆ...
ಒಬ್ಬ ವ್ಯಕ್ತಿ ಹೀಗೆ ಬರೆದಿದ್ದಾರೆ- 'ಈ ಜನರನ್ನು ಶಿಕ್ಷಿಸಲು ದೆಹಲಿ ಪೊಲೀಸರಿಗೆ ನಾನು ವಿನಂತಿಸುತ್ತೇನೆ'.
ಮತ್ತೊಬ್ಬರು 'ಏನು ಅಸಂಬದ್ಧ ಇದು, ಅವರು ತಮ್ಮ ಎಲ್ಲಾ ಮಿತಿಗಳನ್ನು ದಾಟಿದ್ದಾರೆ' ಎಂದು ಹೇಳಿದರು.
ಮೂರನೆಯವರು 'ಇದು ಅಶ್ಲೀಲವಾಗಿದೆ. ಈ ಮಹಿಳೆ ಯಾಕೆ ಇಲ್ಲಿಗೆ ಬಂದು ಹೀಗೆ ಮಾಡುತ್ತಿದ್ದಾಳೆ ಅನ್ನೋದು ಅರ್ಥವಾಗುತ್ತಿಲ್ಲ' ಎಂದು ಬರೆದಿದ್ದಾರೆ.
ನಾಲ್ಕನೇ ನೆಟ್ಟಿಗರು ಹೀಗೆ ಹೇಳಿದ್ದಾರೆ 'ಆಗ ನಾನಿದ್ದರೆ ಹೇಳುತ್ತಿದ್ದೆ....!' ಎಂದು ಕೋಪದಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೆ ಇಂಡಿಯಾ ಗೇಟ್ ಬಳಿ ಟವೆಲ್ ಕಟ್ಟಿಕೊಂಡು ನೃತ್ಯ ಮಾಡುತ್ತಿರುವ ರೀಲ್ ಅಂತರ್ಜಾಲದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರೀಯ ಸ್ಮಾರಕದ ಮುಂದೆ ಈ ರೀತಿ ಅಸಭ್ಯತೆ ತೋರಿಸಿದರೆ ಹೇಗೆ ಎನ್ನುತ್ತಿದ್ದಾರೆ ಜನ. ಈ ಘಟನೆಯಿಂದ ನೆಟ್ಟಿಗರು ಬೇಸರಗೊಂಡಿದ್ದಾರೆ. ಈ ಮಾಡೆಲ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.
ವೀಡಿಯೋ ಕ್ಲಿಪ್‌ನಲ್ಲಿ ಮಹಿಳೆ ಇಂಡಿಯಾ ಗೇಟ್ ಮುಂದೆ ಟವೆಲ್ ಸುತ್ತಿಕೊಂಡು ನೃತ್ಯ ಮಾಡುವುದನ್ನು ಕಾಣಬಹುದು. ಈ ವೀಡಿಯೋವನ್ನು Instagram ನಲ್ಲಿ @sannati__ ಎಂಬ ಖಾತೆಯಲ್ಲಿ 'ಅಂತರಾಷ್ಟ್ರೀಯ ಪುರುಷರ ದಿನಾಚರಣೆ'ಗೆ ಅಭಿನಂದಿಸಿ ಹಂಚಿಕೊಳ್ಳಲಾಗಿದೆ.












Click it and Unblock the Notifications