• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಮಿಜೋರಾಂ ಸ್ಪೀಕರ್‌

|

ಐಜ್ವಾಲ್, ನವೆಂಬರ್ 05: ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಪದೇ ಪದೇ ಮುಖಭಂಗವಾಗುತ್ತಲೇ ಇದೆ.ಮಿಜೋರಂನ ಕಾಂಗ್ರೆಸ್‌ನ ಹಿರಿಯ ಸದಸ್ಯರೊಬ್ಬರು ಇಂದು ಬಿಜೆಪಿ ಸೇರಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಮಿಜೋರಾಂ ವಿಧಾನಸಭೆಯ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಹಿಫೇ ಅವರು ಇಂದು ಏಕಾಏಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಜೊತೆಗೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ಆಡಳಿತ ಸರ್ವಾಧಿಕಾರಿಯಂತೆ ಇದೆ : ಮಲ್ಲಿಕಾರ್ಜುನ ಖರ್ಗೆ

ಮಿಜೋರಾಂ ವಿಧಾನಸಭೆ ಚುನಾವಣೆ ಇನ್ನು ಕೆಲವು ವಾರಗಳು ಇರುವ ಹೊತ್ತಿನಲ್ಲೇ ಹಿಫೇ ಅಂತಹಾ ಹಿರಿಯ ನಾಯಕರು ಬಿಜೆಪಿಗೆ ಸೇರಿರುವುದು ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ಮಾಡಲಿದೆ. ಏಳು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಹಿಫೇ ಅವರು ರಾಜೀನಾಮೆ ನೀಡಿರುವುದು ಕಾಂಗ್ರೆಸ್‌ಗೆ ಭಾರಿ ಹೊಡೆತ ನೀಡಲಿದೆ.

ಬಾವ-ಬಾಮೈದ ನಡುವೆ ಕಿತ್ತಾಟಕ್ಕೆ ಕಿಚ್ಚು ಹಚ್ಚಿದ ಕಾಂಗ್ರೆಸ್

ಹಿಫೇ ಅವರು ತಮ್ಮ ರಾಜೀನಾಮೆ ಪತ್ರವನ್ನು ಉಪ ಸ್ಪೀಕರ್‌ ಆರ್‌ ಲಾಲ್‌ರಿನವ್‌ಮಾ ಅವರಿಗೆ ನೀಡಿದ್ದಾರೆ. ಕಳೆದ ಐದು ತಿಂಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವ ಐದನೇ ಶಾಸಕ ಹಿಫೇ ಆಗಿದ್ದಾರೆ. ಈಶಾನ್ಯ ಭಾರತದಲ್ಲೀಗ ಏಕೈಕ ಕಾಂಗ್ರೆಸ್‌ ಆಳ್ವಿಕೆ ಇರುವ ರಾಜ್ಯವಾಗಿರುವ ಮಿಜೋರಾಂ ಇದೇ ನ.28ರಂದು ವಿಧಾನಸಭಾ ಚುನಾವಣೆಯನ್ನು ಕಾಣಲಿದೆ.

English summary
Mizoram seniour congress leader and assembly speaker Hiphei joins BJP today. He resigns to congress membership and speaker post. He was elected as MLA for 7 times from congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X