Mizoram Assembly Election 2023: ಮಿಜೋರಾಂ ನಲ್ಲಿ ಬಹುಮತ ಯಾರಿಗೆ? ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಮಿಜೋರಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಚುನಾವಣಾ ಪ್ರಚಾರವನ್ನ ನಡೆಸಿದ್ದು, ನವೆಂಬರ್ 7 ರಂದು ನಡೆಯಲಿರುವ ಮಿಜೋರಾಂ ಚುನಾವಣೆಯಲ್ಲಿ ನಡೆಯಲಿದೆ.ಭಾರತದ ಪುಟಾಣಿ ರಾಜ್ಯ ಮಿಜೋರಾಂ ವಿಧಾನಸಭೆ ಎಲೆಕ್ಷನ್‌ಗೆ ಕ್ಷಣಗಣನೆ ಶುರುವಾಗಿದೆ.
ಹೌದು, ಮಿಜೋರಾಂ ವಿಧಾನಸಭೆಗೆ ಮತದಾನಕ್ಕೆ ಕೆಲ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಇದೇ ಸಮಯದಲ್ಲಿ ಚುನಾವಣೆ ಸಮೀಕ್ಷೆ ವರದಿ ಹೊರಬಿದ್ದು ಭಾರಿ ಸಂಚಲನ ಸೃಷ್ಟಿಯಾಗಿದೆ. ಹಾಗಾದರೆ ಮಿಜೋರಾಂ ನಲ್ಲಿ ಬಹುಮತ ಯಾರಿಗೆ ಸಿಗಲಿದೆ? ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

40 ವಿಧಾನಸಭೆ ಸ್ಥಾನಗಳನ್ನ ಹೊಂದಿರುವ ಮಿಜೋರಾಂನಲ್ಲಿ ಚುನಾವಣೆ ಕಾವು ಜೋರಾಗಿದೆ. ಮಿಜೋರಾಂ ರಾಜ್ಯ ರಾಜಕಾರಣದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (MNF) & ಜೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಸ್ಥಳೀಯ ಪ್ರಬಲ ಪಕ್ಷಗಳು. ಪ್ರತಿ ಬಾರಿ ಎಲೆಕ್ಷನ್ ನಡೆದಾಗ ಎರಡು ಪಕ್ಷಗಳು ತಮ್ಮ ತಾಕತ್ ತೋರಿಸುತ್ತವೆ. ಈ ಬಾರೀಯೂ ಸಹ ಮಿಜೋರಾಂ ಸ್ಥಳೀಯ ಪಕ್ಷಗಳದ್ದೇ ಆರ್ಭಟ ಮುಂದುವರಿಯುವ ಮುನ್ಸೂಚನೆಯನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ಲೋಕ್ ಪಾಲ್ ನೀಡಿವೆ.
ಮಿಜೋರಾಂ ವಿಧಾನಸಭೆ ಕ್ಷೇತ್ರಗಳ ಕುರಿತು ಲೋಕ್ ಪಾಲ್ ಸಮೀಕ್ಷೆಯ ಪ್ರಕಾರ, ಮಿಜೋ ನ್ಯಾಷನಲ್ ಫ್ರಂಟ್ (MNF) 12ರಿಂದ 14 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಜೋರಾಂ ಪೀಪಲ್ಸ್ ಮೂವ್ಮೆಂಟ್ ಪಕ್ಷ 10 ರಿಂದ 12 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಅಲ್ಲದೇ ಮಿಜೋರಾಂ ನಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ 12 ರಿಂದ 14 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಇನ್ನೂ ದೇಶದಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ, ಯಾವುದೇ ಸ್ಥಾನವನ್ನ ಪಡೆಯುವುದಿಲ್ಲ ಎಂದು ಸಮೀಕ್ಷೆ ತಿಳಿಸಿದ್ದು, ಇತರರು 00 ರಿಂದ 03 ಸ್ಥಾನ ಗೆಲ್ಲುತ್ತಾರೆ ಎಂದು ಲೋಕ್ ಪಾಲ್ ಸಮೀಕ್ಷೆಯ ವರದಿ ಮಾಡಿದೆ.

ಸ್ಮಾಲ್ ಬಾಕ್ಸ್ ಇಂಡಿಯಾ ಸಮೀಕ್ಷೆ ಹೇಳಿದ್ದೇನು?
ಸ್ಮಾಲ್ ಬಾಕ್ಸ್ ಇಂಡಿಯಾ ಸಮೀಕ್ಷೆಯ ಮಾಹಿತಿ ಪ್ರಕಾರ, ಮಿಜೋರಾಂ ರಾಜ್ಯದಲ್ಲಿ ಈ ಎಲೆಕ್ಷನ್‌ನಲ್ಲಿ ಜೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ. ಜೋರಾಂ ಪೀಪಲ್ಸ್ ಮೂವ್ಮೆಂಟ್ ಪಕ್ಷ 13 ರಿಂದ 15 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಹಾಗೇ ಮಿಜೋ ನ್ಯಾಷನಲ್ ಫ್ರಂಟ್ (MNF) 12ರಿಂದ 14 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಇದು ಹೊರತುಪಡಿಸಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮಿಜೋರಾಂ ಚುನಾವಣೆ ಅಖಾಡದಲ್ಲಿ 08ರಿಂದ 10 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಆದರೆ ಬಿಜೆಪಿ 00ರಿಂದ 01 ಸ್ಥಾನ ಮತ್ತು ಇತರರು 00 ರಿಂದ 02 ಸ್ಥಾನ ಗೆಲ್ಲುತ್ತಾರೆ ಅಂತಿದೆ ಎಂದು ಸಮೀಕ್ಷೆ ಹೇಳಿಕೆ.












Click it and Unblock the Notifications