ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮನ್ನು ಬೆರಗುಗೊಳಿಸುವ ಮಂಗಳನ 3ಡಿ ಚಿತ್ರಗಳು

|
Google Oneindia Kannada News

ಬೆಂಗಳೂರು, ಆಗಸ್ಟ್, 18: ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತಕ್ಕೆ ಹೊಸ ಕೀರ್ತಿ ತಂದುಕೊಟ್ಟ ಮಂಗಳಯಾನ ಮತ್ತಷ್ಟು ಚಿತ್ರಗಳನ್ನು ಸೆರೆಹಿಡಿದು ಕಳಿಸಿದೆ. ಭಾರತೀಯ ಬಾಹ್ಯಾಕಾಶದ ವಿಜ್ಞಾನಿಗಳು ಇದರ ಮೇಲೆ ನಿರಂತರ ಸಂಶೋಧನೆ ಶುರುಹಚ್ಚಿಕೊಂಡಿದ್ದಾರೆ.

ಮಂಗಳಯಾನದ ಯಶಸ್ಸು ಭಾರತಕ್ಕೆ ಹೊಸ ಕೀರ್ತಿ ತಂದುಕೊಟ್ಟಿತ್ತು. ಮಂಗಳ ಶೋಧಕ ಉಪಗ್ರಹ ಮಂಗಳನ ಭೂ ವೈಶಿಷ್ಟ್ಯಗಳ ಬಗೆಗೂ ಚಿತ್ರ ರವಾನಿಸಿತ್ತು. ಅಲ್ಲದೇ ಧೂಳು ಮಿಶ್ರಿತ ವಾತಾವರಣದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು, ಮಂಗಳನ ಮೇಲಿನ ಸೂರ್ಯಾಸ್ತವನ್ನು ಸೆರೆ ಹಿಡಿದು ಕಳಿಸಿತ್ತು.[ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ಹೇಗಿರುತ್ತದೆ?] 5 ಸಾವಿರ ಕಿಲೋಮೀಟರ್ ದೂರದಿಂದ ಚಿತ್ರಗಳನ್ನು ತೆಗೆದ ಚಿತ್ರಗಳನ್ನು ಇಸ್ರೋ ತನ್ನ ವೆಬ್ ತಾಣದಲ್ಲಿನ ಬಿಡುಗಡೆ ಮಾಡಿದ್ದು ಮಂಗಳನ ಅಂಗಳದ ಬಗ್ಗೆ ನಮಗಿದ್ದ ತಿಳಿವಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.(ಚಿತ್ರಗಳು: ಇಸ್ರೋ)

ಮಂಗಳನ ಅಂಗಳದ ಕಣಿವೆಗಳು

ಮಂಗಳನ ಅಂಗಳದ ಕಣಿವೆಗಳು

5000 ಕಿಲೋಮೀಟರ್ ಎತ್ತರದಿಂದ ಮಂಗಳನ ಮೇಲಿನ ಕಣಿವೆಯ ಚಿತ್ರ ತೆಗೆದ ಮಂಗಳಯಾನ. ಹಿಂದೆ ತೆಗೆದು ಕಳುಹಿಸಿದ ಚಿತ್ರಗಳಿಗಿಂತ ಇದು ಭಿನ್ನವಾಗಿದ್ದು ಯಾವ ಬಗೆಯ ಬದಲಾವಣೆ ನಡೆಯುತ್ತಿದೆ ಎಂಬುದನ್ನು ಆಳವಾಗಿ ಅಧ್ಯಯನ ನಡೆಸಲು ನೆರವಾಗುತ್ತದೆ.

ಸ್ವಾತಂತ್ರ್ಯ ದಿನವೇ ಬಂದ ಚಿತ್ರಗಳು

ಸ್ವಾತಂತ್ರ್ಯ ದಿನವೇ ಬಂದ ಚಿತ್ರಗಳು

ಇಸ್ರೋ ಸ್ವಾತಂತ್ರ್ಯ ದಿನವೇ ಎಲ್ಲ ಚಿತ್ರಗಳನ್ನು ಬಿಡುಗಡೆ ಮಾಡಿ ದೇಶದ ನಾಗರಿಕರಿಗೆ ಕೊಡುಗೆ ನೀಡಿದೆ. 1857 ಕಿಲೋ ಮೀಟರ್ ಎತ್ತರದಿಂದ ಮಂಗಳನ ಮೇಲ್ಮೈ ನೋಡಿ.

 ಮಂಗಳನ ಮೇಲ್ಮೈ ನೋಡಿ

ಮಂಗಳನ ಮೇಲ್ಮೈ ನೋಡಿ

ಮಂಗಳನ ಮೇಲ್ಮೈ ಮೇಲಿನ ಬದಲಾವಣೆಗಳನ್ನು ಹತ್ತಿರದಿಂದ ನೋಡುವ ಅವಕಾಶ ಕಲ್ಪಿಸಿಕೊಟ್ಟ ಮಂಗಳಯಾನ. ಅತೀ ಕಡಿಮೆ ವೆಚ್ಚದಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿದ ದಾಖಲೆಯನ್ನು ಭಾರತ ಮಾಡಿತ್ತು.

ಮೇ ತಿಂಗಳಲ್ಲೇ ತೆಗೆದ ಚಿತ್ರ

ಮೇ ತಿಂಗಳಲ್ಲೇ ತೆಗೆದ ಚಿತ್ರ

ಮಂಗಳಯಾನದ ಕಲರ್ಸ್ ಕ್ಯಾಮರಾ ಚಿತ್ರಗಳನ್ನು ಕಳೆದ ಮೇ ತಿಂಗಳಿನಲ್ಲೇ ಸರೆ ಹಿಡಿದಿತ್ತು. ಮೇಲ್ಮೈ ಆಳವನ್ನು ಅಳತೆ ಮಾಡಲು ಈ ಚಿತ್ರ ನೆರವು ನೀಡುತ್ತದೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.

English summary
The 3-D images, released on the occasion of Independence Day, were captured with the Mars Colour Camera (MCC). We able to saw the mars surface picture in 3-D Effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X