ಕೋಲ್ಕತಾದ 'ಮಿಲಿಯನ್ ಡಾಲರ್ ಕಿಕ್' ಸ್ಪರ್ಧೆಗೆ ಉತ್ತಮ ಜನಸ್ಪಂದನೆ

Posted By:
Subscribe to Oneindia Kannada

ಕೋಲ್ಕತಾ, ಫೆಬ್ರವರಿ 3: ನಗರದ ಮೊಹಮ್ಮದೀಯನ್ ಸ್ಪೋರ್ಟಿಂಗ್ ಕ್ಲಬ್ ನ ಮೈದಾನದಲ್ಲಿ ಫುಟ್ಬಾಲ್ ಪ್ರತಿಭೆಗಳಿಗಾಗಿ ಆಯೋಜಿಸಲಾಗಿರುವ 'ಮಿಲಿಯನ್ ಡಾಲರ್ ಕಿಕ್' ಸ್ಪರ್ಧೆಯು ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ.

ಶುಕ್ರವಾರ ನಡೆದ ಕಾರ್ಯಕ್ರಮದ ಎರಡನೇ ದಿನದ ಸ್ಪರ್ಧೆಗಳಲ್ಲಿ ನೂರಾನು ಫುಟ್ಬಾಲಿಗರು ಭಾಗಿಯಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.

ಮೊದಲ ದಿನವಾದ ಶನಿವಾರವೂ ಸಾಕಷ್ಟು ಫುಟ್ಬಾಲ್ ಆಟಗಾರರು ತಮ್ಮ ಸಹಭಾಗಿತ್ವವನ್ನು ಪ್ರದರ್ಶಿಸಿದ್ದಲ್ಲದೆ, ಕೆಲವಾರು ಉತ್ತಮ ಹೊಡೆತಗಳನ್ನು ತೋರಿ ನೆರೆದಿದ್ದ ಜನರಿಂದ ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಭಾರತೀಯ ಹಿರಿಯರ ಫುಟ್ಬಾಲ್ ತಂಡದ ರಾಹುಲ್ ಬೆಕೆ, ಬ್ರೆಜಿಲ್ ನ ಫುಟ್ಬಾಲಿಗ ಎಡ್ವರ್ಡೊ ಫೆರೀರಾ ಅವರು, ಸ್ಪರ್ಧಾಳುಗಳಲ್ಲಿ ಉತ್ಸಾಹ ತುಂಬಿದರು.

ನೆರೆದಿದ್ದ ಜನರೂ ಈ ಇವರಿಬ್ಬರ ಆಟೋಗ್ರಾಫ್ ಪಡೆಯಲು, ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಅಂತೂ ಇಂತೂ ಈ ಸ್ಪರ್ಧೆಯು ಫುಟ್ಬಾಲಿಗರಿಗೆ, ಕ್ರೀಡೆಯ ಅಭಿಮಾನಿಗಳಿಗೆ ಖುಷಿ ಕೊಡುತ್ತಿರುವುದಂತೂ ಸುಳ್ಳಲ್ಲ.

ಸ್ಥಳೀಯ ಆಟಗಾರರ ಉತ್ಸಾಹ

ಸ್ಥಳೀಯ ಆಟಗಾರರ ಉತ್ಸಾಹ

ಕೋಲ್ಕತಾದ ಸ್ಥಳೀಯ ತಂಡವಾದ ಅಮೆರಿಕನ್ ಫುಟ್ಬಾಲ್ ಟೀಂನ ಆಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನ ಒಟ್ಟಿಗೇ ಗ್ರೂಪ್ ಫೋಟೋ ತೆಗೆದುಕೊಂಡ ಕ್ಷಣ.

ಬ್ರೆಜಿಲ್ ಪ್ರತಿಭೆಯಿಂದ ಸಹಾಯ

ಬ್ರೆಜಿಲ್ ಪ್ರತಿಭೆಯಿಂದ ಸಹಾಯ

ಬ್ರೆಜಿಲ್ ಫುಟ್ಬಾಲಿಗ ಎಡ್ವರ್ಡೊ ಫೆರೇರಿರಾ ಅವರು ಮೊಹಮ್ಮದೀಯನ್ ಸ್ಪೋರ್ಟಿಂಗ್ ಕ್ಲಬ್
ಆಟಗಾರನೊಬ್ಬನಿಗೆ ಆಟದ ತಂತ್ರಗಾರಿಕೆ ಹೇಳಿಕೊಡುತ್ತಿರುವುದು.

ಫೋಟೋಕ್ಕಾಗಿ ಜಂಟಿ ಪೋಸು

ಫೋಟೋಕ್ಕಾಗಿ ಜಂಟಿ ಪೋಸು

ಭಾರತದ ರಾಷ್ಟ್ರೀಯ ತಂಡದ ಫುಟ್ಬಾಲಿಗ ರಾಹುಲ್ ಭೆಕೆ ಹಾಗೂ ಬ್ರೆಜಿಲ್ ನ ಎಡ್ವರ್ಡೊ
ಫೆರೇರಿಯಾ ಜಂಡಿಯಾಗಿ ಫೋಟೋಕ್ಕೆ ಪೋಸು ನೀಡಿದ್ದು ಹೀಗೆ.

ಸವಾಲು ಗೆಲ್ಲಲು ಕಿಕ್

ಸವಾಲು ಗೆಲ್ಲಲು ಕಿಕ್

ಮೊಹಮ್ಮದೀಯನ್ ಸ್ಪೋರ್ಟಿಂಗ್ ಕ್ಲಬ್ ಕ್ರೀಡಾಳುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕ್ಷಣ.

ಅಹ್ಮದಾಬಾದ್, ದೆಹಲಿಯ ಪ್ರತಿಭೆಗಳು

ಅಹ್ಮದಾಬಾದ್, ದೆಹಲಿಯ ಪ್ರತಿಭೆಗಳು

ಮಿಲಿಯನ್ ಡಾಲರ್ ಕಿಕ್ ಸ್ಪರ್ಧೆಯ ಅಹ್ಮದಾಬಾದ್ ಹಾಗೂ ದೆಹಲಿ ಆವೃತ್ತಿಯ ವಿಜೇತರಾದ
ಗ್ಯಾನೇಂದ್ರ ಸಿಂಗ್ (ಎಡ), ಅರ್ಷದ್ ಖಾನ್ ಅವರು ಕೋಲ್ಕತಾದ ಮೊಹಮ್ಮದೀಯನ್ ಸ್ಪೋರ್ಟಿಂಗ್ ಕ್ಲಬ್ ಮುಂಭಾಗ ಫೋಟೋಕ್ಕೆ ಪೋಸು ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Million Dollar Kick witnessed some powerful kicks during the first day of Kolkata Leg. The participants were excited to meet the Indian Footballer Rahul Bheke and Brazilian player Eduardo Ferreira who were seen at the ground encouraging them all.
Please Wait while comments are loading...