ಹೆದ್ದಾರಿಗಳಲ್ಲಿ ಆತಂಕ ಸೃಷ್ಟಿ- ಉಗ್ರರ ಹೊಸ ಸಂಚು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13: ಭಾರತದಲ್ಲಿರುವ ರಾಷ್ಟ್ರೀಯ ಸ್ಮಾರಕಗಳ ಧ್ವಂಸ ಹಾಗೂ ರಾಷ್ಟೀಯ ಹೆದ್ದಾರಿಗಳು ಈಗ ಉಗ್ರದ ಹೊಸ ಟಾರ್ಗೆಟ್ ಗಳಾಗಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ, ಗುಜರಾತಿನಿಂದ ಅರುಣಾಚಲ ಪ್ರದೇಶದ ತನಕದ ಹೆದ್ದಾರಿಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಯೋಜನೆ ಹಾಕಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮೂಲಕ ಭಾರತಕ್ಕೆ ನುಸುಳಲು ಈ ಉಗ್ರರ ಗುಂಪು ಯತ್ನಿಸುತ್ತಿದೆ. ಆದರೆ, ಸತತ ಪ್ರಯತ್ನದಿಂದ ವಿಫಲರಾಗಿದ್ದು, ಈಗ ಈಶಾನ್ಯ ಭಾರತದ ಮೂಲಕ ಪ್ರವೇಶಿಸಲು ಯತ್ನಿಸುತ್ತಿರುವ ವಿಷಯ ಬಹಿರಂಗವಾಗಿದೆ.

ಹೆದ್ದಾರಿಗಳಲ್ಲಿ ಸುರಕ್ಷತೆ: ಭಾರತದ ಅನೇಕ ಹೆದ್ದಾರಿಗಳಲ್ಲಿ ಸುರಕ್ಷತೆ ಅಲ್ಪ ಪ್ರಮಾಣದಲ್ಲಿರುತ್ತದೆ. ಅಲ್ಲಲ್ಲಿ ಚೆಕ್ ಪೋಸ್ಟ್ ಗಳು ಇರುವುದು ಬಿಟ್ಟರೆ ಯಾವುದೇ ಭದ್ರತೆ ಇರುವುದಿಲ್ಲ. ಜಮ್ಮು ಮತ್ತು ಕಾಶ್ಮೀರ ಮಾದರಿಯಲ್ಲಿ ಕಾರ್ಯಾಚಾರಣೆ ನಡೆಸಲು ಹೊಂಚು ಹಾಕುತ್ತಿದ್ದಾರೆ.

Militants may wreak havoc on the highways, warns Intelligence Bureau,

ಸರ್ಜಿಕಲ್ ಸ್ಟ್ರೈಕ್ ನಂತರದ ಬೆಳವಣಿಗೆ: ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರಾಂತ್ಯದಲ್ಲಿ ನಡೆದ ಕಾರ್ಯಾಚರಣೆ ನಂತರ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಸರ್ಜಿಕಲ್ ಸ್ಟ್ರೈಕ್ ಯಶಸ್ವಿಯಾಗಿದ್ದು ಉಗ್ರರನ್ನು ಕಂಗಾಲಾಗುವಂತೆ ಮಾಡಿದೆ. ಇದಕ್ಕೆ ಪ್ರತಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಹಲವು ಬಾರಿ ಎಚ್ಚರಿಕೆ ನೀಡಿದೆ.

ಸ್ಮಾರಕಗಳಿಗೆ ರಕ್ಷಣೆ: ಈಗಾಗಲೇ ರಾಷ್ಟ್ರೀಯ ಸ್ಮಾರಕಗಳ ಬಳಿ ಸೆಲ್ಫಿ ತೆಗೆಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ. 2000 ಇಸವಿಯಲ್ಲಿ ಲಷ್ಕರ್ ಇ ತೋಯ್ಬಾ ಉಗ್ರರು ಕೆಂಪು ಕೋಟೆ ಮೇಲೆ ದಾಳಿ ನಡೆಸಲು ಹೊಂಚು ಹಾಕಿ ವಿಫಲರಾಗಿದ್ದರು. ಆದರೆ ಇಬ್ಬರು ಯೋಧರು ಹುತಾತ್ಮರಾದರೆ, ಒಬ್ಬ ನಾಗರಿಕ ಮೃತ ಪಟ್ಟಿದ್ದ ಘಟನೆ ನಡೆದಿತ್ತು.

ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆ ಬಳಿ ತ್ರಿವರ್ಣ ಧ್ವಜವನ್ನು ಪ್ರಧಾನಿ ಹಾರಿಸುತ್ತಾರೆ. ಇದು ಭಾರತೀಯರ ಹೆಮ್ಮೆಯ ವಿಷಯ. ಇದಕ್ಕೆ ಸರಿಯಾದ ಪೆಟ್ಟು ನೀಡಬೇಕು ಎಂಬುದು ಉಗ್ರರ ಉದ್ದೇಶ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Monuments and important installations along the highways of the country will be the target of terrorists, the intelligence bureau has warned. Terrorists will try and launch attacks on installations along the highway, the report also warns.
Please Wait while comments are loading...