ಅಮರನಾಥ ಯಾತ್ರೆಗೆ ಉಗ್ರರ ದಾಳಿ ಭೀತಿ: ಬಿಎಸ್ ಎಫ್
ಶ್ರೀನಗರ, ಜೂನ್ 05: ಜುಲೈ 2ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗಡಿ ಭದ್ರತಾ ಪಡೆಯ ಮುಖ್ಯಸ್ಥ ಕೆಕೆ ಶರ್ಮ ಅವರು ತಿಳಿಸಿದ್ದಾರೆ. ಆದರೆ, ಯಾತ್ರಾರ್ಥಿಗಳು ಈ ಬಗ್ಗೆ ಚಿಂತಿಸಬೇಕಾಗಿಲ್ಲ, ಸೂಕ್ತ ಭದ್ರತೆ ಕಲ್ಪಿಸಲಾಗುತ್ತದೆ ಎಂದಿದ್ದಾರೆ.
ಜಮ್ಮು-ಕಾಶ್ಮೀರದ ಈ ಪವಿತ್ರ ಯಾತ್ರಾಸ್ಥಳ ಹಾಗೂ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕ ಸಂಘಟನೆಗಳು ಸಂಚು ಹಾಕಿಕೊಂಡಿವೆ ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಈ ನಿಟ್ಟಿನಲ್ಲಿ ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಸಭೆ ಸೇರಿ ಸೂಕ್ತ ಭದ್ರತೆ ಒದಗಿಸಲು ಗಮನಹರಿಸಿದ್ದಾರೆ.
ಶುಕ್ರವಾರದಂದು ಉಗ್ರ ದಾಳಿಗೆ ಸಿಲುಕಿ ಮೂವರು ಬಿಎಸ್ಎಫ್ ಯೋಧರು ಮೃತಪಟ್ಟಿದ್ದರು. ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿದ ನಂತರ ಮಾತನಾಡಿದ ಬಿಎಸ್ಎಫ್ ಡೈರೆಕ್ಟರ್ ಜನರಲ್ ಕೆ.ಕೆ. ಶರ್ಮ ಅವರು, ಶುಕ್ರವಾರ ನಡೆದ ದಾಳಿ ಅನಿರೀಕ್ಷಿತವಾದದ್ದು, ಆದರೆ, ಅಮರನಾಥ ಯಾತ್ರೆಯ ಸಂದರ್ಭ ಭಕ್ತರಿಗೆ ಸೂಕ್ತ ಭದ್ರತೆ ನೀಡಲು ಬಿಎಸ್ಎಫ್ ಸನ್ನದ್ಧವಾಗಿದೆ ಎಂದಿದ್ದಾರೆ.












Click it and Unblock the Notifications