• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆ

|

#MeTooIndia ಎಂಬ ಮುಚ್ಚಿಟ್ಟಿದ್ದ ಕತ್ತಲ ಕಾಮನೆಯ ಬೆತ್ತಲೆ ಕಥೆಗಳನ್ನು ಬಿಚ್ಚಿಡುವ ಅಭಿಯಾನ ಹಲವಾರು ಖ್ಯಾತ ನಟರ, ಮೀಡಿಯಾ ದಿಗ್ಗಜರ ನಿದ್ದೆಯನ್ನು ಹಾಳು ಮಾಡಿದೆ. ಕಡೆಗಾದರೂ ಇದೆಲ್ಲಾ ಹೊರಬರುತ್ತಿದೆಯಲ್ಲ ಎಂಬ ನಿಟ್ಟುಸಿರೂ ಅದರಲ್ಲಿ ತುಂಬಿಕೊಂಡಿದೆ.

ಬಣ್ಣದ ಲೋಕದ ಮಿನುಗುವ ತಾರೆಯರು ನಶೆಯೇರಿದ ನಂತರ ಮಾಡಿರುವ ಘನಂದಾರಿ ಕೆಲಸ ಒಂದೊಂದಾಗಿ ಬರಿದಾಗುತ್ತಿದ್ದು, ಬದುಕಿನ ಸಂಧ್ಯಾಕಾಲದಲ್ಲಿ ವಿರಮಿಸಬೇಕಾಗಿದ್ದ ತಾರೆಯರ ಬಣ್ಣವೆಲ್ಲ ಕಳಚುತ್ತಿದೆ. ಆರಾಧನೆಗೊಳಗಾಗಿದ್ದ ಅಭಿಮಾನಿಗಳಿಗ ಮುಂದೆಯೇ ಬರಿದು ಬೆತ್ತಲಾಗುತ್ತಿದ್ದಾರೆ. ಈ ಆರೋಪಗಳಲ್ಲಿ ಸತ್ಯಾಂಶ ಎಷ್ಟಿದೆ ಎಂಬುದು ಕಾಲವೇ ನಿರ್ಧರಿಸಲಿದೆ.

'ಸಂಸ್ಕಾರಿ'ಯಿಂದ ಅತ್ಯಾಚಾರ! ಸ್ಫೋಟಕ ಸುದ್ದಿ ಹೊರಹಾಕಿದ ವಿನ್ತಾ ನಂದಾ

1956ರ ಜುಲೈ 10ರಂದು ಬಿಹಾರದಲ್ಲಿ ಜನ್ಮತಾಳಿದ, 'ಸಂಸ್ಕಾರಿ' ಎಂದೇ ಖ್ಯಾತರಾದ, ತಮ್ಮ ಅದ್ಭುತ ನಟನೆ, 'ಒಳ್ಳೆಯ ನಡತೆ'ಯಿಂದಲೇ ಟಿವಿ ನೋಡುಗರ ಮನ ಗೆದ್ದಿದ್ದ 62ರ ಹರೆಯದ ಅಲೋಕ್ ನಾಥ್ ಅವರೀಗ ಮುಖ ಮುಚ್ಚಿಕೊಂಡು ಓಡಾಡುವಂಥ ಸಂದರ್ಭ ಎದುರಾಗಿದೆ. ಒಬ್ಬಿಬ್ಬರಲ್ಲಿ ಅರ್ಧ ಡಜನ್ ಗಟ್ಟಲೆ ಮಹಿಳಾ ಮಣಿಗಳು ಅಲೋಕ್ ನಾಥ್ ಅವರ ಅಸಹ್ಯಕರ ರಂಗ್ ರಂಗೀನ್ ಕಥೆಗಳನ್ನು ಮುಚ್ಚುಮರೆಯಿಲ್ಲದೆ ಬಿಚ್ಚಿಡುತ್ತಿದ್ದಾರೆ.

ವಿನ್ತಾ ನಂದಾ ಬೆಂಬಲಕ್ಕೆ ಬಂದ ಚಿತ್ರರಂಗ

ವಿನ್ತಾ ನಂದಾ ಬೆಂಬಲಕ್ಕೆ ಬಂದ ಚಿತ್ರರಂಗ

ಹಿಂದಿ ಚಿತ್ರರಂಗದಲ್ಲಿ ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ವಿನ್ತಾ ನಂದಾ ಎಂಬುವವರು, ಅಲೋಕ್ ನಾಥ್ ಅವರು ತಮ್ಮ ಮೇಲೆ ಯಾವ ರೀತಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬ ಕಥೆಯನ್ನು ಫೇಸ್ ಬುಕ್ಕಿನಲ್ಲಿ ಸವಿವರವಾಗಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ, 'ಅವರ ಮೇಲೆ ಅತ್ಯಾಚಾರ ನಡೆದಿರಬಹುದು, ನಾನದನ್ನು ಅಲ್ಲಗಳೆಯುವುದಿಲ್ಲ, ಆದರೆ ಅತ್ಯಾಚಾರ ಮಾಡಿದ್ದು ನಾನಲ್ಲ' ಎಂದು ಸಂಸ್ಕಾರಿ ಲೋಕ ನಾಥ್ ಅವರು ಕೈತೊಳೆದುಕೊಂಡಿದ್ದರು. ವಿನ್ತಾ ನಂದಾ ಅವರ ಬೆಂಬಲಕ್ಕೆ ಹಲವಾರು ಕಲಾವಿದರು ಬರುತ್ತಿದ್ದಾರೆ. ಸಿನೆಮಾ ಮತ್ತು ಟಿವಿ ಅಸೋಸಿಯೇಶನ್ ನ ಸೆಕ್ರೆಟರಿ ಆಗಿರುವ ಸುಶಾಂತ್ ಸಿಂಗ್ ಅವರು ಅಲೋಕ್ ನಾಥ್ ಅವರಿಗೆ ನೋಟೀಸ್ ನೀಡುವುದಾಗಿ ವಾಗ್ದಾನ ನೀಡಿದ್ದಾರೆ.

ಮತ್ತಿಬ್ಬರಿಂದ ಅಲೋಕ್ ನಾಥ್ ವಿರುದ್ಧ ಆರೋಪ

ಮತ್ತಿಬ್ಬರಿಂದ ಅಲೋಕ್ ನಾಥ್ ವಿರುದ್ಧ ಆರೋಪ

ಮುಖದ ಮೇಲೆ ಅಡರಿದ್ದ ಬೆರವನ್ನು ಜುಬ್ಬಾದಲ್ಲಿ ಒರೆಸಿಕೊಂಡು ಮತ್ತೆ ಮೇಕಪ್ ಹಚ್ಚಿಕೊಳ್ಳುವ ಮೊದಲೇ ಇನ್ನಿಬ್ಬರು, ಅಲೋಕನಾಥ್ ಮೇಲೆ ಎಗರಿ ಬಿದ್ದಿದ್ದಾರೆ. ಒಬ್ಬರು ಹಿಂದಿ ಚಿತ್ರರಂಗದಲ್ಲಿ 'ಸ್ಯಾಂಡಿ' ಎಂದೇ ಕರೆಯಿಸಿಕೊಳ್ಳುವ, 49ರ ಹರೆಯದ ಮಹಾರಾಷ್ಟ್ರದ ಚಿತ್ರನಟಿ ಸಂಧ್ಯಾ ಮೃದುಲ್. ಮತ್ತೊಬ್ಬರು, ಹಮ್ ಸಾಥ್ ಸಾಥ್ ಹೈ ಚಿತ್ರದ ಸಮಯದಲ್ಲಿ ನಡೆದ ಘಟನೆಯನ್ನು, ಹೆಸರು ಹೇಳಲಿಚ್ಛಿಸದ ನಟಿಯೊಬ್ಬರು ಅಲೋಕ್ ನಾಥ್ ಅವರ 'ನಗ್ನ ಸತ್ಯ'ವನ್ನು ಬಿಚ್ಚಿಟ್ಟಿದ್ದಾರೆ. ಈ ಎರಡು ಘಟನೆಗಳಿಗೆ ಅಲೋಕ್ ನಾಥ್ ಅವರು ಏನು ಉತ್ತರ ನೀಡಲಿದ್ದಾರೆ? ಅದಕ್ಕೂ ಮುನ್ನ ಆ ಎರಡು ಘಟನೆಗಳೇನು ಎಂಬುದನ್ನು ಮುಂದೆ ಓದಿರಿ.

ಅತ್ಯಾಚಾರ ಆಗಿರಬಹುದು, ಆದರೆ ನನ್ನಿಂದಲ್ಲ: ಅಲೋಕ್ ನಾಥ್

ಸಂಧ್ಯಾ ಮೃದುಲ್ ಅವರ ಕಥೆ ಕೇಳಿ

ಸಂಧ್ಯಾ ಮೃದುಲ್ ಅವರ ಕಥೆ ಕೇಳಿ

ನನ್ನ ನಟನಾ ವೃತ್ತಿಯ ಆರಂಭದಲ್ಲಿ ಟೆಲಿಫಿಲ್ಮ್ ಗಾಗಿ ಕೊಡೈಕೆನಾಲ್ ನಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ನನ್ನ ತಂದೆ ಪಾತ್ರದಲ್ಲಿ ಅಲೋಕ್ ನಾಥ್ ಮತ್ತು ತಾಯಿಯ ಪಾತ್ರದಲ್ಲಿ ರೀಮಾ ಲಾಗು ಅವರು ಪಾತ್ರವಹಿಸಿದ್ದರು. ನನ್ನ ನಟನೆ ನೋಡಿ, ಹಾಡಿ ಹೊಗಳಿದ್ದೇ ಹೊಗಳಿದ್ದು. ನಾನು ನೆಲದ ಮೇಲೆಯೇ ಇರಲಿಲ್ಲ. ಅಂಥ ಮಹಾನ್ ನಟರಿಂದ ಹೊಗಳಿಸಿಕೊಳ್ಳುವುದು ಸುಮ್ಮನೆಯಾ? ಒಂದು ಸಂಜೆ ಬೇಗನೆ ಶೂಟಿಂಗ್ ಮುಗಿದು ಪ್ಯಾಕಪ್ ಆದ ಮೇಲೆ, ಕಂಠಪೂರ್ತಿ ಕುಡಿದಿದ್ದ ಅಲೋಕ್, ತಮ್ಮ ಹತ್ತಿರ ಕೂಡೆಂದು ದುಂಬಾಲು ಬಿದ್ದಿದ್ದರು. ಇದ್ಯಾಕೋ ಸರಿಯಿಲ್ಲ ಎಂದು ನನ್ನ ಸ್ನೇಹಿತೆ ನನ್ನನ್ನು ಆಚೆ ಕರೆದುಕೊಂಡು ಹೋದರು. ಊಟವೂ ಮಾಡದೆ ನಾನು ರೂಂನಲ್ಲಿದ್ದಾಗ ಬಾಗಿಲು ಬಡಿದ ಅಲೋಕ್ ಒಳನುಗ್ಗಲು ಯತ್ನಿಸಿದರು. ಬಾಗಿಲು ಮುಚ್ಚಲು ಯತ್ನಿಸಿ, ಆಗದೆ ಬಾಗಿಲು ತೆರೆದಾಗ ಅಲೋಕ್ ಧಪ್ಪನೆ ನೆಲದ ಮೇಲೆ ಬಿದ್ದರು. ಬಾತ್ ರೂಂ ಬಳಿ ಬಿದ್ದ ನನ್ನ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದರು. ಹೇಗೋ ಪರಾರಿಯಾದೆ. ಆತ ನಂತರ ನನ್ನ ಕ್ಷಮೆ ಕೇಳಿದರೂ ಮುಂಬೈಗೆ ಹೋದ ಮೇಲೆ ನಾನು ದುರಹಂಕಾರಿ ಇತ್ಯಾದಿಯಾಗಿ ಎಲ್ಲರ ಬಳಿ ಹೇಳಿ ಮಾನ ತೆಗೆದಿದ್ದರು.

ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ

ನನ್ನ ಮುಂದೆಯೇ ನಗ್ನರಾದ ಅಲೋಕ್ ನಾಥ್

ನನ್ನ ಮುಂದೆಯೇ ನಗ್ನರಾದ ಅಲೋಕ್ ನಾಥ್

ಸೂರಜ್ ಬರ್ಜಾತ್ಯಾ ಅವರ ನಿರ್ದೇಶನದ ಹಮ್ ಸಾಥ್ ಸಾಥ್ ಹೈ ಸಿನೆಮಾ ಶೂಟಿಂಗ್ ನಡೆಯುತ್ತಿದ್ದಾಗ ನಡೆದ ಅಸಹ್ಯಕರ ಘಟನೆಯೊಂದನ್ನು ಹೆಸರು ಹೇಳಲಿಚ್ಛಿಸದ ನಟಿಯೊಬ್ಬರು ಸಂದರ್ಶನವೊಂದರಲ್ಲಿ ಅನಾವರಣ ಮಾಡಿದ್ದಾರೆ. ರಾತ್ರಿ ದೃಶ್ಯದ ಶೂಟಿಂಗ್ ನಡೆಯುತ್ತಿರಬೇಕಾದರೆ ಅಲೋಕ್ ಬಟ್ಟೆ ಬದಲಾಯಿಸಬೇಕಾಗಿತ್ತು. ಆಗ ಮಹಿಳಾ ಸಿಬ್ಬಂದಿ ಅಲೋಕ್ ಗೆ ಬಟ್ಟೆ ನೀಡಿದಾಗ, ಆಕೆಯೆದುರೇ ಅಲೋಕ್ ಧರಿಸಿದ ಬಟ್ಟೆ ಕಳಿಸಿ ನಗ್ನರಾದರು. ಅವರು ಹೊರಗೆ ಓಡಿ ಹೋಗಲು ಯತ್ನಿಸಿದಾಗ ಅವರ ಕೈಹಿಡಿದ ಅಲೋಕ್ ಮೈಯನ್ನೆಲ್ಲ ಮುಟ್ಟಲು ಬಂದರು. ಆಗ ಹೇಗೆ ಅವರ ಹಿಡಿತದಿಂದ ಆ ಮಹಿಳಾ ಸಿಬ್ಬಂದಿ ಪಾರಾದರಂತೆ. ಇದನ್ನು ಸೂರಜ್ ಅವರಿಗೆ ಹೇಳಲು ಧೈರ್ಯ ಬರಲಿಲ್ಲವಂತೆ. ಆದರೆ ವಿನ್ತಾ ನಂದಾ ಅವರು ಅಲೋಕ್ ಅವರ ಅಸಹ್ಯಕರ ಕಥೆ ಹೇಳಿದ ನಂತರ ಧೈರ್ಯ ಒಗ್ಗೂಡಿಸಿಕೊಂಡು ಈಗ ಹೇಳಿದ್ದಾರಂತೆ.

ಲೈಂಗಿಕ ಕಿರುಕುಳ ಆರೋಪ : ರಾಷ್ಟ್ರೀಯ ದಿನಪತ್ರಿಕೆ ಸಂಪಾದಕ ರಾಜೀನಾಮೆ

ಆರೋಪಗಳಿಗೆ ಅಲೋಕ್ ಪತ್ನಿಯ ಪ್ರತಿಕ್ರಿಯೆ ಹೀಗಿದೆ

ಆರೋಪಗಳಿಗೆ ಅಲೋಕ್ ಪತ್ನಿಯ ಪ್ರತಿಕ್ರಿಯೆ ಹೀಗಿದೆ

"ನಾನು ಈ ಬಗ್ಗೆ ಏನನ್ನೂ ಹೇಳುವುದಿಲ್ಲ ಅಥವಾ ಏನನ್ನೂ ಮಾಡಲಾಗುವುದಿಲ್ಲ" ಇದು ಅಲೋಕ್ ನಾಥ್ ಅವರ ಹೆಂಡತಿ ಆಶು ಸಿಂಗ್ ಅವರು ಪ್ರತಿಕ್ರಿಯಿಸಿರುವ ರೀತಿ. ಅಂದ ಹಾಗೆ, ಅಲೋಕ್ ಅವರಿಂದ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿರುವ ವಿನ್ತಾ ನಂದಾ ಮತ್ತು ಅಲೋಕ್ ಅವರ ಹೆಂಡತಿ ಆಶು ಸಿಂಗ್ ಅವರು ಗೆಳತಿಯರು. ಈ ಗೆಳೆತನದಿಂದಲೇ ಅಲೋಕ್ ಮನೆಗೆ ವಿನ್ತಾ ಆಗಾಗ ಹೋಗುತ್ತಿದ್ದರು. ಒಂದು ಬಾರಿ ಪಾರ್ಟಿಗೆ ಹೋದಾಗಲೇ ವಿನ್ತಾ ಮೇಲೆ ಅಲೋಕ್ ನಾಥ್ ಅವರು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಬಂದಿರುವುದು. ಆಗ ವಿನ್ತಾ ಅವರೂ ಕುಡಿದಿದ್ದರು, ಅಲೋಕ್ ಅವರೂ ಈ ಲೋಕದಲ್ಲೇ ಇರಲಿಲ್ಲ.

English summary
#MeTooIndia : Two more artists have made allegations sexual harassment against Bollywood's 'Sanskari' actor Alok Nath. In one incident Alok tried to rape Sandhya Mridul, in another one he stripped in front of an woman crew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X