ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Meghalaya Assembly Elections 2023: ಮೇಘಾಲಯದಲ್ಲಿ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ!

ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

|
Google Oneindia Kannada News

ಶಿಲ್ಲಾಂಗ್ ಫೆಬ್ರವರಿ 2: ಮುಂಬರುವ ಮೇಘಾಲಯ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಸಂಪೂರ್ಣ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಪ್ರಕಟಿಸಿದೆ. ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯದ ಎಲ್ಲಾ 60 ಸ್ಥಾನಗಳಿಗೆ ಕೇಸರಿ ಪಕ್ಷ ಸ್ಪರ್ಧಿಸುತ್ತಿದೆ.

ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಿತುರಾಜ್ ಸಿನ್ಹಾ ಮಾತನಾಡಿ, ಮೇಘಾಲಯವನ್ನು ಸಬಲೀಕರಣಗೊಳಿಸಿ ಎಂಬ ಅಡಿಬರಹದೊಂದಿಗೆ ರಾಜ್ಯದ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸಲು ವರಿಷ್ಠರು ನಿರ್ಧರಿಸಿದ್ದಾರೆ ಎಂದರು. ರಾಜ್ಯ ರಾಜಕೀಯದಲ್ಲಿ ದಶಕಗಳಿಂದ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ ಮತ್ತು ಇತರ ಈಶಾನ್ಯ ರಾಜ್ಯಗಳು ಸೇರಿದಂತೆ ಇಡೀ ಭಾರತಕ್ಕೆ ಹೋಲಿಸಿದರೆ ಬಹಳ ಕಡಿಮೆ ಅಭಿವೃದ್ಧಿಯನ್ನು ಕಂಡಿದೆ ಎಂದು ಸಿನ್ಹಾ ಉಲ್ಲೇಖಿಸಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ನಿಧಾನಗತಿಯ ಅಭಿವೃದ್ಧಿಯಿಂದ ನಾಗರಿಕರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ ಕಳಪೆ ಸಂಪರ್ಕ ವಿದ್ಯುತ್ ಕಡಿತ ಮತ್ತು ಕಳಪೆ ಆರೋಗ್ಯ ಸೌಲಭ್ಯಗಳಿವೆ ಎಂದ ಅವರು ಮೇಘಾಲಯವನ್ನು ಬಲಿಷ್ಠಗೊಳಿಸಲು ಬಿಜೆಪಿಯೊಂದೇ ಮಾರ್ಗ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬಿಜೆಪಿ ಮೇಘಾಲಯ ಮುಖ್ಯಸ್ಥ ಅರ್ನೆಸ್ಟ್ ಮಾವ್ರಿ ಅವರು 2018ರ ಚುನಾವಣೆಗಿಂತ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಜ್ಜಾಗಿದೆ ಎಂದು ಹೇಳಿದ್ದಾರೆ. ಪಟ್ಟಿಯಲ್ಲಿ ಪಶ್ಚಿಮ ಶಿಲ್ಲಾಂಗ್‌ನಿಂದ ಸ್ಪರ್ಧಿಸಲಿರುವ ಅರ್ನೆಸ್ಟ್ ಮಾವ್ರಿ, ಬಾಗ್ಮಾರಾದಿಂದ ಸ್ಯಾಮ್ಯುಯೆಲ್ ಸಂಗ್ಮಾ, ಪೂರ್ವ ಶಿಲ್ಲಾಂಗ್‌ನಿಂದ ವಾಂಕಿಟ್‌ಬಾಕ್ ಪೋಷ್ನಾ ಮತ್ತು ಇತರ ಪ್ರಮುಖರ ಹೆಸರುಗಳಿವೆ.

ಸಂಪೂರ್ಣ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ:

ಫೆಬ್ರವರಿ 27ಕ್ಕೆ ಮತದಾನ, ಮಾರ್ಚ್ 2ಕ್ಕೆ ಫಲಿತಾಂಶ

ಫೆಬ್ರವರಿ 27ಕ್ಕೆ ಮತದಾನ, ಮಾರ್ಚ್ 2ಕ್ಕೆ ಫಲಿತಾಂಶ

ಮೇಘಾಲಯ ವಿಧಾನಸಭಾ ಚುನಾವಣೆಯ ಅವಧಿ ಮಾರ್ಚ್ 15 ರಂದು ಕೊನೆಗೊಳ್ಳಲಿದೆ. ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಜನವರಿ 18ರಂದು ಪ್ರಕಟಿಸಿತು. ರಾಜ್ಯದ ಒಟ್ಟು 60 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 27 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಮಾರ್ಚ್ 2 ರಂದು ಪ್ರಕಟವಾಗಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಚುನಾವಣಾ ಸಿದ್ಧತೆಯನ್ನು ಚುನಾವಣಾ ಆಯೋಗ ಪೂರ್ಣಗೊಳಿಸಿದೆ.

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ ಮೇಘಾಲಯದಲ್ಲಿ 3,482 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದೇ ವೇಳೆ ಶೇ.50ರಷ್ಟು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ಸೂಕ್ಷ್ಮ ಹಾಗೂ ದುರ್ಬಲ ಮತಗಟ್ಟೆಗಳಿಗೆ ಬಿಗಿ ಭದ್ರತೆ ಏರ್ಪಡಿಸಲಾಗುವುದು.

ಎರಡರಲ್ಲಿ ಬಿಜೆಪಿ ಒಂದರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ

ಎರಡರಲ್ಲಿ ಬಿಜೆಪಿ ಒಂದರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ

ಜೊತೆಗೆ ಮಧ್ಯಪ್ರದೇಶ, ಕರ್ನಾಟಕ ಮತ್ತು ಛತ್ತೀಸ್‌ಗಢದ ಚುನಾವಣಾ ದಿನಾಂಕಗಳನ್ನು ಮಾರ್ಚ್‌ನಲ್ಲಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ರಾಜ್ಯಗಳ ಚುನಾವಣೆಗೂ ಆಯೋಗದಿಂದ ಸಿದ್ಧತೆ ಪೂರ್ಣಗೊಂಡಿದೆ. ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದು, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರಕಾರವಿದೆ.

ಎನ್‌ಪಿಪಿ ನೇತೃತ್ವದ ಸರ್ಕಾರ

ಎನ್‌ಪಿಪಿ ನೇತೃತ್ವದ ಸರ್ಕಾರ

ಹಿಂದಿನ ವಿಧಾನಸಭಾ ಚುನಾವಣೆ ಫೆಬ್ರವರಿ 2018 ರಲ್ಲಿ ನಡೆದಿದ್ದವು. ಕಳೆದ ಬಾರಿ ಮೇಘಾಲಯದಲ್ಲಿ ನಡೆದ ಚುನಾವಣೆಯ ನಂತರ, ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ನೇತೃತ್ವದ ಒಕ್ಕೂಟವು ರಾಜ್ಯ ಸರ್ಕಾರವನ್ನು ರಚಿಸಿತು. ಕಾನ್ರಾಡ್ ಕೊಂಗಲ್ ಸಂಗ್ಮಾ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಎನ್‌ಪಿಪಿ ಈಶಾನ್ಯದಿಂದ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಹೊಂದಿರುವ ಏಕೈಕ ಪಕ್ಷವಾಗಿದೆ. ಇದುವರೆಗೆ ಮೇಘಾಲಯದಲ್ಲಿ ಸುಮಾರು 14 ಶಾಸಕರು ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜೀನಾಮೆ ನೀಡಿದ್ದಾರೆ.

English summary
Bharatiya Janata Party today announced its complete list of candidates for the upcoming Meghalaya Assembly elections. The saffron party is contesting all the 60 seats in the state which will be held on February 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X