ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟದ ಶ್ರೀಮಂತರು: ಜೇಟ್ಲಿ ಮೀರಿಸಿದ ಚೌಧರಿ

By Mahesh
|
Google Oneindia Kannada News

ನವದೆಹಲಿ, ನ.11: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮೊದಲ ಸಚಿವ ಸಂಪುಟ ಇತ್ತೀಚೆಗೆ ವಿಸ್ತರಣೆಯಾಗಿದೆ. ಈಗ ಪ್ರಧಾನಿ ಮೋದಿ ಸೇರಿದಂತೆ ಸಂಪುಟದ ಸಚಿವರ ವಿಶ್ಲೇಷಣೆ ಮಾಡುವ ಸಮಯ. ಪ್ರಜಾಪ್ರಭುತ್ವ ಸುಧಾರಣೆಗಾಗಿರುವ ಸಂಘಟನೆ (ಎಡಿಆರ್) ಪ್ರಧಾನಿ ಮೋದಿ ಸಹಿತ 66 ಸಚಿವರಲ್ಲಿ 64 ಮಂದಿಯ ಸ್ವಘೋಷಿತ ಅಫಿಡವಿಟ್ ಗಳ ವಿಶ್ಲೇಷಣೆ ನಡೆಸಿದೆ.

ನಾಷ್ಯನಲ್ ಎಲೆಕ್ಷನ್ ವಾಚ್(NEW) ಹಾಗೂ ಎಡಿಆರ್ ಸಂಸ್ಥೆ ಪ್ರಕಟಿಸಿರುವ ಈ ಅಂಕಿ ಅಂಶಗಳಲ್ಲಿ ಮೋದಿ ಸಂಪುಟದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಸಚಿವರು, ಕೋಟ್ಯಧಿಪತಿಗಳು, ಆಸ್ತಿ ಹೋಲಿಕೆ, ಶೈಕ್ಷಣಿಕ ಹಿನ್ನೆಲೆ ವಿವರಗಳು ಸಾರ್ವಜನಿಕರ ಮುಂದೆ ಬಯಲಾಗಿದೆ. [ಮೋದಿ ಸಂಪುಟ: ಯಾರಿಗೆ ಯಾವ ಖಾತೆ?]

ಸದ್ಯಕ್ಕೆ ಮೋದಿ ಸಂಪುಟದ ಶ್ರೀಮಂತ ಸಚಿವರತ್ತ ಗಮನ ಹರಿಸಿದರೆ, ಸಂಪುಟ ವಿಸ್ತರಣೆಗೂ ಮುನ್ನ ಐವರು ಕೋಟ್ಯಧಿಪತಿಗಳನ್ನು ಹೊಂದಿದ್ದ ಮೋದಿ ಅವರು ಈಗ 7 ಜನ ಶ್ರೀಮಂತ ಜನಪ್ರತಿನಿಧಿಗಳನ್ನು ತಮ್ಮ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆ. [ಗ್ಯಾಲರಿ :ಮೋದಿ ಸಂಪುಟದ ಹೊಸ ಸಚಿವರು]

ಮೊದಲಿದ್ದ ಐವರ ಪೈಕಿ ಗೋಪಿನಾಥ್ ಮುಂಡೆ ಅವರು ಅಕಾಲಿಕ ಮರಣ ಹೊಂದಿದ್ದಾರೆ. ಮಹಾರಾಷ್ಟ್ರದ ಬೀಡ್ ಕ್ಷೇತ್ರದ ದಿವಂಗತ ನಾಯಕ ಗೋಪಿನಾಥ್ ಮುಂಡೆ ಅವರು 38 ಕೋಟಿ ರು ಘೋಷಿಸಿದ್ದರು.ಈ ಬಾರಿಯ ಪಟ್ಟಿಯಲ್ಲಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರನ್ನು ಟಿಡಿಪಿ ರಾಜ್ಯಸಭಾ ಸದಸ್ಯ ವೈಎಸ್ ಚೌಧರಿ ಹಿಂದಿಕ್ಕಿದ್ದಾರೆ. ಸದ್ಯಕ್ಕೆ ಮೋದಿ ಸಂಪುಟದಲ್ಲಿ 189 ಪ್ಲಸ್ ಕೋಟಿ ರು ಆದಾಯ ಹೊಂದಿರುವ ವೈಎಸ್ ಚೌಧರಿ ಅತ್ಯಂತ ಶ್ರೀಮಂತ ಸಚಿವ.

ಮೊದಲಿಗೆ ಕಡಿಮೆ ಆಸ್ತಿ ಹೊಂದಿರುವವರ ವಿವರ

ಮೊದಲಿಗೆ ಕಡಿಮೆ ಆಸ್ತಿ ಹೊಂದಿರುವವರ ವಿವರ

ಮೋದಿ ಸಂಪುಟದ 64 ಸಚಿವರ ಪೈಕಿ 5 ಸಚಿವರು ಮಾತ್ರ 1 ಕೋಟಿ ರು.ಗೂ ಕಡಿಮೆ ಗಳಿಕೆ ಹೊಂದಿದ್ದಾರೆ. ಅತ್ಯಂತ ಕಡಿಮೆ ಆಸ್ತಿ ಇರುವ ಸಚಿವರಲ್ಲಿ ಅತ್ಯಂತ ಕಡಿಮೆ ಆಸ್ತಿ ಇರುವ ಸಚಿವರಲ್ಲಿ
* ಸಾಧ್ವಿ ನಿರಂಜನ್ ಜ್ಯೋತಿ (37 ಲಕ್ಷ ರು)
* ಮನ್ಸುಖ್‌ಭಾಯಿ ಧನ್‌ಜೀ ಭಾಯಿ ವಾಸವ (ರೂ. 65 ಲಕ್ಷ),
* ತಾವರ್‌ಚಂದ್ ಗೆಹ್ಲೋಟ್ (86),
* ಸುದರ್ಶನ್ ಭಗತ್ (90 ಲಕ್ಷ),
* ರಾಮ್‌ವಿಲಾಸ್ ಪಾಸ್ವಾನ್ (96 ಲಕ್ಷ)
* ಸಂಜೀವ ಕುಮಾರ್ ಬಲ್ಯನ್ (1 ಕೋಟಿ)

 ಮೋದಿ ಸಂಪುಟದ ಶ್ರೀಮಂತರು: ಚೌಧರಿ #1

ಮೋದಿ ಸಂಪುಟದ ಶ್ರೀಮಂತರು: ಚೌಧರಿ #1

ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ರಾಜ್ಯಸಭಾ ಸದಸ್ಯ ಯಲಮಂಚಿಲಿ ಸತ್ಯನಾರಾಯಣ ಚೌಧರಿ ಅವರ ಆದಾಯ 1,89,69,51,681 ರು ಮೀರುತ್ತದೆ. ಇವರು ಪ್ಯಾನ್ ಕಾರ್ಡ್ ವಿವರವನ್ನು ಸಲ್ಲಿಸಿದ್ದಾರೆ.

ಮೋದಿ ಸಂಪುಟದ ಶ್ರೀಮಂತರು: ಜೇಟ್ಲಿ #2

ಮೋದಿ ಸಂಪುಟದ ಶ್ರೀಮಂತರು: ಜೇಟ್ಲಿ #2

ಅಮೃತಸರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿರುವ ಅರುಣ್ ಜೇಟ್ಲಿ ಅವರು ಸುಮಾರು 113.02 ಕೋಟಿ ರು ಆಸ್ತಿ ಘೋಷಿಸಿದ್ದರು. ಅವರ ಪತ್ನಿ ಸಂಗೀತಾ ಆಸ್ತಿ ಸೇರಿದಂತೆ ಸ್ಥಿರಾಸ್ತಿ 75.7 ಕೋಟಿ ರು ಹಾಗೂ ಚರಾಸ್ಥ್ತಿ 37.32 ಕೋಟಿ ರು ಇದೆ ಎಂದು ಅಫಿಡವಿಟ್ ಸಲ್ಲಿಸಿದ್ದರು.

ಪೋರ್ಶೆ ಕಾರು(1 ಕೋಟಿ ರು) ಮರ್ಸಿಡೀಸ್ ಬೆಂಜ್ (78.89 ಲಕ್ಷ), ಹೋಂಡಾ ಅಕಾರ್ಡ್ (20.44 ಲಕ್ಷ), ಟಯೋಟಾ ಫಾರ್ಚೂನರ್ (23.28 ಲಕ್ಷ) ಎಲ್ಲವೂ ಸೇರಿ 3.10 ಕೋಟಿ ರು, 1.35 ಕೋಟಿ ನಗದು, ಬ್ಯಾಂಕ್ ಬ್ಯಾಲೆನ್ಸ್ 18.01 ಕೋಟಿ ರು, 10.7 ಕೋಟಿ ರು ಸಾಲ ಇದರ ಜಗೆ 23.44 ಲಕ್ಷಕ್ಕೂ ಅಧಿಕ ಆಭರಣಗಳನ್ನು ಹೊಂದಿದ್ದಾರೆ.

 ಮೋದಿ ಸಂಪುಟದ ಶ್ರೀಮಂತರು: ಹರ್ಸಿಮ್ರತ್ #3

ಮೋದಿ ಸಂಪುಟದ ಶ್ರೀಮಂತರು: ಹರ್ಸಿಮ್ರತ್ #3

ಶಿರೋಮಣಿ ಅಕಾಲಿದಳ ನಾಯಕಿ, ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ಅವರು ಪಂಜಾಬಿನ ಬಟಿಂಡಾ ಕ್ಷೇತ್ರದ ಸಂಸದೆ ಸುಮಾರು 108.14 ಕೋಟಿ ರು ಆಸ್ತಿ ಘೋಷಿಸಿದ್ದರು. ಕಳೆದ ಚುನಾವಣೆಗೆ ಹೋಲಿಸಿದರೆ ಶೇ 80ರಷ್ಟು ಏರಿಕೆ ಕಂಡು ಬಂದಿದೆ.

ಹರ್ ಸಿಮ್ರತ್ ಕೌರ್ ಬಾದಲ್ ಅವರು 2009ರಲ್ಲಿ ಕೇವಲ 60 ಕೋಟಿ ರು ಹೊಂದಿದ್ದರು. ಸಿಮ್ರತ್ ಕೌರ್ ಹಾಗೂ ಅವರ ಪತಿ ಪಂಜಾಬ್ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಸೇರಿ ಘೋಷಿತ ಚರಾಸ್ತಿ 46.70 ಕೋಟಿ, ಸ್ಥಿರಾಸ್ತಿ 61.44 ಕೋಟಿ, 1.94 ಕೋಟಿ ಮೌಲ್ಯದ ಆಭರಣ ಹೊಂದಿದ್ದಾರೆ. ಯಾವುದೇ ವಾಹನ ಹೊಂದಿಲ್ಲ, ಪತಿ ಎರಡು ಟ್ರ್ಯಾಕ್ಟರ್ ಹೊಂದಿದ್ದು ಮೌಲ್ಯ 5.50 ಲಕ್ಷ ರು.

ಮೋದಿ ಸಂಪುಟದ ಶ್ರೀಮಂತರು: ಜಯಂತ್ ಸಿನ್ಹಾ #4

ಮೋದಿ ಸಂಪುಟದ ಶ್ರೀಮಂತರು: ಜಯಂತ್ ಸಿನ್ಹಾ #4

ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದ ಬಿಜೆಪಿ ಸಂಸದ ಜಯಂತ್ ಸಿನ್ಹಾ ಅವರ ಆಸ್ತಿ 55 ಕೋಟಿ ರು ಮೀರುತ್ತದೆ. 55,67,54,579 ರು ಆದಾಯ ಹೊಂದಿದ್ದಾರೆ. ಇವರು ಪ್ಯಾನ್ ಕಾರ್ಡ್ ವಿವರವನ್ನು ಸಲ್ಲಿಸಿದ್ದಾರೆ.

ಮೋದಿ ಸಂಪುಟದ ಶ್ರೀಮಂತರು: ಮಹೇಶ್ ಶರ್ಮ #5

ಮೋದಿ ಸಂಪುಟದ ಶ್ರೀಮಂತರು: ಮಹೇಶ್ ಶರ್ಮ #5

ಉತ್ತರಪ್ರದೇಶದ ಗೌತಮ್ ಬುದ್ಧ್ ನಗರ ಕ್ಷೇತ್ರದ ಬಿಜೆಪಿ ಸಂಸದ ಮಹೇಶ್ ಶರ್ಮ ಅವರ ಆಸ್ತಿ 47 ಪ್ಲಸ್ ಕೋಟಿ (47,37,97,545 ರು). ಇವರು ಪ್ಯಾನ್ ಕಾರ್ಡ್ ವಿವರವನ್ನು ಸಲ್ಲಿಸಿದ್ದಾರೆ.

ಮೋದಿ ಸಂಪುಟದ ಶ್ರೀಮಂತರು: ಮೇನಕಾ ಗಾಂಧಿ #6

ಮೋದಿ ಸಂಪುಟದ ಶ್ರೀಮಂತರು: ಮೇನಕಾ ಗಾಂಧಿ #6

ಉತ್ತರ ಪ್ರದೇಶದ ಫಿಲಿಬಿತ್ ಕ್ಷೇತ್ರದ ಸಂಸದೆ ಹಾಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು 37.41 ಕೋಟಿ ರು ಘೋಷಿಸಿದ್ದರು. 12.46 ಚರಾಸ್ತಿ ಹಾಗೂ ಸ್ಥಿರಾಸ್ತಿ 24.95 ಕೋಟಿ ರು.

ಆದರೆ , ಕಾರು ಅಥವಾ ವಾಹನ ಹೊಂದಿಲ್ಲ ಎಂದಿದ್ದರು. ಬ್ಯಾಂಕ್ ಗಳಲ್ಲಿ 6 ಕೋಟಿ ರು ಬ್ಯಾಲೆನ್ಸ್ ಹೊಂದಿರುವ ಮನೇಕಾ ಗಾಂಧಿ ಅವರು 1.47 ಕೋಟಿ ರು ಆಭರಣ ಹೊಂದಿದ್ದಾರೆ, 39,365 ನಗದು ಮಾತ್ರ ಕೈಯಲ್ಲಿದೆ, 40,000 ಮೌಲ್ಯದ ರೈಫಲ್ ಹೊಂದಿದ್ದಾರೆ. 6.95 ಕೋಟಿ ಮೌಲ್ಯದ ನಿವೇಶನ, 18 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ.

ಮೋದಿ ಸಂಪುಟದ ಶ್ರೀಮಂತರು: ಪಿಯೂಶ್ ಗೋಯಲ್ #7

ಮೋದಿ ಸಂಪುಟದ ಶ್ರೀಮಂತರು: ಪಿಯೂಶ್ ಗೋಯಲ್ #7

ಮುಂಬೈನ ಪಿಯೂಷ್ ಗೋಯಲ್ ಅವರು ಮೋದಿ ಸಂಪುಟದ ಸಚಿವರಾಗಿದ್ದು 2,94,901 ನಗದು, 1 ಕೋಟಿ ರು ಅಧಿಕ ಬ್ಯಾಂಕ್ ಬ್ಯಾಲೆನ್ಸ್, 24 ಕೋಟಿ ಬಾಂಡ್, 1 ಕೋಟಿ ರು ಗೂ ಅಧಿಕ ಆಭರಣ ಸೇರಿ 30 ಪ್ಲಸ್ ಕೋಟಿ ರು ಘೋಷಿಸಿದ್ದರು.

ವಾಜಪೇಯಿ ಸಂಪುಟದಲ್ಲಿದ್ದ ವೇದ್ ಪ್ರಕಾಶ್ ಗೋಯಲ್ ಅವರ ಪುತ್ರ ಪಿಯೂಷ್ ಅವರು ಬಹುಕಾಲದಿಂದ ಪಕ್ಷದ ಖಜಾಂಚಿಯಾಗಿದ್ದು, ಮೋದಿ ಸ್ಪರ್ಧಿಸಿದ್ದ ವಡೋದರಾದಲ್ಲಿ ಪಿಯೂಷ್ ಸ್ಪರ್ಧಿಸುವ ಸಾಧ್ಯತೆಯಿದೆ.

English summary
Prime Minister Narendra Modi in his first cabinet reshuffle on Sunday (Nov 9) inducted 21 new ministers, including cabinet and ministers of state. Hence, it is important for you to know about their financial condition i.e. who amongst the newly inducted ministers in the NDA government is the richest and who is the poorest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X