ಎಐಎಡಿಎಂಕೆ ಚಿನ್ಹೆಗಾಗಿ ಲಂಚ: ಯಾರು ಈ ಚಾಲಾಕಿ ಮಧ್ಯವರ್ತಿ?

ಸುಕೇಶ್ ಚಂದ್ರಶೇಖರನ್ ಈ ದಿನ ಹೆಚ್ಚು ಸುದ್ದಿಯಲ್ಲಿರುವ ಹೆಸರು. ಶಶಿಕಲಾ ಅವರ ಸಂಬಂಧಿ ಟಿಟಿವಿ ದಿನಕರನ್ ಅವರ ಪರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿ.

ಬೆಂಗಳೂರು, ಏಪ್ರಿಲ್ 17: ಸುಕೇಶ್ ಚಂದ್ರಶೇಖರನ್ ಈ ದಿನ ಹೆಚ್ಚು ಸುದ್ದಿಯಲ್ಲಿರುವ ಹೆಸರು. ಶಶಿಕಲಾ ಅವರ ಸಂಬಂಧಿ ಟಿಟಿವಿ ದಿನಕರನ್ ಅವರ ಪರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿ.

ತಮಾಷೆ ವಿಷಯವೆಂದರೆ ಎಐಎಡಿಎಂಕೆ ಅಧಿನಾಯಕಿ ಜೆ ಜಯಲಲಿತಾ ಹಾಗೂ ಈ ಮಧ್ಯವರ್ತಿ ಸುಕೇಶ್ ಚಂದ್ರಶೇಖರನ್ ಇಬ್ಬರು ಬೆಂಗಳೂರಿನ ರೆಸಿಡೆನ್ಸಿ ಶಾಲೆಯ ಪ್ರತಿಷ್ಠಿತ ಶಾಲೆಯ ಅಲುಮ್ನಿಗಳು.[ಶಶಿಕಲಾರನ್ನು ಜೈಲಿನಿಂದ ಹೊರತರಬಲ್ಲೆ : ಡೀಲರ್]

ಎರಡು ಹಸಿರು ಎಲೆಗಳ ಚಿನ್ಹೆಯನ್ನು ಎಐಎಡಿಎಂಕೆಗೆ ಕೊಡಿಸುವುದಾಗಿ ಭರವಸೆ ನೀಡಿ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಮುಂದಾಗಿದ್ದ ಸುದ್ದಿ ತಿಳಿದಿರಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿವಿ ದಿನಕರನ್ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. [ತಮಿಳುನಾಡಿನಲ್ಲಿ ಮತ್ತೊಂದು ಹೈಡ್ರಾಮ, ಎಐಎಡಿಎಂಕೆ ಬಣಗಳ ವಿಲೀನ?]

Meet the conman from Bengaluru who promised Dinakaran the AIADMK symbol

ಡೀಲ್ ಖುದುರಿಸುವುದಾಗಿ ಹೇಳಿದ್ದ ಸುಕೇಶ್ ಬೆಂಗಳೂರು ಮೂಲದವರು. ದಿನಕರನ್ ಜತೆ 50 ಕೋಟಿ ರು ಡೀಲ್ ಮಾಡಿಕೊಂಡಿದ್ದು, ಅಧಿಕಾರಿಗಳಿಗೆ ಲಂಚ ತಿನ್ನಿಸಿ ಎಐಎಡಿಎಂಕೆ ಚಿನ್ಹೆ ಕೊಡಿಸುವುದಾಗಿ ಸುಕೇಶ್ ಭರವಸೆ ನೀಡಿದ್ದರು.ದೆಹಲಿಯ ಹಯಾತ್ ಹೋಟೆಲ್ ನಲ್ಲಿ ಸುಕೇಶ್ ನನ್ನು ಬಂಧಿಸಿದಾಗ ಹೊಟೆಲ್ ರೂಮಿನಲ್ಲಿ 1.3ಕೋಟಿರು ಹಾಗೂ ಹೊರಗಡೆ ನಿಲ್ಲಿಸಿದ್ದ ಮರ್ಸಿಡೀಸ್ ಬೆಂಜ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+