ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿ ಪಾಲಿಕೆ ಚುನಾವಣೆ ಎಕ್ಸಿಟ್ ಪೋಲ್: ಎಎಪಿಗೆ ಭಾರಿ ಗೆಲುವು

|
Google Oneindia Kannada News

ದೆಹಲಿ, ಡಿಸೆಂಬರ್ 5: ರಾಷ್ಟ್ರ ರಾಜಧಾನಿ ದೆಹಲಿಯ ಮೂರು ಮಹಾನಗರ ಪಾಲಿಕೆಗಳಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಇದು ಅಗ್ನಿ ಪರೀಕ್ಷೆಯಾಗಿದ್ದು, ಎಎಪಿ ಗೆ ಭಾರಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

ದಿಲ್ಲಿ ಮಹಾ ನಗರ ಪಾಲಿಕೆ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಲಿದೆ. ಬಿಜೆಪಿ ಮತ್ತು ಎಎಪಿ ನಡುವೆ ಇಲ್ಲಿ ನೇರ ಪೈಪೋಟಿ ಏರ್ಪಟ್ಟಿದೆ. ಇತ್ತ ಇನ್ನೊಂದೆಡೆ ದಿಲ್ಲಿಯ ಆಡಳಿತಾರೂಢ ಎಎಪಿ ಸರ್ಕಾರ, ಸ್ಥಳೀಯ ಸಂಸ್ಥೆಯಲ್ಲಿಯೂ ತನ್ನ ಹಿಡಿತ ಸಾಧಿಸುವ ಉತ್ಸಾಹದಲ್ಲಿದೆ ಎನ್ನಲಾಗಿದೆ. ಇನ್ನೂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನ ಅಂತ್ಯಗೊಳಿಸಲು ಎಎಪಿ ಸಜ್ಜಾಗಿದೆ. ಹಾಗಾದರೆ ಯಾರಿಗೆ ಗೆಲುವು ಸಿಗಬಹುದು? ಮತದಾರರ ಒಲವು ಯಾರ ಕಡೆಗೆ ಇದೆ ಎಂಬ ಚುನಾವಣೋತ್ತರ ಸಮೀಕ್ಷೆಯ ಮಾಹಿತಿಯ ವಿವರ ಇಲ್ಲಿದೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆ, ಮತದಾನ ಆರಂಭ ದೆಹಲಿ ಮಹಾನಗರ ಪಾಲಿಕೆ ಚುನಾವಣೆ, ಮತದಾನ ಆರಂಭ

250 ವಾರ್ಡ್‌ಗಳ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 149- 171 ಸೀಟುಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೆ- ಆಕ್ಸಿಸ್ ಮೈ ಇಂಡಿಯಾ ನಡೆಸಿರುವ ಸಮೀಕ್ಷೆ ಹೇಳಿದೆ. ಆಡಳಿತಾರೂಢ ಬಿಜೆಪಿ ಸೀಟುಗಳು 69- 91 ವಾರ್ಡ್‌ಗಳಿಗೆ ಕುಸಿಯಲಿದೆ ಎಂದು ಹೇಳಿದೆ. ಕಾಂಗ್ರೆಸ್ 3 ರಿಂದ 7 ಹಾಗೂ ಇತರರು 5- 9 ವಾರ್ಡ್‌ಗಳಲ್ಲಿ ಗೆಲ್ಲಬಹುದು.

MCD Exit polls Exit polls predict AAP sweeps in Delhi corporation

ಇನ್ನೂ ಟೈಮ್ಸ್‌ ನೌ- ಇಟಿಜಿ ಸಮೀಕ್ಷೆ ಕೂಡ ಎಎಪಿ ಪಕ್ಷದ ಗೆಲುವನ್ನ ಊಹಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಪಕ್ಷವು 146- 156 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಟೈಮ್ಸ್ ನೌ ಹೇಳಿದೆ. ಬಿಜೆಪಿ 84- 94 ವಾರ್ಡ್‌ಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ. ಇನ್ನು ಕಾಂಗ್ರೆಸ್ 6-10 ವಾರ್ಡ್‌ಗಳು ಹಾಗೂ ಇತರರು 0-4 ಸೀಟುಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
MCD Exit polls Exit polls predict AAP sweeps in Delhi corporation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X