ಮಥುರಾದಲ್ಲಿ ಉದ್ವಿಗ್ನ ಪರಿಸ್ಥಿತಿ, ಪೊಲೀಸರು ಸೇರಿ 21 ಮಂದಿ ಸಾವು

Posted By:
Subscribe to Oneindia Kannada

ಮಥುರಾ(ಉತ್ತರಪ್ರದೇಶ), ಜೂನ್ 03: ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಭೂ ಒತ್ತುವರಿ ತೆರವುಗೊಳಿಸಲು ಮುಂದಾದ ಪೊಲೀಸರ ಮೇಲೆ ದುಷ್ಕರ್ಮಿಗಳು ಕಲ್ಲೆಸೆದು ಗಲೆಭೆ ಮಾಡಿದ್ದಾರೆ. ಈ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 21 ಪೊಲೀಸರು ಮೃತಪಟ್ಟಿದ್ದರೆ, 40ಜನ ಗಾಯಗೊಂಡಿದ್ದಾರೆ.

ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರು ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿ, ಮೃತ ಪೊಲೀಸರ ಕುಟುಂಬಗಳಿಗೆ 20 ಲಕ್ಷ ರು ಪರಿಹಾರ ಧನ ಘೋಷಿಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಘಟನೆ ಬಗ್ಗೆ ವಿವರಗಳನ್ನು ಕೇಳಿದ್ದಾರೆ. ಘಟನಾವಳಿಯ ಮುಖ್ಯಾಂಶಗಳು ಹೀಗಿದೆ:

Mathura: 2 cops among 21 dead in encroachers-police clash, over 40 injured

* ಅಲಹಾಬಾದ್ ಹೈಕೋರ್ಟ್ ಆದೇಶದ ಅನ್ವಯ ಮಥುರಾ ಜಿಲ್ಲೆಯ ಜವಾಹರ್​ಬಾಗ್​ನಲ್ಲಿ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸಲು ಪೊಲೀಸರು ಮುಂದಾದರು. ಈ ಸಂದರ್ಭದಲ್ಲಿ ಅಜಾದ್ ಭಾರತ್ ವಿಧಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿ ಸಂಘದ ಕಾರ್ಯಕರ್ತರು ಎನ್ನಲಾದ ಗುಂಪೊಂದು ಗಲಭೆ ನಡೆಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಇಬ್ಬರು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೇದೆ ಸೇರಿದಂತೆ ಒಟ್ಟು 21 ಮಂದಿ ಸಾವಿಗೀಡಾಗಿದರು.
* ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎಸ್ಪಿ ಮುಕುಲ್ ದ್ವಿವೇದಿ ಹಾಗೂ ಅವರ ಬೆಂಗಾವಲಿಗಿದ್ದ ಪೇದೆ ಸಂತೋಷ್ ಯಾದವ್ ತಲೆಗೆ ಬಲವಾದ ಗುಂಡೇಟು ಬಿದ್ದು ಸಾವಿಗೀಡಾಗಿದ್ದಾರೆ.
* ಸಾವಿರಾರು ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದರು. 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತ ಅಧಿಕಾರಿಗಳ ಕುಟುಂಬದ ನೋವು ಮುಗಿಲು ಮುಟ್ಟಿದೆ.
* ಸ್ವಾಧೀನಭಾರತ್ ಸುಭಾಷ್ ಸೇನಾ ಹೆಸರಿನ ಸಂಘಟನೆ, ತಾವು ಸುಭಾಷ್​ಚಂದ್ರ ಬೋಸ್ ಅನುಯಾಯಿಗಳು ಎಂದು ಹೇಳಿಕೊಂಡು 280 ಎಕರೆ ಪ್ರದೇಶವನ್ನು ಎರಡು ವರ್ಷಗಳಿಂದ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದವರನ್ನು ಜಿಲ್ಲಾಡಳಿತ ತೆರವುಗೊಳಿಸಲು ಮುಂದಾಗಿತ್ತು.
* ಈ ಪ್ರದೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಸ್ವಾಧೀನಭಾರತ್ ಸುಭಾಷ್ ಸೇನಾ ಹೆಸರಿನ ಸಂಘಟನೆ ಮೂಲಕ ಎರಡು ವರ್ಷದಿಂದ ಅಕ್ರಮವಾಗಿ ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರು. ಈ ಸಂಬಂಧ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಬಿಗಿ ಕ್ರಮ ಜರುಗಿಸಿ ಒತ್ತುವರಿ ದಾರರನ್ನು ತೆರವು ಮಾಡಿ ಎಂದು ಜಿಲ್ಲಾಡಳಿತಕ್ಕೆ ಹೈಕೋರ್ಟ್ ಆದೇಶ ನೀಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A superintendent of police (SP), a constable and five protesters were killed and over 40 people injured in clashes during a drive to evict illegal occupants of a land in Mathura district today.
Please Wait while comments are loading...