ಚಮೋಲಿಯಲ್ಲಿ ಭಾರಿ ಭೂಕುಸಿತ: ವಾಹನ ಸಂಚಾರ ಆರಂಭ
ಉತ್ತರಖಂಡದ ಚಮೋಲಿಯಲ್ಲಿ ಭಾರಿ ಭೂಕುಸಿತದ ನಂತರ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಪುನ: ಆರಂಭಗೊಳಿಸಲಾಗಿದೆ.
ಚಮೋಲಿಯಲ್ಲಿ ಗುರುವಾರ (ಮೇ 4) ಭಾರಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಸದ್ಯ ರಸ್ತೆ ಮಾರ್ಗವನ್ನು ಸುಲಭಗೊಳಿಸಲಾಗಿದೆ. ಶುಕ್ರವಾರ (ಮೇ 5) ಮುಳುಗಡೆ ಪೀಡಿತ ಜೋಶಿಮಠದ ಬಳಿ ಹೆಲಂಗ್ ರಸ್ತೆಯಲ್ಲಿ ಬಿದ್ದ ಅವಶೇಷಗಳನ್ನು ತೆಗೆದ ನಂತರ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಪುನಃ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ (ಮೇ 4) ಭೂಕುಸಿತದ ನಂತರ ಈ ರಸ್ತೆಯನ್ನು ನಿರ್ಬಂಧಿಸಲಾಗಿತ್ತು. ಸದ್ಯ ಸಂಚಾರವನ್ನು ಪ್ರಾರಂಭಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮಾಹಿತಿ ಅಧಿಕಾರಿ ರವೀಂದ್ರ ನೇಗಿ ತಿಳಿಸಿದ್ದಾರೆ. ಅವಶೇಷಗಳ ರಾಶಿಯನ್ನು ಹೆದ್ದಾರಿಯಿಂದ ತೆಗೆದುಹಾಕಲಾಗಿದೆ ಮತ್ತು ಹಿಮಾಲಯ ದೇವಸ್ಥಾನಕ್ಕೆ ಸಂಚಾರವನ್ನು ಪುನಃಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಸದ್ಯ ಹೆದ್ದಾರಿಯಲ್ಲಿ ಭೂಕುಸಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸೆರೆಯಾಗಿದೆ. ಜೊತೆಗೆ ವಾಹನಗಳು ಸುಗಮವಾಗಿ ಸಂಚರಿಸುವ ವಿಡಿಯೋಗಳು ವೈರಲ್ ಆಗಿವೆ.
#WATCH | Uttarakhand: Badrinath National Highway blocked near Helang village in Chamoli district due to heavy debris coming down from a hill. pic.twitter.com/hjOuRtpIAH
— ANI UP/Uttarakhand (@ANINewsUP) May 4, 2023
ಬದರಿನಾಥಕ್ಕೆ ಭೇಟಿ ನೀಡಿದ ಚಮೋಲಿ ಡಿಎಂ:
ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಅವರು ಶುಕ್ರವಾರ ಬದರಿನಾಥದಲ್ಲಿ ಯಾತ್ರಾರ್ಥಿಗಳ ಪ್ರಯಾಣದ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ವೇಳೆ ಅವರು ತಮ್ಮ ಗುರುತಿಸುವಿಕೆಯನ್ನು ತಪ್ಪಿಸಲು ಸಾಮಾನ್ಯ ಯಾತ್ರಿಕರಂತೆ ಹೂಡಿ ಧರಿಸಿ, ಖುರಾನಾ ಹೊಸ ಸರತಿ ನಿರ್ವಹಣಾ ವ್ಯವಸ್ಥೆಯಡಿ ಟೋಕನ್ ಪಡೆದು ಬದರಿನಾಥಕ್ಕೆ ಭೇಟಿ ನೀಡಿದರು ಎಂದು ಹೆಚ್ಚುವರಿ ಜಿಲ್ಲಾ ಮಾಹಿತಿ ಅಧಿಕಾರಿ ರವೀಂದ್ರ ನೇಗಿ ತಿಳಿಸಿದ್ದಾರೆ.
#UPDATE | "The road has been opened and traffic is running smoothly," tweets Chamoli Police, Uttarakhand
— ANI UP/Uttarakhand (@ANINewsUP) May 5, 2023
(Video source: Chamoli Police) pic.twitter.com/ofxG2Vd0o2
ಬಳಿಕ ವ್ಯವಸ್ಥೆಯಲ್ಲಿ ಸುಧಾರಣೆಗೆ ಅಗತ್ಯ ಸೂಚನೆಗಳನ್ನು ನೀಡಿದರು. ಖುರಾನಾ ಅವರು ಪ್ರದೇಶದಲ್ಲಿ ಸೂಚನಾ ಫಲಕಗಳು, ವಿದ್ಯುತ್ ಸರಬರಾಜು ಮತ್ತು ನೀರಿನ ಪೈಪ್‌ಲೈನ್‌ಗಳು ಮತ್ತು ದೇವಾಲಯದ ಶೌಚಾಲಯಗಳ ಸ್ಥಿತಿಯಂತಹ ಮೂಲಭೂತ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಯಾತ್ರಾರ್ಥಿಗಳಿಗೆ ಮೀಸಲಾದ ಸೌಲಭ್ಯಗಳಲ್ಲಿ ಕಂಡು ಬಂದ ಲೋಪದೋಷಗಳನ್ನು ನಿವಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸಾಮಾನ್ಯವಾಗಿ ತಪಾಸಣೆಗಳು ನಡೆದಾಗ, ವ್ಯವಸ್ಥೆಯಲ್ಲಿನ ಕೆಲವು ನ್ಯೂನತೆಗಳು ಮೇಲ್ನೋಟಕ್ಕೆ ಗೋಚರಿಸುವುದಿಲ್ಲ ಎಂದು ಖುರಾನಾ ನಂತರ ಹೇಳಿದರು ಮತ್ತು ಅದಕ್ಕಾಗಿಯೇ ಅವರು ವ್ಯವಸ್ಥೆಗಳನ್ನು ನೇರವಾಗಿ ಅನುಭವಿಸಲು ನಿರ್ಧರಿಸಿ ಸಾಮಾನ್ಯ ಭಕ್ತರಂತೆ ಬದರಿನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಕಂಡು ಬಂತು. ಬಳಿಕ ಮಾತನಾಡಿದ ಅವರು ಅನುಭವವು ವ್ಯವಸ್ಥೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.












Click it and Unblock the Notifications