ಮೋದಿ ಹಾದಿ ಸುಗಮವಾಗದಿರಲು ಇಮ್ರಾನ್ ಖಾನ್ ಪಟ್ಟ ಪ್ರಯತ್ನ ಠುಸ್
Recommended Video
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಯಾಕೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ ಎನ್ನುವ ಕಾಂಗ್ರೆಸ್ ಹೇಳಿಕೆ ಈಗ, ಅವರಿಗೇ ಮುಜುಗರತಂದೊಡ್ಡುವ ಸಾಧ್ಯತೆಯಿದೆ. ಭಾರತ-ಪಾಕ್ ನಡುವಿನ ಸಂಬಂಧ ವೃದ್ದಿಯಾಗಬೇಕಾದರೆ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಇಮ್ರಾನ್ ಇತ್ತೀಚೆಗೆ ಹೇಳಿದ್ದರು.
ಭಾರತವನ್ನು ಸರ್ವನಾಶ ಮಾಡುವುದೇ ನಮ್ಮ ಏಕೈಕ ಉದ್ದೇಶವಾಗಿರಬೇಕೆಂದು ಹೇಳಿಕೆ ನೀಡಿದ್ದ ಧರ್ಮಾಂಧ, ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್ ನನ್ನು ಕೊನೆಯ ಹಂತದವರೆಗೂ ರಕ್ಷಿಸುವ ಚೀನಾ ಮತ್ತು ಪಾಕಿಸ್ತಾನದ ಪಿತೂರಿ ಮತ್ತೆ ಬಯಲಾಗಿದೆ.
ಅಜರ್ ನನ್ನು 'ಜಾಗತಿಕ ಭಯೋತ್ಪಾದಕ' ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಮೇ ಒಂದರಂದು ಘೋಷಣೆ ಮಾಡುವ ಮುನ್ನ, ಆ ನಿರ್ಧಾರವನ್ನು ಮೇ 15ರ ವರೆಗೆ ತಡೆಹಿಡಿಯಲು ಪಾಕಿಸ್ತಾನ, ಚೀನಾದ ಮೂಲಕ ಶತಪ್ರಯತ್ನ ನಡೆಸಿತ್ತು ಎಂದು ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಪುಲ್ವಾಮಾ ದಾಳಿಯ ನಂತರ ಮಸೂದ್ ಅಜರ್ ನನ್ನು 'ಜಾಗತಿಕ ಉಗ್ರ' ಎಂದು ಘೋಷಿಸಬೇಕೆಂದು ಭಾರತ ಭಾರೀ ಒತ್ತಡ ಹೇರಲಾರಂಭಿಸಿತು. ಭಾರತದ ಬೆನ್ನಿಗೆ ರಷ್ಯಾ, ಬ್ರಿಟನ್ ಫ್ರಾನ್ಸ್ ಮತ್ತು ಅಮೆರಿಕ ಕೂಡಾ ನಿಂತಿತ್ತು. ಆದರೆ, ಎಂದಿನಂತೆ, ಪಾಕಿಸ್ತಾನದ ಪಾಲಿಗೆ ದೊಡ್ಡಣ್ಣನಾಗಿರುವ ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಮೇ 15ರ ವರೆಗೆ ತಡೆಹಿಡಿಯಲು ಪಾಕಿಸ್ತಾನ, ಚೀನಾ ಪ್ರಯತ್ನಿಸಿದ್ದು ಮೋದಿಯನ್ನು ತಡೆಯಲು, ಮುಂದೆ ಓದಿ...

ಅಜರ್ ಜಾಗತಿಕ ಉಗ್ರ
ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ ನಂತರ ಪಾಕಿಸ್ತಾನಕ್ಕೆ ಬೇರೆ ದಾರಿಯಿಲ್ಲದೇ ಈಗ, ಆತನಿಗಿರುವ ಎಲ್ಲಾ ಹಣಕಾಸು ಮೂಲಗಳನ್ನು ಮುಟ್ಟುಗೋಲು ಹಾಕುವುದು, ಪಾಕ್ ಬಿಟ್ಟು ಆತನ ಪ್ರವಾಸಕ್ಕೆ ನಿಷೇಧ ಹೇರುವುದು ಮತ್ತು ಶಸ್ತ್ರಾಸ್ತ್ರಗಳನ್ನು ಉಪಯೋಗಿಸದಂತೆ ನಿರ್ಬಂಧ ಹೇರುವುದನ್ನು ಮಾಡಬೇಕಿದೆ.

ಪುಲ್ವಾಮಾ ಹೊಣೆ ವಹಿಸಿಕೊಂಡಿದ್ದ ಅಜರ್ ನೇತೃತ್ವದ ಉಗ್ರ ಸಂಘಟನೆ
ಪುಲ್ವಾಮಾ ದಾಳಿಯ ಹೊಣೆಯನ್ನು ಅಜರ್ ನೇತೃತ್ವದ ಉಗ್ರ ಸಂಘಟನೆ ವಹಿಸಿಕೊಂಡ ನಂತರ, ಚೀನಾ ಹೊರತು ಪಡಿಸಿ ಮಿಕ್ಕೆಲ್ಲಾ ದೇಶಗಳು, ಈತನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ಭದ್ರತಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದವು. ಆದರೆ, ಈ ಉಗ್ರ ಕೃತ್ಯದ ಬಗ್ಗೆ ಇನ್ನಷ್ಟು ಸಾಕ್ಷಿಗಳು ಬೇಕೆಂದು ಚೀನಾ ತಕರಾರು ಎತ್ತಿದ್ದರಿಂದ, ಈ ಘೋಷಣೆ ವಿಳಂಬವಾಯಿತು. (ಅಮೆರಿಕ, ಫ್ರಾನ್ಸ್, ಚೀನಾ, ಬ್ರಿಟನ್ ಮತ್ತು ರಷ್ಯಾ - ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳು).

ಪಾಕಿಸ್ತಾನ, ಚೀನಾದ ಮೂಲಕ ಒತ್ತಡ
ಚೀನಾ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದ ಅಮೆರಿಕ, ಏಪ್ರಿಲ್ 23ರೊಳಗೆ ಅಜರ್ ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಲು ಗಡುವು ನೀಡಿತ್ತು. ಇದಕ್ಕೆ ತಕರಾರು ಎತ್ತಿದ ಪಾಕಿಸ್ತಾನ, ಚೀನಾದ ಮೂಲಕ ಒತ್ತಡ ಹೇರಿ, ಮೇ ಹದಿನೈದರ ನಂತರ ಈ ಘೋಷಣೆಯಾಗಲಿ ಎಂದು ಪಟ್ಟು ಹಿಡಿದಿತ್ತು. ಇದಕ್ಕೆ ಕಾರಣ, ಭಾರತದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ.

ನರೇಂದ್ರ ಮೋದಿ ಲಾಭ ಪಡೆದುಕೊಳ್ಲುತ್ತಾರೆ
ಮೇ ಹದಿನೈದರ ನಂತರ ಘೋಷಣೆಯಾದರೆ ಭಾರತದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಬಹುತೇಕ ಮುಗಿದಿರುತ್ತದೆ. ಅದಕ್ಕೆ ಮುನ್ನ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದರೆ, ಅದರ ಲಾಭವನ್ನು ನರೇಂದ್ರ ಮೋದಿ ಪಡೆದುಕೊಳ್ಲುತ್ತಾರೆ ಎನ್ನುವುದು ಪಾಕಿಸ್ತಾನದ ನಿಲುವಾಗಿತ್ತು ಎನ್ನುವ ಅಂಶ ಬಯಲಾಗಿದೆ.

ಜಾಗತಿಕ ಉಗ್ರ ಎಂದು ಘೋಷಿಸಲು ಒಪ್ಪಿಗೆ
ಆದರೆ, ಇತರ ಖಾಯಂ ಸದಸ್ಯ ರಾಷ್ಟ್ರಗಳ ಕಠಿಣ ನಿಲುವಿನಿಂದ, ಚೀನಾ, ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಒಪ್ಪಿಗೆ ಸೂಚಿಸಿತ್ತು ಎಂದು ಪತ್ರಿಕೆ ವರದಿ ಮಾಡಿದೆ. ಅಲ್ಲಿಗೆ, ಚುನಾವಣೆಯಲ್ಲಿ ನರೇಂದ್ರ ಮೋದಿ ಹಾದಿ ಸುಗಮವಾಗದಿರಲು ಇಮ್ರಾನ್ ಖಾನ್ ಪಟ್ಟ ಪ್ರಯತ್ನ ಠುಸ್ ಆಗಿದೆ. ಇನ್ನೇನಿದ್ದರೂ ಮತದಾರರಿಗೆ ಬಿಟ್ಟಿದ್ದು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications