ಮಂಗಳನಿಂದ ಬಂದ ವಿಡಿಯೋ ನೋಡಿದ್ದೀರಾ?

ನವದೆಹಲಿ, ಅ. 15 : ಮಂಗಳಯಾನ ಮತ್ತೊಂದು ಸಾಧನೆ ಮಾಡಿದೆ. ಮಾರ್ಸ್ ಮಿಷನ್ ಮಂಗಳನ ಅಂಗಳದ ವಿಡಿಯೋವೊಂದನ್ನು ಕಳುಹಿಸಿಕೊಟ್ಟಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಇಸ್ರೋ ವಿಡಿಯೋವನ್ನು ಅಪ್‌ಲೋಡ್‌ ಮಾಡಿದೆ.

ಟ್ವಿಟ್ಟರ್ ನಲ್ಲಿ ವಿಡಿಯೋ ಹಾಕಲಾಗಿದ್ದು ಫೋಟೋಗಳ ರೀತಿಯಲ್ಲಿ ಚಿತ್ರ ಚಲಿಸುವುದನ್ನು ಕಾಣಬಹುದಾಗಿದೆ. ಕ್ಷಣಕ್ಷಣಕ್ಕೆ ಚಿತ್ರದ ಮೇಲ್ಮೈ ಚಿತ್ರಣ ಬದಲಾಗುವುದನ್ನು ಗಮನಿಸಬಹುದಾಗಿದೆ. ಇದು ಸೆಪ್ಟೆಂಬರ್‌ 23 ರಂದು ಸೆರೆಹಿಡಿದಿರುವ ವಿಡಿಯೋವಾಗಿದೆ.[ಮಂಗಳಯಾನದಿಂದ ಮತ್ತೊಂದು ಚಿತ್ರ ಬಂತು]

mars

ಮಂಗಳನ ನೈಸಗರ್ಗಿಕ ಉಪಗ್ರಹಗಳಾದ ಪೋಬೋಸ್ ಮತ್ತು ಡೆಮೋಸ್ ಹತ್ತಿರಕ್ಕೆ ಬಂದಿದ್ದಾಗ ತೆಗೆದ ವಿಡಿಯೋ ಇದಾಗಿದೆ. ಈ ವಿಡಿಯೋ ಚಿತ್ರ ಮಂಗಳನ ಅಂಗಳದ ಮತ್ತಷ್ಟು ಮಾಹಿತಿಯನ್ನು ನೀಡಿದ್ದು ಇನ್ನೂ ಹೆಚ್ಚಿನ ಸಂಶೋಧನೆಗೆ ನೆರವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.[ಮಂಗಳನ ಅಂಗಳದ ಮತ್ತಷ್ಟು ಚಿತ್ರಗಳು]

ಚಲಿಸುವ ಚಿತ್ರದಲ್ಲೇನೀದೆ?
ಪಶ್ಚಿಮದಿಂದ ಪೂರ್ವಕ್ಕೆ ಚಲಿಸುವ ಚಿತ್ರ ಕೆಂಪು ಗ್ರಹದ ಕ್ಷಣ ಕ್ಷಣದ ಬದಲಾವಣೆಗಳನ್ನು ತಿಳಿಸಿಕೊಡುತ್ತದೆ. ಇದು ಮಂಗಳನ ಪರಿಭ್ರಮಣೆಯನ್ನು ತೋರಿಸುತ್ತದೆ. ಮಂಗಳ ತನ್ನ ಸುತ್ತ ತಾನೇ ಸುತ್ತುವಾಗ ಆಗುವ ಬದಲಾವಣೆಗಳನ್ನು ಅತಿ ಹತ್ತಿರದಿಂದ ನೋಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+