ಹಿಂದೂ ದೇಗುಲದಲ್ಲಿ ಇಸ್ಲಾಮಿಕ್‌ ಪದ್ಧತಿಯಂತೆ ವಿವಾಹ

ದೇವಸ್ಥಾನದಲ್ಲಿ ನಡೆದ ಮುಸ್ಲಿಂ ಜೋಡಿಯ ವಿವಾಹ ಸಮಾರಂಭಕ್ಕೆ ಮುಸ್ಲಿಂ ಮತ್ತು ಹಿಂದೂ ಸಮುದಾಯದ ಜನರು ಒಗ್ಗೂಡಿ ಸಾಕ್ಷಿಯಾದರು.

ಶಿಮ್ಲಾ, ಮಾರ್ಚ್‌ 6: ಸಮಾಜಕ್ಕೆ ಧಾರ್ಮಿಕ ಸೌಹಾರ್ದತೆಯ ಸಂದೇಶ ನೀಡಲು ಶಿಮ್ಲಾ ಜಿಲ್ಲೆಯ ರಾಮ್‌ಪುರದ ಹಿಂದೂ ದೇವಾಲಯದ ಆವರಣದಲ್ಲಿ ಭಾನುವಾರ ಮುಸ್ಲಿಂ ಜೋಡಿಯನ್ನು ಇಸ್ಲಾಮಿಕ್ ವಿವಾಹ ಪದ್ಧತಿಯಂತೆ ವಿವಾಹ ಮಾಡಲಾಯಿತು.

ಅಚ್ಚರಿಯಂತೆ ಈ ವಿವಾಹವನ್ನು ವಿಶ್ವ ಹಿಂದೂ ಪರಿಷತ್ತಿನ ಠಾಕೂರ್ ಸತ್ಯನಾರಾಯಣ ದೇವಸ್ಥಾನದ ಆವರಣದಲ್ಲಿ ನೆರವೇರಿತು. ದೇವಸ್ಥಾನದಲ್ಲಿ ನಡೆದ ಮುಸ್ಲಿಂ ಜೋಡಿಯ ವಿವಾಹ ಸಮಾರಂಭಕ್ಕೆ ಮುಸ್ಲಿಂ ಮತ್ತು ಹಿಂದೂ ಸಮುದಾಯದ ಜನರು ಒಗ್ಗೂಡಿ ಸಾಕ್ಷಿಯಾದರು. ಮೌಲ್ವಿ, ಸಾಕ್ಷಿಗಳು ಹಾಗೂ ವಕೀಲರ ಸಮ್ಮುಖದಲ್ಲಿ ದೇವಸ್ಥಾನದ ಆವರಣದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು.

Marriage in Hindu temple as per Islamic custom in Himachal pradesh

ಧಾರ್ಮಿಕ ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಮದುವೆಯನ್ನು ದೇವಸ್ಥಾನದ ಆವರಣದಲ್ಲಿ ಮಾಡಲಾಯಿತು. ಸತ್ಯನಾರಾಯಣ ದೇವಾಲಯ ಸಂಕೀರ್ಣವು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಚೇರಿಯಾಗಿರುವುದು ಇಲ್ಲಿ ಗಮನಾರ್ಹ ಸಂಗತಿ.

ಠಾಕೂರ್ ಸತ್ಯನಾರಾಯಣ ದೇವಸ್ಥಾನ ಟ್ರಸ್ಟ್ ರಾಂಪುರದ ಪ್ರಧಾನ ಕಾರ್ಯದರ್ಶಿ ವಿನಯ್ ಶರ್ಮಾ ಮಾತನಾಡಿ, "ವಿಶ್ವ ಹಿಂದೂ ಪರಿಷತ್ತು ದೇವಸ್ಥಾನ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಚೇರಿಯನ್ನು ಇಲ್ಲಿ ನಡೆಸುತ್ತಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಆರ್‌ಎಸ್‌ಎಸ್ ಆಗಾಗ್ಗೆ ಮುಸ್ಲಿಂ ವಿರೋಧಿ ಎಂದು ಆರೋಪಿಸಲಾಗುತ್ತದೆ. ಆದರೆ ಇಲ್ಲಿ ಮುಸ್ಲಿಂ ದಂಪತಿ ವಿವಾಹವಾದರು. ಹಿಂದೂ ದೇವಾಲಯದ ಆವರಣ, ಸನಾತನ ಧರ್ಮವು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವ ಮೂಲಕ ಮುನ್ನಡೆಯಲು ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ ಎಂದರು.

ಯುವತಿಯ ತಂದೆ ಮಹೇಂದ್ರ ಸಿಂಗ್ ಮಲಿಕ್ ಮಾತನಾಡಿ, ''ರಾಂಪುರದ ಸತ್ಯನಾರಾಯಣ ದೇವಸ್ಥಾನದ ಸಂಕೀರ್ಣದಲ್ಲಿ ಮಗಳ ಮದುವೆಯನ್ನು ಮಾಡಲಾಗಿದೆ. ಈ ಮದುವೆಯನ್ನು ಆಯೋಜಿಸಲು ನಗರದ ಜನರು ವಿಶ್ವ ಹಿಂದೂ ಪರಿಷತ್ ಅಥವಾ ದೇವಾಲಯದ ಟ್ರಸ್ಟ್ ಜೊತೆಗೆ ಸಹಕಾರ ನೀಡಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದರೊಂದಿಗೆ ರಾಂಪುರದ ಜನರು ಜನರಲ್ಲಿ ಸಹೋದರತ್ವದ ಸಂದೇಶವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಅವರು ಹೇಳಿದರು.

ಒಬ್ಬರನ್ನೊಬ್ಬರು ದಾರಿತಪ್ಪಿಸಬಾರದು. ಇದರಿಂದ ಪರಸ್ಪರ ಸಹೋದರತ್ವ ಹಾಳಾಗುತ್ತದೆ. ತಮ್ಮ ಮಗಳು ಎಂಟೆಕ್ ಸಿವಿಲ್ ಇಂಜಿನಿಯರ್ ಮತ್ತು ಚಿನ್ನದ ಪದಕ ವಿಜೇತೆ ಮತ್ತು ಅವರ ಅಳಿಯ ಸಿವಿಲ್ ಇಂಜಿನಿಯರ್ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+