ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾಸ್ಪೋರ್ಟ್ ಪಡೆಯಲು ವಿವಾಹ ಪ್ರಮಾಣ ಪತ್ರ ಬೇಕಾಗಿಲ್ಲ: ಸುಷ್ಮಾ
ನವದೆಹಲಿ, ಜೂನ್ 26: ಭಾರತೀಯ ಪಾಸ್ಪೋರ್ಟ್ ಪಡೆಯಲು ವಿವಾಹ ಪ್ರಮಾಣ ಪತ್ರ ಬೇಕಾಗಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.
"ಪಾಸ್ಪೋರ್ಟ್ ಕಚೇರಿಗಳಲ್ಲಿ ತಮ್ಮ ಮದುವೆ ಪ್ರಮಾಣ ಪತ್ರಗಳನ್ನು ಕೇಳುತ್ತಿದ್ದಾರೆ ಎಂದು ಮದುವೆಯಾದ ಮಹಿಳೆಯರು ಮತ್ತು ಪುರುಷರು ದೂರು ಸಲ್ಲಿಸಿದ್ದರು. ಇದಕ್ಕಾಗಿ ನಾವು ಈ ನಿಯಮಾವಳಿಯನ್ನೇ ತೆಗೆದು ಹಾಕಿದ್ದೇವೆ," ಎಂದು ಸುಷ್ಮಾ ಸ್ವರಾಜ್ ಮಾಹಿತಿ ನೀಡಿದರು.
ತಮ್ಮ ಮಾಜಿ ಪತಿಯ ಹಾಗೂ ಹಿಂದಿನ ಪತಿಯೊಂದಿಗೆ ಪಡೆದ ಮಗುವಿನ ಹೆಸರು ಬರೆಯುವಂತೆ ಸೂಚಿಸಲಾಗುತ್ತಿದೆ ಎಂದು ವಿಚ್ಛೇದನ ಪಡೆದ ಮಹಿಳೆಯರು ದೂರುಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾವು ನಿಯಮಾವಳಿಯಲ್ಲಿ ಬದಲಾವಣೆ ಮಾಡಿದ್ದೇವೆ ಎಂಬುದಾಗಿ ಸುಷ್ಮಾ ಸ್ವರಾಜ್ ವಿವರಿಸಿದರು.
ಇದರಿಂದ ಇನ್ನು ಮುಂದೆ ವಿವಾಹ ಪ್ರಮಾಣ ಪತ್ರವಿಲ್ಲದೆ ಪಾಸ್ಪೋರ್ಟ್ ಪಡೆಯಲು ಸಾಧ್ಯವಾಗಲಿದೆ.