Mark Tully: ಹಿರಿಯ ಪತ್ರಕರ್ತ ಹಾಗೂ ಖ್ಯಾತ ಇತಿಹಾಸಕಾರ ಮಾರ್ಕ್ ಟುಲ್ಲಿ ಇನ್ನಿಲ್ಲ
ಭಾರತೀಯ ಪತ್ರಿಕೋದ್ಯಮಕ್ಕೆ ಇಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ಏಕೆಂದರೆ ಹಿರಿಯ ಪತ್ರಕರ್ತ ಮತ್ತು ಲೇಖಕ ಹಾಗೂ ಭಾರತದ ಅತ್ಯುನ್ನತ ವಿದೇಶಿ ವೀಕ್ಷಕರಲ್ಲಿ ಒಬ್ಬರಾದ, ಮಾರ್ಕ್ ಟುಲ್ಲಿ ಅವರು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. 90 ವರ್ಷ ವಯಸ್ಸಿನಲ್ಲಿ ಮಾರ್ಕ್ ಟುಲ್ಲಿ ಅವರು ಕೊನೆಯುಸಿರು ಎಳೆದಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜನವರಿ 21 ರಂದು ಸಾಕೇತ್‌ನ ಖಾಸಗಿ ಆಸ್ಪತ್ರೆಗೆ ಮಾರ್ಕ್ ಟುಲ್ಲಿ ಅವರನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡುತ್ತಿದ್ದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಅಪಾರ ಸಾಧನೆ ಮಾಡಿದ್ದ ಅವರು ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದರು.
ಅಕ್ಟೋಬರ್ 24, 1935ರಂದು ಬ್ರಿಟಿಷ್ ಪೋಷಕರಿಗೆ ಈಗಿನ ಕೋಲ್ಕತ್ತಾ ನಗರದಲ್ಲಿ ಜನಿಸಿದ್ದರು ಟುಲ್ಲಿ. ಸುಮಾರು 22 ವರ್ಷಗಳ ಕಾಲ ಬಿಬಿಸಿ ನವದೆಹಲಿ ಬ್ಯೂರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಕೀರ್ತಿಯು ಅವರಿಗೆ ಸಲ್ಲುತ್ತದೆ. ಜಾಗತಿಕ ಪ್ರೇಕ್ಷಕರಿಗೆ ಭಾರತೀಯ ವ್ಯವಹಾರಗಳ ಬಗ್ಗೆ ಪರಿಚಿತ & ವಿಶ್ವಾಸಾರ್ಹ ಧ್ವನಿಯಾಗಿ ಅವರು ಗುರುತಿಸಿಕೊಂಡಿದ್ದರು. ಬಿಬಿಸಿ ರೇಡಿಯೋ ಮೂಲಕ ಮಾರ್ಕ್ ಟುಲ್ಲಿ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿ, ಮೂತ್ರಪಿಂಡ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಚಿಕಿತ್ಸೆಗೆ ಸ್ಪಂದಿಸದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

2005ರ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ
ಪತ್ರಕರ್ತರಾಗಿ ಇವರು ಸಾಕ್ಷ್ಯಚಿತ್ರಗಳ ವಿಚಾರದಲ್ಲಿ ಕೂಡ ಅಪಾರ ಖ್ಯಾತಿ ಗಳಿಸಿದ್ದರು, ಭಾರತೀಯ ರೈಲ್ವೆಯ ಇತಿಹಾಸ ಸೇರಿದಂತೆ ಹಲವು ಸಾಕ್ಷ್ಯಚಿತ್ರಗಳನ್ನು ಇವರು ಕೊಡುಗೆಯಾಗಿ ನೀಡಿದ್ದರು. ಈ ಕಾರಣಕ್ಕೂ ಜನ ಸಾಮಾನ್ಯರ ಬದುಕಿಗೆ ಮಾರ್ಕ್ ಟುಲ್ಲಿ ತುಂಬಾ ಹತ್ತಿರವಾಗಿದ್ದರು. ಆಧುನಿಕ ಭಾರತ ಮತ್ತು ಬ್ರಿಟಿಷ್ ಆಳ್ವಿಕೆ ಕಾಲಘಟ್ಟದ ವಿಚಾರಗಳನ್ನು ಕೂಡ ಈಗಿನ ತಲೆಮಾರಿಗೆ ತಿಳಿಸುತ್ತಿದ್ದರು.
ಹೀಗೆ ಎಲ್ಲರ ಪ್ರೀತಿ & ವಿಶ್ವಾಸ ಗಳಿಸಿದ್ದರು, ಈ ಕಾರಣಕ್ಕೆ ಅವರಿಗೆ ಹಲವು ದೊಡ್ಡ ದೊಡ್ಡ ಪ್ರಶಸ್ತಿ ಒಲಿದು ಬಂದಿವೆ. 2005ರ ಸಾಲಿನಲ್ಲಿ ಮಾರ್ಕ್ ಟುಲ್ಲಿ ಅವರಿಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು, ಹಾಗೇ ಭಾರತದ ಬಗ್ಗೆ ಹಲವಾರು ಅತ್ಯದ್ಭುತ ಪುಸ್ತಕಗಳನ್ನು ಬರೆದ ಕೀರ್ತಿಯು ಕೂಡ ಮಾರ್ಕ್ ಟುಲ್ಲಿ ಅವರಿಗೆ ಸಲ್ಲುತ್ತದೆ.
ಮಾರ್ಕ್ ಟುಲ್ಲಿ ನಿಧನಕ್ಕೆ ಗಣ್ಯರಿಂದ ಸಂತಾಪ
ಹಿರಿಯ ಪತ್ರಕರ್ತ ಹಾಗೂ ಇತಿಹಾಸಕಾರ ಮಾರ್ಕ್ ಟುಲ್ಲಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕೋಟ್ಯಂತರ ಜನ ಕಂಬನಿ ಮಿಡಿದಿದ್ದಾರೆ. ಅಲ್ಲದೆ ಹಲವು ರಾಜಕೀಯ ನಾಯಕರು & ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರು ಮಾರ್ಕ್ ಟುಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಾಗೂ ಇದು ಭಾರತೀಯ ಪತ್ರಿಕೋದ್ಯಮ ಮತ್ತು ಇತಿಹಾಸ ವಿಭಾಗಕ್ಕೆ ತುಂಬಲಾಗದ ನಷ್ಟ ಎಂದಿದ್ದಾರೆ ಗಣ್ಯರು. ಹೀಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟುಲ್ಲಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications